ನಂದೀಶ್ ಭದ್ರಾವತಿ, ದಾವಣಗೆರೆ

ದಾವಣಗೆರೆ ಕೈ ಪಕ್ಷದ  ಪಾಳಯಕ್ಕೆ ಸಖತ್ ಠಕ್ಕರ್ ಕೊಟ್ಟಿರುವ ವಿನಯ್ ಕುಮಾರ್ ಇಂದು ನಾಮಪತ್ರ ವಾಪಸ್ ಪಡೆಯದೇ ಎಲೆ ಕ್ಷನ್ ಅಖಾಡದಲ್ಲಿ ಉಳಿದಿದ್ದಾರೆ.

ಸದ್ಯ ವಿನಯ್ ಕುಮಾರ್ ಕ್ರಮ ಸಂಖ್ಯೆ  28 ಆಗಿದ್ದು ಸಿಲಿಂಡರ್ ಗುರುತು ವಿನಯ್ ಕುಮಾರ್ ದ್ದಾಗಿದೆ. ಸೋಮವಾರ ಮಧ್ಯಾಹ್ನ 3 ಗಂಟೆಯವರೆಗೆ ನಾಮಪತ್ರ ವಾಪಸ್ ತೆಗೆದುಕೊಳ್ಳಲು ಅವಕಾಶ ಇದ್ದು, ಮೂವರು ಪಕ್ಷೇತರ ಅಭ್ಯರ್ಥಿಗಳು ನಾಮಪತ್ರ ವಾಪಾಸ್ ಪಡೆದಿದ್ದು , ಪಕ್ಷೇತರ ಅಭ್ಯರ್ಥಿ ವಿನಯ್ ಕುಮಾರ್ ನಾಮಪತ್ರ ವಾಪಾಸ್ ಪಡೆಯದೇ ಕಣದಲ್ಲೆ ಉಳಿದರು.

ಕಾಂಗ್ರೆಸ್ ಗೆ ರೆಬೆಲ್ ಆದ ವಿನಯ್

ಕಕ್ಕರಗೊಳ್ಳ ಗ್ರಾಮದ ಯುವಕ ವಿನಯ್ ಕುಮಾರ್ ಸುಮಾರು ಒಂದು ವರ್ಷದಿಂದ ಕೈ ಟಿಕೆಟ್ ಗಾಗಿ ಹೋರಾಟ ನಡೆಸಿದ್ದರು.ಅದಕ್ಕಾಗಿ ನಾನಾ ಧಾರ್ಮಿಕನಕಾರ್ಯಕ್ರಮಗಳನ್ನು ಕೈಗೊಂಡರು. ಸಿಎಂ ಸಿದ್ದರಾಮಯ್ಯ ಬಲಗೈ ಭಂಟ, ಕುಲಬಾಂಧವನಾದರೂ ಸಚಿವ ಎಸ್. ಎಸ್.ಮಲ್ಲಿಕಾರ್ಜುನ್ ಮುಂದೆ ವಿನಯ್ ಆಟ ನಡೆಯಲಿಲ್ಲ. ಬದಲಾಗಿ ಪತ್ನಿ ಪ್ರಭಾ ಮಲ್ಲಿಕಾರ್ಜುನ್ ಗೆಟಿಕೆಟ್ ತರಲು ಯಶಸ್ವಿಯಾದರು. ಇದರಿಂದ ರೊಚ್ಚಿಗೆದ್ದ ವಿನಯ್ ಪಾದಯಾತ್ರೆ ನಡೆಸಿ ಜನರ ಅಭಿಪ್ರಾಯ ಪಡೆದು ಸಿಎಂ ಸಿದ್ದರಾಮಯ್ಯ, ಎಚ್‌ಎಂ ರೇವಣ್ಣ, ಕಾಗಿನೆಲೆ ಶ್ರೀಗಳು ನಾಮ ಪತ್ರ ವಾಪಸ್ ತೆಗೆದುಕೊಳ್ಳಲು ವಾಪಸ್ ಪಡೆಯಲಿಲ್ಲ. ಇದು ಕಾಂಗ್ರೆಸ್ ಗೆ ತಲೆನೋವಾಗಿದೆ.

ಬಿಜೆಪಿಯಿಂದ ವಿನಯ್ 10 ಕೋಟಿ ಹಣ ತೆಗೆದುಕೊಂಡಿದ್ದಾರೆ ಎಂದು ಗಾಸಿಪ್

ಕೆಲ ದಿನಗಳ ಹಿಂದೆ ವಿನಯ್ ಕುಮಾರ್ ಬಿಜೆಪಿ ನಾಯಕರ ಹಿಂದೆ ಕಾಣಿಸಿಕೊಂಡಿದ್ದ ಪೋಟೋ ವೈರಲ್ ಆಗಿತ್ತು. ಈ ಸಂದರ್ಭದಲ್ಲಿ ಸಂತೆಬೆನ್ನೂರಿನ ವ್ಯಕ್ತಿಯೊಬ್ಬ ವಿನಯ್ ಕುಮಾರ್ 10 ಕೋಟಿ ಹಣ ಪಡೆದಿದ್ದಾರೆ ಎಂದು ಗಾಸಿಪ್ ಹರಡಿದ್ದ. ಎಲ್ಲಾ ಗಾಸಿಪ್ ಸುಳ್ಳು, ನಾನು ಸ್ಪರ್ಧೆ ಮಾಡೇ ಮಾಡುತ್ತೇನೆ ಎಂದು ವಿನಯ್ ಕುಮಾರ್ ಸ್ಪಷ್ಟನೆ ಕೊಟ್ಟಿದ್ದರು. ಸದ್ಯ ವಿನಯ್ ಕುಮಾರ್ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿದ್ದು, ಕೈ ಪಾಳಯಕ್ಕೆ ಟೆನೆಷನ್ ಕೊಡುತ್ತಿದ್ದಾರೆ.

ಕೈ ಪಾಳಯಕ್ಕೆ ಟೆನೆಷನ್ ಯಾಕೆ

ದಾವಣಗೆರೆ ಜಿಲ್ಲೆಯಲ್ಲಿ ಅಹಿಂದ ಮತಗಳು ಸುಮಾರು ಮೂರು ಲಕ್ಷಕ್ಜೂ ಹೆಚ್ಚು ಇದ್ದು, ವಿನಯ್ ಕುಮಾರ್ ಗೆ ಹೆಚ್ಚು ಬೀಳುವ ಸಾಧ್ಯತೆಗಳಿವೆ.  ಅಹಿಂದ ಮತಗಳು ಹೆಚ್ಚಿರೋ ಕ್ಷೇತ್ರದಲ್ಲಿ ವಿನಯ್ ಕುಮಾರ್ ಸಂಚಲನ ಮೂಡಿಸಿದ್ದಾರೆ, ಅಹಿಂದ ಮತಗಳು ನಂಬಿ ಕೂತಿರೋ ಕಾಂಗ್ರೆಸ್ ಗೆ ವಿನಯ್ ಸ್ಪರ್ಧೆಯಿಂದ ಹೊಡೆತ ಬೀಳುವ ಸಾಧ್ಯತೆ ಇದೆ.  ಕಾಂಗ್ರೆಸ್ ನಿಂದ ಡಾ. ಪ್ರಭಾ ಮಲ್ಲಿಕಾರ್ಜುನ್ ಸ್ಪರ್ಧೆ ನಡೆಸಿದ್ದು, ಸತತ ಆರು ಭಾರೀ ಸೋತಿರೋ‌ ಕಾಂಗ್ರೆಸ್ ಗೆ ಪಕ್ಷೇತರ ಸ್ಪರ್ಧೆಯಿಂದ ಈ ಭಾರೀಯೂ ಹಾದಿ ಕಠಿಣವಾಗಲಿದೆ. ಆದರೆ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳು, ಸಚಿವ ಎಸ್ ಎಸ್ ಮಲ್ಲಿಕಾರ್ಜುನ್ ಅವರ ಅಭಿವೃದ್ದಿ ಆಡಳಿತ, ಪ್ರಭಾ ಮಲ್ಲಿಕಾರ್ಜುನ ಅವರ ಆರೋಗ್ಯ ಸೇವೆ ವಿಚಾರ ಇಟ್ಟುಕೊಂಡು ಗೆದ್ದೆ ಗೆಲ್ತಿವಿ ಎಂದು ಕಾಂಗ್ರೆಸ್ ಹೇಳುತ್ತಿದೆ.  ಒಟ್ಟಾರೆ ವಿನಯ್ ಕುಮಾರ್ ಸ್ಪರ್ಧೆ ಕಾಂಗ್ರೆಸ್ ಗೆ ತಲೆನೋವಾಗಿ ಪರಿಣಮಿಸಿದೆ.

 

 

Share.
Leave A Reply

Exit mobile version