ದಾವಣಗೆರೆ : ಎಲ್ಲಾ ವರ್ಗದ ಜನರು ಒಗ್ಗಟ್ಟಿನ ಸಂಕೇತವಾಗಿ ಯುವಶಕ್ತಿ ಸ್ವಾಭಿಮಾನಿ ಪಕ್ಷೇತರ ಅಭ್ಯರ್ಥಿ ವಿನಯ್ ಕುಮಾರ್ ಅವರಿಗೆ ಮತ ನೀಡಬೇಕೆಂದು ಮಾಜಿ ನಗರಸಭಾ ಸದಸ್ಯೆ ಶಾಮನೂರು ಗೀತಾ ಮುರುಗೇಶ್ ಮನವಿ ಮಾಡಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ವರಿಗೂ ಶಿಕ್ಷಣ, ಉದ್ಯೋಗ, ಆರೋಗ್ಯ ದೊರೆಯಬೇಕೆಂಬುದೇ ವಿನಯ್ ಕುಮಾತ್ ಅವರ ಮೂಲ ಉದ್ದೇಶವಾಗಿದ್ದು, ಹಳ್ಳಿಗಳ ಉದ್ದಾರವೇ, ಭವ್ಯ ಭಾರತದ ಪ್ರಗತಿ ಎಂದು ಅರಿತಿರುವ ಇವರ ಸೇವಾ ನಿಷ್ಠೆ, ಕಾಯಕ ಪ್ರಜ್ಞೆ, ಜನಪರ ಚಿಂತನೆ, ಅಭಿವೃದ್ಧಿ ಅಭಿಲಾಷೆಗಳು, ಸರ್ವರನ್ನು ಆಕರ್ಷಿಸಿ ಮೆಚ್ಚಿಗೆ ಗಳಿಸಿದ್ದಾರೆ. ಇಂದಿನ ಚುನಾವಣೆ ಶ್ರೀಮಂತ ಅಭ್ಯರ್ಥಿಗಳ ಮಧ್ಯೆ ಸೇವಾ ಮನೋಭಾವವುಳ್ಳ ಯುವ ನಾಯಕನ ಸ್ಪರ್ಧೆ ನಡೆದಿದ್ದು, ಪ್ರಜ್ಞಾವಂತ ಮತದಾರ ಬಂಧುಗಳು ವಿಚಾರಾತ್ಮಕವಾಗಿ ಆಲೋಚಿಸಿ, ಕ್ಷೇತ್ರ ಅಭಿವೃದ್ಧಿ ಹಾಗೂ ಸಮಾಜಮುಖಿ ಜನಪರ ಚಿಂತಕ ಜಿ.ಬಿ.ವಿನಯ್ ಕುಮಾರ್ ಅವರನ್ನು ಆರಿಸುವ ಮೂಲಕ ಕ್ಷೇತ್ರದ ಸವಾರ್ಂಗೀಣ ಪ್ರಗತಿಗೆ ಅನುಕೂಲ ಕಲ್ಪಿಸುವುದು ಪ್ರಾಮುಖ್ಯವೆನಿಸುತ್ತದೆ ಎಂದರು.
ಆದ್ದರಿಂದ ದಾವಣಗೆರೆ ಲೋಕಸಭಾ ಕ್ಷೇತ್ರದ ಸ್ವಾಭಿಮಾನಿ ಜಿ.ಬಿ.ವಿನಯ್ ಕುಮಾರ್ ಅವರ ಗುರುತಾದ ಗ್ಯಾಸ್ ಸಿಲಿಂಡರ್ ಗುರುತಿಗೆ ತಮ್ನ ಅಮೂಲ್ಯ ಮತವನ್ನು ನೀಡುವಂತೆ ಮನವಿ ಮಾಡಿದರು.ಗೋಷ್ಠಿಯಲ್ಲಿ ಮುಕ್ತಿಯಾರ್ ಆಹ್ಮದ್ ಇದ್ದರು.