ದಾವಣಗೆರೆ : ನಾವಿನ್ನು ಎಳೆ ಕುಡಿಗಳು, ಯಾರ ಪರವಾಗಿಯೂ ಬ್ಯಾಟಿಂಗ್ ಬೀಸಿಲ್ಲ. ಅಜೇಯ್ ಕುಮಾರ್ ಭಾರತೀಯ ಜನತಾಪಾರ್ಟಿ ಕಾರ್ಯಕರ್ತ, ಯಾವ ವ್ಯಕ್ತಿ ಪರವಾಗಿ ಇಲ್ಲ ಎಂದು ಬಿಜೆಪಿ ನಾಯಕ ಬಿ.ಜೆ.ಅಜೇಯ್ ಕುಮಾರ್ ಹೇಳಿದರು.
ದಾವಣಗೆರೆ ಭಾರತೀಯ ಜನತಾಪಾರ್ಟಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ನಾವೇನೂ ಹೊಸ ಕ್ಯಾಂಡೇಟ್, ಲೋಕಲ್ ಕ್ಯಾಂಡೇಟ್ ಕೊಡಿ, ಎಂಪಿ ಬದಲಾವಣೆ ಮಾಡಿ ಎಂದು ಹೇಳಿಲ್ಲ. ನಾವಿನ್ನು ಎಳೆ ಕುಡಿಗಳು. ಅವರ ಬಗ್ಗೆ ಮಾತನಾಡೋಷ್ಟು ದೊಡ್ಡವರಲ್ಲ. ಪಾರ್ಟಿಯ ಪರವಾಗಿ ಇರೋನು ಅಜೇಯ್ ಕುಮಾರ್.ಇನ್ನು ಬೆಂಗಳೂರಿನಲ್ಲಿ ರಾಜ್ಯ ಕಾರ್ಯಕಾರಿಣಿ ಸಭೆ ಇತ್ತು. ಅಲ್ಲದೇ ಮಾಜಿ ಶಾಸಕ ಎಸ್.ಎ.ರವೀಂದ್ರನಾಥ್ ಕರೆ ಮೆರೆಗೆ ಒಂದು ದಿವಸ ಮುಂಚೆಯೇ ಬೆಂಗಳೂರಿಗೆ ಹೋದೆ. ಈ ಸಂದರ್ಭದಲ್ಲಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಮಾಜಿ ಯಡಿಯೂರಪ್ಪರನ್ನು ಭೇಟಿ ಮಾಡಿದ್ದೇ ಅಷ್ಟೇ. ಈ ಸಂದರ್ಭದಲ್ಲಿ ರೇಣುಕಾಚಾರ್ಯ ಸೇರಿದಂತೆ ಇನ್ನಿತರರು ಅವರ ನೋವುಗಳನ್ನು ಹೇಳಿಕೊಂಡರು. ಒಟ್ಟಾರೆ ಬಿಜೆಪಿ ಹೈಕಮಾಂಡ್ ಯಾರಿಗೆ ಟಿಕೆಟ್ ಕೊಡುತ್ತದೆಯೋ, ಅವರ ಪರ ಕೆಲಸ ಮಾಡುತ್ತೇವೆ. ದಾವಣಗೆರೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರಬೇಕು ಎಂದರು.
ನಾನು ಯಾರು ಕರೆದರೂ ಹೋಗುತ್ತೇನೆ. ನನಗೆ ಮಾಜಿ ಶಾಸಕ ಎಸ್.ಎ.ರವೀಂದ್ರನಾಥ್, ಎಸ್.ವಿ.ರಾಮಚಂದ್ರ, ಜಿ.ಎಂ.ಸಿದ್ದೇಶ್ವರ ಸೇರಿದಂತೆ ಎಲ್ಲರೂ ನಾಯಕರೇ, ಮಾಜಿ ಶಾಸಕ ರೇಣುಕಾಚಾರ್ಯ ಸೇರಿದಂತೆ ಎಲ್ಲರೂ ಅವರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಒಟ್ಟಾರೆ ಮಾಜಿ ಶಾಸಕರು ಕರೆದಿದ್ದ ಕಾರಣ ಹೋಗಿದ್ದೇ ಅಷ್ಟೇ ಅಂದ್ರು.
ದಾವಣಗೆರೆ ಬಿಜೆಪಿ ನಾಯಕರು ರಾಜ್ಯಾಧ್ಯಕ್ಷರಿಗೆ ನೋವನ್ನು ಹೇಳಿಕೊಂಡ ಸಂದರ್ಭದಲ್ಲಿ, ಬಿ.ವೈ.ವಿಜಯೇಂದ್ರ ಪ್ರತಿಕ್ರಿಯಿಸಿ, ನಾನು ಈಗ ತಾನೆ ರಾಜ್ಯಾಧ್ಯಕ್ಷನಾಗಿದ್ದೇನೆ, ಎಲ್ಲ ಜಿಲ್ಲೆಗಳ ಪರಿಸ್ಥಿತಿಯನ್ನು ಅವಲೋಕನ ಮಾಡಬೇಕಿದೆ. ಹಾಗಾಗಿ ಅವರ ಮನವಿ ಸ್ವೀಕಾರ ಮಾಡಿದ್ದೇನೆ. 28 ಕ್ಷೇತ್ರಗಳಲ್ಲಿ ಬಿಜೆಪಿ ಅಧಿಕಾರಕ್ಕೆ ಬರಬೇಕೆಂಬುದಷ್ಟೇ ನನ್ನ ಗುರಿ. ಈ ಮೂಲಕ ಪ್ರಧಾನಿ ಮೋದಿ ಕೈ ಬಲಪಡಿಸಬೇಕು ಎಂದು ರಾಜ್ಯಾಧ್ಯಕ್ಷರು ಹೇಳಿದರು ಎಂದು ಬಿಜೆ ಅಜೇಯ್ ಕುಮಾರ್ ಹೇಳಿದರು.
ದಕ್ಷಿಣ ಭಾರತದಲ್ಲಿ ಹೆಚ್ಚು ಸ್ಥಾನಗಳನ್ನು ಗೆಲ್ಲಬೇಕೆಂಬ ದೃಷ್ಟಿ ಇರುವ ಕಾರಣ ಎಲ್ಲ ನಾಯಕರು ಪ್ರಮುಖರಾಗಿದ್ದಾರೆ. ಪಕ್ಷ ಸಂಘಟನೆಗೆ ಬೇಕಾಗುವ ಸಹಾಯ, ವ್ಯವಸ್ಥೆಯನ್ನು ನಾನು ಮಾಡುತ್ತೇನೆ ಎಂದು ಮಾಜಿ ಸಿಎಂ ಯಡಿಯೂರಪ್ಪ ಹೇಳಿದರು ಎಂದರು.
ಹಲವು ಕ್ಷೇತ್ರಗಳಿಗೆ ಯುವಕರಿಗೆ ಎಂಪಿ ಟಿಕೆಟ್ ನೀಡಬಹುದು
ಈ ಬಾರಿ ಎಂಪಿ ಚುನಾವಣೆಯಲ್ಲಿ ಹಲವು ಕ್ಷೇತ್ರಗಳಿಗೆ ಯುವಕರಿಗೆ ಟಿಕೆಟ್ ನೀಡಲು ಮನವಿ ಮಾಡಿದ್ದೇವೆ. ಈ ಹಿಂದಿನ ವಿಧಾನಸಭೆ ಚುನಾವಣೆಯಲ್ಲಿ 80 ಕ್ಷೇತ್ರಗಳಲ್ಲಿ ಯುವಕರಿಗೆ ಆದ್ಯತೆ ನೀಡಲಾಗಿತ್ತು. ಈ ಬಾರಿಯೂ ಹೆಚ್ಚಿನ ಕ್ಷೇತ್ರಗಳ ಯುವಕರಿಗೆ ಎಂಪಿ ಟಿಕೆಟ್ ಸಿಗಬಹುದು ಎಂದು ಬಿಜೆಪಿ ನಾಯಕ ಅಜೇಯ್ ಕುಮಾರ್ ಹೇಳಿದರು.
ಅವಕಾಶ ಸಿಕ್ಕಾಗ ನಾನು ಬೇಡ ಎನ್ನುವುದಿಲ್ಲ
ಬಿಜೆಪಿ ಎಂಪಿ ಟಿಕೆಟ್ ಗೆ ನೀವು ಆಕಾಂಕ್ಷಿನಾ ಎಂದು ಕೇಳಿದ ಪ್ರಶ್ನೆಗೆ, ನಾನು ಯಾವತ್ತು ಆಕಾಂಕ್ಷಿ ಅಂತ ಹೇಳಿಲ್ಲ. ಆಕಾಂಕ್ಷಿಗಳು ಸಾಕಷ್ಟು ಜನರು ಇದ್ದಾರೆ. ನನಗೆ ನಿಲಬೇಕೆಂಬ ಆಸೆ ಇಲ್ಲ.ಪಕ್ಷ ಯಾರಿಗೆ ಟಿಕೆಟ್ ನೀಡಿದರೂ ಅವರಿಗೆ ಕೆಲಸ ಮಾಡುವೆ. ನನಗೆ ಪಕ್ಷ ಮೇಯರ್ ಮಾಡಿದೆ, ವಿಧಾನಸಭಾ ಟಿಕೆಟ್ ನೀಡಿದೆ. ಅವಕಾಶ ಸಿಕ್ಕಾಗ ಬೇಡ ಅನ್ನೋದಿಲ್ಲ ಅಂದ್ರು.
ಸಣ್ಣ ಪುಟ್ಟ ನ್ಯೂನತೆಗಳು ಗಂಡ ಹೆಂಡತಿಗೆ ಇರುತ್ತದೆ
ಬಿಜೆಪಿ ದೊಡ್ಡ ಪಾರ್ಟಿ, ನ್ಯೂನತೆಗಳು ಇರುತ್ತದೆ. ಗಂಡ ಹೆಂಡತಿಯ ನಡುವೆಯೇ ಜಗಳ ಇರುತ್ತದೆ. ಹೀಗಿರುವಾಗ ದೊಡ್ಡ ಪಾರ್ಟಿಯಲ್ಲಿ ಜಗಳ ಸಾಮಾನ್ಯ. ದಾವಣಗೆರೆ ಬಿಜೆಪಿ ಇಬ್ಬಾಗ ಆಗೋದಕ್ಕೆ ಬಿಡೋದಿಲ್ಲ ಎಂದರು. ಈ ಸಂದರ್ಭದಲ್ಲಿ ವೇಳೆ ಬಿಜೆಪಿ ಮುಖಂಡರೂ, ದಾವಣಗೆರೆ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ ಕೆ. ಬಿ. ಕೊಟ್ರೇಶ್, ಮಾಜಿ ಸಚಿವ ಎಂ. ಪಿ. ರೇಣುಕಾಚಾರ್ಯ, ಆರೈಕೆ ಆಸ್ಪತ್ರೆಯ ಮುಖ್ಯಸ್ಥರಾದ ರವಿಕುಮಾರ್, ಮಾಜಿ ಶಾಸಕ ಗುರುಸಿದ್ದನಗೌಡ್ರು, ಬಿಜೆಪಿ ಜಿಲ್ಲಾಧ್ಯಕ್ಷ ಎನ್. ರಾಜಶೇಖರ್ ಮತ್ತಿತರರು ಹಾಜರಿದ್ದರು ವೇಳೆ ಬಿಜೆಪಿ ಮುಖಂಡರೂ, ದಾವಣಗೆರೆ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ ಕೆ. ಬಿ. ಕೊಟ್ರೇಶ್, ಮಾಜಿ ಸಚಿವ ಎಂ. ಪಿ. ರೇಣುಕಾಚಾರ್ಯ, ಆರೈಕೆ ಆಸ್ಪತ್ರೆಯ ಮುಖ್ಯಸ್ಥರಾದ ರವಿಕುಮಾರ್, ಮಾಜಿ ಶಾಸಕ ಗುರುಸಿದ್ದನಗೌಡ್ರು, ಬಿಜೆಪಿ ಜಿಲ್ಲಾಧ್ಯಕ್ಷ ಎನ್. ರಾಜಶೇಖರ್ ಪಕ್ಷದ ಕಾರ್ಯಕರ್ತರು ಸೇರಿದಂತೆ ಇತರರು ಇದ್ದರು.