ದಾವಣಗೆರೆ : ದಾವಣಗೆರೆ ಎಂಪಿ ಜಿಎಂ ಸಿದ್ದೇಶ್ವರ ವಿರುದ್ಧ ನಗರದ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಮತದಾನ ಗೌಪ್ಯತೆ ಕಾಪಾಡದ ಕಾರಣ ತೋಟಗಾರಿಕೆ ಸಹಾಯಕ ನಿರ್ದೇಶಕ, ಎಫ್ ಎಸ್ ಟಿ ಮುಖ್ಯಸ್ಥ ರಾಜೇಶ್ ಕುಮಾರ್ ದೂರು ದಾಖಲಿಸಿದ್ದಾರೆ.
ದಾವಣಗೆರೆ 106-ವೃತ್ತದ ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಬರುವ ಪಿಎಸ್-236 ಮಾಗನೂರು ಬಸಪ್ಪ ಪಬ್ಲಿಕ್ ಶಾಲೆಯ ಕೊಠಡಿ ಸಂಖ್ಯೆ- 1 ಬೆಳಗ್ಗೆ 09-31 ಗಂಟೆಯಲ್ಲಿ ದಾವಣಗೆರೆಯಲ್ಲಿ ಮತದಾನ ಮಾಡಲು ಬಂದ ಬಿಜೆಪಿ ಅಭ್ಯರ್ಥಿ ಗಾಯಿತ್ರಿ ಸಿದ್ದೇಶ್ವರೊಂದಿಗೆ. ಹಾಲಿ ಬಿಜೆಪಿ ಸಂಸದರು ಮತದಾನ ಮಾಡಿ ಅಲ್ಲೇ ಉಳಿದಿದ್ದರು. ಅಲ್ಲದೆ ಈಗಿನ ಬಿಜೆಪಿ ಅಭ್ಯರ್ಥಿ ಶ್ರೀಮತಿ ಗಾಯಿತ್ರಿ ಸಿದ್ದೇಶ್ವರ್ ರವರು ಮತದಾನ ಮಾಡುತ್ತಿರುವುದನ್ನು ಸಿದ್ದೇಶ್ವರ್ ಜಿ.ಎಂ ರವರು ಬ್ಯಾಲಟ್ ಮಿಷಿನ್ನ್ನು ನೋಡುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ.
ಈ ಸದರಿ ವೀಡಿಯೋವನ್ನು ಬೆಳಗ್ಗೆ 10-48 ಗಂಟೆಯಲ್ಲಿ ನನ್ನ ಮೊಬೈಲ್ಗೆ ವೀಡಿಯೋ ಬಂದಿದ್ದು ನಾನು ನೋಡಿರುತ್ತೇನೆ. ಶ್ರೀ ಜಿ.ಎಂ ಸಿದ್ದೇಶ್ವರ್ ತಮ್ಮ ಹೆಂಡತಿಯ ಮತದಾನ ಮಾಡುವ ಪ್ರಕ್ರಿಯೆಯನ್ನು ನೋಡಿರುವ ಕಾರಣ ಮತದಾನ ಗೌಪ್ಯತೆಯನ್ನು ಕಾಪಾಡಿಲ್ಲ. ಅಲ್ಲದೆ ಚುನಾವಣಾ ಆಯೋಗದ ಆದೇಶಗಳನ್ನು ಉಲ್ಲಂಘನೆ ಮಾಡಿರುವ ಕಾರಣ ಸದರಿ ಜಿ.ಎಂ ಸಿದ್ದೇಶ್ವರ್ ಹಾಲಿ ಸಂಸದರು, ದಾವಣಗೆರೆ ಲೋಕಸಭಾ ಕ್ಷೇತ್ರ ದಾವಣಗೆರೆ ಇವರ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಮಾನ್ಯ ಸಹಾಯಕ ಚುನಾವಣಾಧಿಕಾರಿಗಳು, ದಾವಣಗೆರೆ ಉತ್ತರ ರವರ ಆದೇಶದಂತೆ ದೂರು ನೀಡಿರುತ್ತೇನೆ ಎಂದು ದೂರು ದಾಖಲಿಸಿದ್ದಾರೆ.