ಚನ್ನಗಿರಿ: ಅಖಿಲ ಭಾರತ ಗ್ರಾಮೀಣ ಅಂಚೆ ನೌಕರರ ಸೇವಕರ ಸಂಘದ ನೇತೃತ್ವದಲ್ಲಿ ಸ್ಥಳೀಯ ಅಂಚೆ ನೌಕರರು ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಪಟ್ಟಣದ ಅಂಚೆ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಸಂಘದ ಸದಸ್ಯ ಟಿ.ಕೆ. ಇನಾಯತ್ ಉಲ್ಲಾ, ಮಾತನಾಡಿ ಗ್ರಾಮೀಣ ಅಂಚೆ ನೌಕರರು ಸಾಕಷ್ಟು ವರ್ಷಗಳಿಂದ ಸೇವೆಯನ್ನು ಸಲ್ಲಿಸುತ್ತಾ ಬಂದಿದ್ದಾರೆ.ಆದರೂ ನಮ್ಮ ಸೇವೆ ಪರಿಗಣಿಸಲಾಗಲಿಲ್ಲ.

ಇನ್ನು ಕಮಲೇಶ್‌ಚಂದ್ರ ವೇತನ ಆಯೋಗವನ್ನು ಸಂಪೂರ್ಣ ವರದಿಯನ್ನು ಕೇಂದ್ರ ಜಾರಿಗೊಳಿಸಲಾಗಿಲ್ಲ. ಆದ್ದರಿಂದ ಕೇಂದ್ರ ಸಂಘದ ಆದೇಶದಂತೆ ಅನಿರ್ಧಿಷ್ಟಾವಧಿ ಮುಷ್ಕರ ಕೈಗೊಂಡಿದ್ದೇವೆ ಎಂದು ಹೇಳಿದರು.

ಬೇಡಿಕೆ ಏನು

ಗ್ರಾಮೀಣ ಅಂಚೆ ನೌಕರರಿಗೆ 8 ಗಂಟೆಗಳ ಕಾಲ ಕೆಲಸ ನೀಡುವುದು ಮತ್ತು ಪಿಂಚಣಿ ಸೇರಿದಂತೆ ಎಲ್ಲಾ ಸೌಲಭ್ಯಗಳನ್ನು ಒದಗಿಸಬೇಕು. ಸೇವಾ ಹಿರಿತನದ ಆಧಾರದ ಮೇಲೆ 12, 24, 36 ಸೇವೆ ಸಲ್ಲಿಸಿದ ಜಿ.ಡಿ.ಎಸ್. ನೌಕರರಿಗೆ ವಿಶೇಷ ಇನ್‌ಕ್ರಿಮೆಂಟ್ ನೀಡಬೇಕು.

ಗ್ರಾಚ್ಯೂಯಿಟಿ ಹೆಚ್ಚಿಸಿ

ಗ್ರಾಚ್ಯೂಯಿಟಿ ಮೇಲಿನ ಗರಿಷ್ಟ ಮೊತ್ತವಾದ1.5 ಲಕ್ಷಗಳ ಮಿತಿಯನ್ನು ತೆಗೆದುಹಾಕಿ ಕಮಲೇಶ್‌ಚಂದ್ರ ಸಮಿತಿ ಶಿಪಾರಸ್ಸಿನಿಂತೆ ಗರಿಷ್ಟ 5 ಲಕ್ಷಗಳವರೆಗೆ ಮೊತ್ತವನ್ನು ನೀಡಬೇಕು.

ಜಿ.ಡಿ.ಎಸ್. ನೌಕರರಿಗೆ ಮತ್ತು ಅವರ ಕುಟುಂಬದ ಸದಸ್ಯರಿಗೆ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸಬೇಕು. ಜಿ.ಡಿ.ಎಸ್. ನೌಕರರಿಗೆ ವೇತನ ಸಹಿತ ರಜೆ ನೀಡಬೇಕು. ಮತ್ತು 7 ವೇತನದ ಶಿಫಾರಸ್ಸಿನಂತೆ 180 ದಿನಗಳವರೆಗೆ ರಜೆ ಉಳಿಸಿಕೊಳ್ಳಲು ಅವಕಾಶ ನೀಡಬೇಕು. ಗ್ರೂಪ್ ಇನ್ಷೂಶರೇನ್ಸ್ ಕವರೇಜ್‌ನ್ನು 5 ಲಕ್ಷ ರೂಗಳವರೆಗೆ ಹೆಚ್ಚಿಸಬೇಕು ಎಂದು ಪ್ರತಿಭಟನಾಕಾರರು ಕೇಂದ್ರ ಸರಕಾರಕ್ಕೆ ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಸಂಘದ ವಿಭಾಗೀಯ ಕಾರ್ಯದರ್ಶಿ ಕೆ. ಲಿಂಗರಾಜು, ಸದಸ್ಯರಾದಸ.ಕಾಂತಪ್ಪ, ನಾಗರಾಜು, ಲೋಕೇಶ್‌ನಾಯ್ಕ ಇತರರು ಹಾಜರಿದ್ದರು.

Share.
Leave A Reply

Exit mobile version