ಶಿವಮೊಗ್ಗ:  ನಿಯಮಗಳನ್ನೆಲ್ಲ ಉಲ್ಲಂಘಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಹೆಸರಿಗೆ ನಿವೇಶನಗಳನ್ನು ಮಂಜೂರು ಮಾಡಲಾಗಿದೆ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಟಿ.ಡಿ.ಮೇಘರಾಜ್ ಆರೋಪಿಸಿದ್ದಾರೆ.

ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸುಪ್ರೀಂ ಕೋರ್ಟ್ ತೀರ್ಪು, ಪಾರದರ್ಶಕ ಕಾಯ್ದೆ ಉಲ್ಲಂಘನೆ ಹಾಗೂ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸದೆ ಮೂಡಾ(ಮೈಸೂರು ನಗರಾಭಿವೃದ್ಧಿ ಪ್ರಾಕಾರ) ನಿವೇಶನಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪತ್ನಿ ಪಾರ್ವತಮ್ಮನವರ ಹೆಸರಿಗೆ ಮಂಜೂರು ಮಾಡಿ ಎಲ್ಲಾ ನಿಯಮಗಳನ್ನು ಉಲ್ಲಂಘಿಸಿರುವುದು ಸ್ಪಷ್ಟವಾಗಿದೆ ಎಂದರು.

ಸ್ವಾಧೀನ ಮಾಡಿಕೊಂಡ ಭೂಮಿಯಲ್ಲಿ 50:50 ಅನುಪಾತದಲ್ಲಿ ಭೂಮಾಲೀಕರಿಗೆ ನಿವೇಶನ ನೀಡಬೇಕೆಂಬ ನಿಯಮವನ್ನು ಉಲ್ಲಂಘಿಸಲಾಗಿದೆ. ಎಲ್ಲಿ ಭೂಸ್ವಾಧೀನ ಆಗಿದೆಯೋ ಅಲ್ಲಿಯೇ ನಿವೇಶನ ನೀಡಬೇಕು. ಆದರೆ 1983 ರಲ್ಲಿ ಅಭಿವೃದ್ಧಿಪಡಿಸಿದ ವಿಜಯನಗರ ಬಡಾವಣೆಯಲ್ಲಿ 14 ಬಿಡಿ ನಿವೇಶನಗಳನ್ನು ನೀಡಲಾಗಿದೆ ಎಂದರು.

ಭೂಸ್ವಾಧೀನಕ್ಕೆ ಸಂಬಂಸಿದಂತೆ ಸುಪ್ರೀಂ ಕೋರ್ಟ್ 2009 ರಲ್ಲಿ ನೀಡಿದ ತೀರ್ಪಿನ ಉಲ್ಲಂಘಿಸಿ ಘಟನೆ ಮಾಡಲಾಗಿದೆ. ಪರಿಹಾರ ನೀಡಲು ಅಥವಾ ಬೇರೆ ಕಡೆ ಬದಲಿ ನಿವೇಶನ ನೀಡಲು ಕಾನೂನಿನಲ್ಲಿ ಅವಕಾಶವಿಲ್ಲ. ಅಭಿವೃದ್ಧಿಪಡಿಸಲಾದ ಬಡಾವಣೆಯಲ್ಲಿ ಭೂಮಾಲೀಕರಿಗೆ ಕೊಟ್ಟು ಉಳಿದ ಬಿಡಿ ನಿವೇಶನಗಳನ್ನು ಹರಾಜು ಮಾಡಬೇಕು. ಉಳಿಕೆ ನಿವೇಶನಗಳನ್ನು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವವರಿಗೆ, ಪದ್ಮಶ್ರೀ, ಪದ್ಮಭೂಷಣ ಮೊದಲಾದ ಪುರಸ್ಕಾರಗಳನ್ನು ಪಡೆದವರಿಗೆ ನೀಡುವದು ನಿಯಮ. ಆದರೆ ಇಲ್ಲಿ ಪಾರ್ವತಮ್ಮನವರು ಅಂತಹ ಯಾವುದೇ ಸಾಧನೆ ಮಾಡಿಲ್ಲ ಎಂದರು.

ಭೈರತಿ ಸುರೇಶ್ ಸಿಎಂ ಆಪ್ತರಾಗಿದ್ದು, ಅವರ ಕೃಪ ಕಟಾಕ್ಷದಿಂದಲೇ ಮಂತ್ರಿ ಆಗಿದ್ದಾರೆ. ಅದರಲ್ಲೂ ನಗರಾಭಿವೃದ್ಧಿ ಖಾತೆಯನ್ನೇ ನೀಡಲಾಗಿದೆ. ಅದೇ ಕಾರಣಕ್ಕೆ ಸಿಎಂ ಋಣ ತೀರಿಸಲು ಭೈರತಿ ಸುರೇಶ್ ಮುಂದಾಗಿದ್ದಾರೆ. ಇದರಲ್ಲಿ ಸಿಎಂ ಸಿದ್ದರಾಮಯ್ಯನವರ ಪ್ರಭಾವ ಇರುವುದು ಸ್ಪಷ್ಟವಾಗಿದೆ ಎಂದರು.

ಮುಡಾ ಬಡಾವಣೆಗೆ ಹೊಂದಿಕೊಂಡಿರುವ ಕ್ಕೆ ಅಕ್ರಮ ಲೇಔಟ್‍ಗೆ ಅಕ್ರಮ ರಸ್ತೆ ಸಂಪರ್ಕ ಮಾಡಲಾಗಿದೆ. ಇದಕ್ಕೆ ಮುಡಾದಿಂದ ಹಣ ಪಡೆಯಲಾಗಿದೆ. ಅಕ್ರಮ ಬಡಾವಣೆ ಅಭೀವೃದ್ಧಿಗೆ ಕೋಟ್ಯಂತರ ರೂ. ಹಣ ನೀಡಲಾಗಿದೆ. ಇದರಲ್ಲಿಯೂ ಸಿದ್ದರಾಮಯ್ಯನವರ ಪ್ರಭಾವ ನಿರುವುದು ಸ್ಪಷ್ಟವಾಗಿದೆ ಎಂದರು.

ಬಡಾವಣೆಯ ಜಮೀನಿನ ಮೂಲ ಪಹಣಿದಾರರನ್ನು ಹುಡುಕಿ ಅವರಿಗೆ ನಿವೇಶನ ಕೊಡಲು ಸಚಿವ ಬೈರತಿ ಸುರೇಶ್ ಮುಂದಾಗಿದ್ದಾರೆ. ಹೀಗೆ ಕೊಡುವಲ್ಲಿ ತಮಗೆ ಶೇ.80 ಹಾಗೂ ಭÀೂಮಾಲೀಕನಿಗೆ ಶೇ.20 ರ ಮಿತಿಯಲ್ಲಿ ನಿವೇಶನ ನೀಡುವುದಾಗಿ ಹೇಳಿ ದಲ್ಲಾಳಿಗಳ ಮೂಲಕ ಕಳೆದ 13 ತಿಂಗಳಿನಿಂದ ಇಂತಹ ವಂಚನೆ ಮುಡಾದಲ್ಲಿ ನಡೆಯುತ್ತಿದೆ ಎಂದರು.

ಮುಡಾ ಹಗರಣ ತನಿಖೆಗೆ ಇಬ್ಬರು ಐಎಎಸ್ ಅಧಿಕಾರಿಗಳ ನೇತೃತ್ವದಲ್ಲಿ ತನಿಖೆ ನಡೆಸಲು ತಂಡ ರಚಿಸಲಾಗಿದೆ. ಇದು ಕೂಡ ನೆಪ ಮಾತ್ರದ ತನಿಖಾ ತಂಡವಾಗಿದೆ. ತನಿಖೆ ಮೂಲಕ ಈಡೀ ಪ್ರಕರಣವನ್ನು ತಿಪ್ಪೆ ಸಾರಿಸುವ ಬದಲಾಗಿದೆ ಸಿಎಂ ಸಿದ್ದರಾಮಯ್ಯನವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಸಿಬಿಐ ತನಿಖೆ ನಡೆಸಿ ನ್ಯಾಯ ಒದಗಿಸುವಂತೆ ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಶಾಸಕ ಎಸ್.ಎನ್. ಚನ್ನಬಸಪ್ಪ, ಶಿವರಾಜ್, ಎಂ.ಬಿ.ಹರಿಕೃಷ್ಣ, ಕೆ.ವಿ.ಅಣ್ಣಪ್ಪ, ಚಂದ್ರಶೇಖರ್ ಇದ್ದರು.

Share.
Leave A Reply

Exit mobile version