ದಾವಣಗೆರೆ ; ಇತ್ತೀಚಿನ ದಿನಗಳಲ್ಲಿ ವಿದ್ಯಾವಂತರು ಮತದಾನ ಮಾಡುತ್ತಿಲ್ಲ…ಆದರೆ ಸರಕಾರ ನೀಡುವ ಸೌಲಭ್ಯಗಳು ಮಾತ್ರ ಬೇಕು ಅಂತಾರೆ…ಯಾರು ಸರಿಯಿಲ್ಲ ಎಂದು ವ್ಯವಸ್ಥೆ ಸರಿಯಿಲ್ಲ ಅಂತ ಬೈತಾರೆ…ಆದ್ದರಿಂದ ಇಲ್ಲೊಬ್ಬರು ಮತದಾನದ ಅರಿವು ಮೂಡಿಸಲು ಮುಂದಾಗಿದ್ದಾರೆ.
ಹೌದು..ಸಾಮಾಜಿಕ ಕಾಳಜಿವುಳ್ಳ ಕೆ.ಬಿ.ಬಡಾವಣೆಯ ನಾಗಭೂಷಣ್ ಈ ಕಾರ್ಯ ಮಾಡಲು ಹೊರಟಿದ್ದಾರೆ. ಅದಕ್ಕಾಗಿ ಕೇಂದ್ರ ಚುನಾವಣೆ ಆಯೋಗಕ್ಕೆ ಪತ್ರ ಬರೆದಿದ್ದಾರೆ.
ನಾಗಭೂಷಣ್ ಹೇಳೋದೇನು?
ಇತ್ತೀಚಿನ ದಿನಗಳಲ್ಲಿ ಚುನಾವಣೆ ಬಂತೆಂದರೆ ಶೇಕಡವಾರು ಮತದಾನ ಕಡಿಮೆಯಾಗಿದೆ ಎಂಬುದು ಚರ್ಚಿತ ವಿಚಾರ. ಲೋಕಸಭೆ, ವಿಧಾನಸಭೆ, ಮಹಾನಗರ ಪಾಲಿಕೆ, ಬಿಬಿಎಂಪಿ, ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಸೇರಿದಂತೆ ಯಾವುದೇ ಚುನಾವಣೆಗಳು ನಡೆದರೂ ಮತದಾನ ಪ್ರಮಾಣ ಹೆಚ್ಚಾಗಬೇಕು. ಮತದಾನ ಮಾಡದವರಿಗೆ ಶಿಕ್ಷೆ ವಿಧಿಸುವಂಥ ಕಾನೂನು ಜಾರಿಯಾಗಬೇಕು. ಸೌಲಭ್ಯಗಳನ್ನು ಕಡಿತಗೊಳಿಸಬೇಕು. ಮತದಾನ ಕಡ್ಡಾಯಗೊಳಿಸುವುದನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕಿದೆ. ಹಾಗಾಗಿ, ಕೆಲವು ಸಲಹೆಗಳ ನಾನು ನೀಡಿದ್ದೇನೆ. ಇವು ಜಾರಿಯಾದರೆ ಮತದಾನ ಪ್ರಮಾಣ ಹೆಚ್ಚಾಗುವುದು ಖಚಿತ ಎಂಬುದು ಅವರ ಅಭಿಪ್ರಾಯ.
ಸರ್ಕಾರಿ ಸೌಲಭ್ಯ ಪಡೆಯಲು:
1. ಮತದಾನ ಕಡ್ಡಾಯ.
2. ಕನಿಷ್ಠ ವಿದ್ಯಾರ್ಹತೆ
3. ಆಧಾರ್ ಕಾರ್ಡ್ ನಂತೆಯೇ ಮತದಾನದ ಸ್ವೀಕೃತಿ, ಕೆವೈಸಿ ಕಡ್ಡಾಯ ಕಟ್ಟುನಿಟ್ಟಾಗಬೇಕು.
4. ಸಾಮಾನ್ಯ ಮನುಷ್ಯನನ್ನು ಆಯ್ಕೆ ಮಾಡಲು ಸಮಾಜಕ್ಕೆ ಒಂದು ಅವಕಾಶ ಹಾಗೂ ಬಂಡವಾಳಶಾಹಿಗಳನ್ನು ಬಗ್ಗುಬಡಿಯುವ ಪ್ರಯತ್ನ.
5. ಶೇಕಡವಾರು ಮತದಾನ ಹೆಚ್ಚಿಸಬಹುದು. ಅದರಿಂದ ಮತದಾನ ಓಲೈಕೆ ಪಿಡುಗು ತಪ್ಪಿಸಬಹುದು.
6. ಮತದಾನ ಮಾಡಿದ ಸ್ವೀಕೃತಿ ಪತ್ರ ಎಲ್ಲಾ ಸೌಲಭ್ಯ ಪಡೆಯಲು ಮಾನದಂಡವಾಗಬೇಕು. ಅದು ನಾಗರಿಕನ ಬದ್ಧತೆಯಾಗಬೇಕು.
7. ಮತದಾನ ಮಾಡಲು ಅವಶ್ಯಕವಿರುವ ಮತದಾನ ಗುರುತಿನ ಚೀಟಿಯನ್ನು ಸರ್ಕಾರದ ಕನಿಷ್ಠ ವಯೋಮಿತಿಗೆ ತಲುಪಿದ ವ್ಯಕ್ತಿಯೂ ಕಡ್ಡಾಯವಾಗಿ ಚುನಾವಣಾಧಿಕಾರಿಗಳ ಕಚೇರಿಗೆ ವೈಯಕ್ತಿಕವಾಗಿ ಹೋಗಿ ಪಡೆಯತಕ್ಕದ್ದು. ಇಲ್ಲವಾದಲ್ಲಿ ವಾರ್ಷಿಕವಾಗಿ ದಂಡ ಪಾವತಿಸಿದರೆ ಮಾತ್ರ ಚೀಟಿ ಪಡೆಯಲು ಅರ್ಹ.
8. ಮತದಾನದ ವೇಳೆಯನ್ನು ಹೆಚ್ಚಿಸಬೇಕು. ಬೂತುಗಳ ಸಂಖ್ಯೆಯನ್ನು ಸಹ ಹೆಚ್ಚಿಸುವುದು ಹಾಗೂ ಚುನಾವಣಾ ಅಧಿಕಾರಿಗಳು ಮತ್ತು ಸಿಬ್ಬಂದಿ ಸಂಖ್ಯೆ ಹೆಚ್ಚಿಸಬೇಕು.
9. ಮತದಾನ ಮಾಡಿದ ಸ್ವೀಕೃತಿ ಆ ಕ್ಷೇತ್ರದ ಇನ್ನೊಂದು ಯಾವುದೇ ಚುನಾವಣೆಯ ತನಕ ಮಾತ್ರ ಮಾನ್ಯತೆ ಇರಬೇಕು.
10. ಚಾಲನಾ ಪರವಾನಗಿ ಪಡೆಯಲು ವಿದ್ಯಾರ್ಹತೆಯನ್ನು ನಿಗದಿಪಡಿಸಿರುವಂತೆ ಸೌಲಭ್ಯ ಪಡೆಯಲು ನಿಗದಿಪಡಿಸೇಕು.
11. ಸೌಲಭ್ಯಗಳನ್ನು ಪಡೆಯಲು ಮೀನಸಲಾತಿ ಮಾನದಂಡವನ್ನೇ ಅಳವಡಿಸಬೇಕು. ಸಾಮಾನ್ಯ ಎನ್ನುವ ಕೆಟಗರಿಯನ್ನು ಸಂಪೂರ್ಣ ರದ್ದುಪಡಿಸಬೇಕು. ಅವರವರ ಕೆಟಗರಿ ಗಳಡಿಯಲ್ಲಿ ಸೌಲಭ್ಯ ಪಡೆಯುವಂತಾಗಬೇಕು.
12. ಯಾವುದಾದರೂ ಅನಿವಾರ್ಯ ಕಾರಣಕ್ಕೆ ಮತದಾನ ಮಾಡಲು ಆಗದಿದ್ದ ಪಕ್ಷದಲ್ಲಿ ಕೋರ್ಟ್ ನ ಮೂಲಕ ಅರ್ಹತೆ ಪಡೆಯಬೇಕು ಮತ್ತು ಅದು ಜೀವಿತಾವಧಿಯಲ್ಲಿ ಮೂರು ಬಾರಿ ಮಾತ್ರ ಅವಕಾಶ ಕೊಡಬೇಕು.
13. ವಿದ್ಯಾವಂತರ ಮತದಾನದ ದಿನ ಹೊರಗೆ ಹೋಗ್ತಾರೆ. ಅವರೂ ಮತದಾನದಿಂದ ವಂಚಿತರಾಗಬಾರದು. ಹೀಗೆ ನಿರ್ಲಕ್ಷ್ಯ ವಹಿಸಿದ್ದು ಸಾಬೀತಾದರೆ ದಂಡದ ಜೊತೆಗೆ ತನ್ನ ಹಕ್ಕು ಚಲಾಯಿಸದ ಕಾರಣ, ನಿರ್ಲಕ್ಷ್ಯ ವಹಿಸಿದ್ದಕ್ಕೆ ಸೌಲಭ್ಯ ಕಡಿತಗೊಳಿಸಬೇಕು.
14. ವಿದ್ಯಾವಂತರು ಮತದಾನದಿಂದ ದೂರ ಉಳಿಯದಂತೆ ಎಚ್ಚರ ವಹಿಸಬೇಕು. ಮತದಾನ ಮಾಡಿದ ಬಳಿಕ ಹೋಗಲಿ. ಮತದಾನದ ದಿನದಂದು ಉದ್ದೇಶಪೂರ್ವಕವಾಗಿ ಹೋದರೆ ಯಾವುದೇ ಕಾರಣಕ್ಕೂ ಶಿಕ್ಷೆಯಿಂದ ವಿನಾಯಿತಿ ನೀಡಬಾರದು.
15. ಪ್ರತಿಯೊಬ್ಬರಿಗೂ ಮತದಾನದ ಹಕ್ಕು ನೀಡಲಾಗಿದೆ. ವೋಟರ್ ಐಡಿ ಪಡೆಯಲು ಮೀನಾಮೇಷ ಎಣಿಸುತ್ತಾರೆ. ಸೂಕ್ತ ಜನಪ್ರತಿನಿಧಿ ಆಯ್ಕೆ ಮಾಡಲು ಮತದಾನದ ಶಕ್ತಿ ಬಳಕೆಯಾಗಬೇಕು.
ಈ ಎಲ್ಲಾ ಅಂಶಗಳು ಜಾರಿಯಾದರೆ ಮತದಾನ ಹೆಚ್ಚಳವಾಗುವುದರಲ್ಲಿ ಸಂಶಯವಿಲ್ಲ. ಈ ಬಗ್ಗೆ ಸೂಕ್ತವಾಗಿ ಪರಿಶೀಲಿಸಿ, ಗಂಭೀರವಾಗಿ ಪರಿಗಣಿಸಿ ಈ ವಿಚಾರಗಳು ಕಟ್ಟುನಿಟ್ಟಾಗಿ ಅನುಷ್ಠಾನಕ್ಕೆ ಬರಬೇಕು ಎಂಬ ದೃಷ್ಟಿಯಿಂದ ಈ ಸಲಹೆಗಳನ್ನು ನೀಡಲಾಗಿದೆ. ತಾವುಗಳು ಗಂಭೀರವಾಗಿ ಪರಿಗಣಿಸಿ ಶೇಕಡವಾರು ಮತದಾನ ಹೆಚ್ಚಳಕ್ಕೆ ಕ್ರಮ ತೆಗೆದುಕೊಳ್ಳಬೇಕು ಎಂದು ಅವರು ಚುನಾವಣಾ ಆಯೋಗಕ್ಕೆ ಮನವಿ ಮಾಡಿದ್ದಾರೆ.