ದಾವಣಗೆರೆ : “ಯಾರು ಕಾನೂನನ್ನು ಗೌರವಿಸುತ್ತಾರೋ ಅವರನ್ನು  ನಾವು ಸದಾ ಗೌರವಿಸುತ್ತೇವೆ”* ಇದು ಬಹುತೇಕ  ಪೊಲೀಸ್ ಠಾಣೆಯ ಅಧಿಕಾರಿಗಳ ಕೋಣೆಯಲ್ಲಿ ಇರುವ ಫಲಕ. *ಇದು  ಈಗ ಪ್ರಸ್ತುತ  ಸಾಧ್ಯವೇ? ಎಂಬ ಪ್ರಶ್ನೆ ಉದ್ಬವಿಸಿದ್ದು, ಈ ಬಗ್ಗೆ ನಿವೃತ್ತ ಎಸಿಬಿ ಎಸ್ಪಿ‌ ಜಿ.ಎ.ಜಗದೀಶ್ ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ನಡೆದ ಅನಿರೀಕ್ಷಿತ ತತಕ್ಷಣದ ಘಟನೆಯ ಕುರಿತು (ಲಾಕಪ್ ಡೆತ್ ಎಂದು ಹೇಳುತ್ತಿರುವ) ಒಂದಿಷ್ಟು ಸಲಹೆ ನೀಡಿದ್ದಾರೆ.

1 ಚನ್ನಗಿರಿ ಹಾಗೂ  ದಾವಣಗೆರೆ ಜಿಲ್ಲೆಯ ಪೊಲೀಸರ  ನೈತಿಕತೆ  ಹೆಚ್ಚಬೇಕೆಂದರೆ  *ಪೊಲೀಸ್ ಠಾಣೆಗೆ  ಕಲ್ಲು  ಹೊಡೆದು ಪೊಲೀಸ್ ಇಲಾಖೆಯ  ವಾಹನಗಳನ್ನು  ಜಖಂ  ಮಾಡಿದ  ನೈಜ ಆರೋಪಿಗಳನ್ನು  CC ಕ್ಯಾಮೆರಾದ ಮೂಲಕ ಸೂಕ್ತ ರೀತಿ ಪತ್ತೆ ಮಾಡಿ ಅವರನ್ನು ದಸ್ತಗಿರಿ  ಮಾಡಿ ನಿರ್ದಾಕ್ಷಿಣ್ಯವಾಗಿ  ಕಟ್ಟುನಿಟ್ಟಿನ ಕಾನೂನಿನ ಕ್ರಮ ಜರುಗಿಸಬೇಕು.*

2  ಮೃತ ವ್ಯಕ್ತಿಯ ತಂದೆ ಇತರೆ ರಕ್ತ  ಸಂಬಂಧಿಕರ  ಹೇಳಿಕೆ ಪ್ರಮುಖವಾಗಿದ್ದು ಅವರ  ಹೇಳಿಕೆಯನ್ನು ಪರಿಗಣಿಸಬೇಕು.

3 ಅಮಾನತ್ತು ಆದ  ಅಧಿಕಾರಿಗಳನ್ನು  ಆದ್ಯತೆಯ  ಆಧಾರದಲ್ಲಿ ಪರಿಶೀಲಿಸಿ ಅವರನ್ನು ರಿವೋಕ್  ಮಾಡಿ ಅಲ್ಲಿಯೇ  ಮುಂದುವರಿಸಬೇಕು.

4 *ಗಲಭೆಯಲ್ಲಿ  ಗಾಯಗೊಂಡ  ಪೊಲೀಸರಿಗೆ ಚಿಕಿತ್ಸೆ ನೀಡಿ (Ex gratia) “ಎಕ್ಸ್ ಗ್ರೇಷಿಯಾ” ಪ್ರೋತ್ಸಾಹದಾಯಕ  ಧನ ನೀಡಬೇಕು.*

5  ಚಿಕಿತ್ಸೆ ಪಡೆಯುತ್ತಿರುವ  ಪೊಲೀಸರು ಇರುವ ಆಸ್ಪತ್ರೆಗೆ IGP ADGP L&O ಅವರು ಭೇಟಿ  ನೀಡಿ ಧೈರ್ಯ  ನೀಡಬೇಕು.

6 ಮಾನ್ಯ ಕರ್ನಾಟಕ ರಾಜ್ಯದ ಮಾನ್ಯ ಗೃಹ ಸಚಿವರು, ಹಾಗು ಮಾನ್ಯ ಡಿಜಿಪಿಯವರು ಎಡಿಜಿಪಿಯವರು (ಕಾ. ಸು) ಚನ್ನಗಿರಿ ಪೊಲೀಸ್ ಠಾಣೆಗೆ  ಭೇಟಿ ನೀಡಿ ಪೊಲೀಸರಿಗೆ ನೈತಿಕ  ಬೆಂಬಲ ನೀಡಬೇಕು.

7 ಮೃತ ವ್ಯಕ್ತಿಯ  ಮರಣೋತ್ತರ ಪರೀಕ್ಷಾ ವರದಿ ಕೂಡಲೇ ಪಡೆದು ಸಾವಿನ ಕಾರಣ ಸ್ಪಷ್ಟತೆ ಅರಿತು ಕೊಳಳಬೇಕು.ಪ್ರಕರಣದ ತನಿಖೆಯನ್ನು ತ್ವರಿತಗೊಳಿಸಬೇಕು. ತನಿಖೆಯ  ನಂತರ  ಹಿರಿಯ  ಪೊಲೀಸ್  ಅಧಿಕಾರಿಗಳು Press Meet  ಮಾಡಿ  ವಾಸ್ತವಾಂಶವನ್ನು ರಾಜ್ಯದ  ಸಾರ್ವಜನಿಕರಿಗೆ  ಮನವರಿಕೆ ಮಾಡಿಕೊಡಬೇಕು

8 ಚನ್ನಗಿರಿ ಪೊಲೀಸ್ ಠಾಣೆಯ  ನಾಗರಿಕ ಸಮಿತಿಯ  ಸದಸ್ಯರ ಪಟ್ಟಿ  ಮರು ಪರಿಶೀಲಿಸಿ ಸಕ್ರಿಯವಾದ ನಿಷ್ಕಕ್ಷಪಾತವಾದ ಜಾತ್ಯತೀತ ಸದಸ್ಯರ ಪಟ್ಟಿಯನ್ನು ರಚಿಸಬೇಕು.ನಾಗರಿಕ ಸಮಿತಿ ಸಭೆಯನ್ನು  ಪರಿಣಾಮಕಾರಿಯಾಗಿ  ನಡೆಸಬೇಕು ಎಂದು ಹೇಳಿದ್ದಾರೆ. ಒಟ್ಟಾರೆ  ಚನ್ನಗಿರಿಯ ಪೊಲೀಸ್ ಆಧಿಕಾರಿಗಳ  ಅಮಾನತು  ಕ್ರಮ  ಸರಿಯಲ್ಲ. ಇಲಾಖಾ ವಿಚಾರಣೆಗೆ ಘನ ಸರ್ಕಾರ ಆದೇಶಿಸಿಸಬಹುದಿತ್ತು. ಎಲ್ಲೋ ಒಂದು ಕಡೆ  ಪೊಲೀಸ್ ಇಲಾಖೆಯ ನೈತಿಕತೆಗೆ  ದೊಡ್ಡ  ಪೆಟ್ಟು ಬಿದ್ದಿದೆ ಎಂದು ಬೇಸರ ಹೊರ ಹಾಕಿದ್ದಾರೆ.

Share.
Leave A Reply

Exit mobile version