ದಾವಣಗೆರೆ: ರಾಜಕಾರಣದಲ್ಲಮಿತ್ರರು ಶತ್ರುಗಳಾಗುತ್ತಾರೆ. ಶತ್ರುಗಳು ಮಿತ್ರುಗಳಾಗುತ್ತಾರೆ ಎನ್ನುವುದಕ್ಕೆ ಇಲ್ಲೋಂದು ಘಟನೆ ಸಾಕ್ಷಿಯಾಗಿದೆ.ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ವಿನಯ್ ಕುಮಾರ್ ಜಿಲ್ಲಾದ್ಯಂತ ಪ್ರವಾಸ ಮಾಡಿ ತನ್ನದೇ ಆದ ಪ್ರಭಾವ ಹೊಂದಿದ್ದರು. ಅಲ್ಲದೇ ಕುಟುಂಬ ರಾಜಕಾರಣದ ವಿರುದ್ದ ಹರಿಹಾಯ್ದಿದ್ದರು. ಶಾಮನೂರು ಕುಟುಂಬದ ವಿರುದ್ದ ರೆಬೆಲ್ ಆಗಿದ್ದ ವಿನಯ ಕುಮಾರ್ ಈಗ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಜತೆ ಕಾಣಿಸಿಕೊಂಡಿದ್ದಾರೆ. ಅಲ್ಲದೇ ಜತೆಗೆ ಸಿಎಂ ಸಿದ್ದರಾಮಯ್ಯ, ಕನಕ ಶ್ರೀಗಳು ಇದ್ದು, ವಿನಯ್ ಕುಮಾರ್ ಕಾಂಗ್ರೆಸ್ ಅಭ್ಯರ್ಥಿ ಪ್ರಭಾ ಮಲ್ಲಿಕಾರ್ಜುನ್ ಗೆಲುವಿಗೆ ಸಾಥ್ ನೀಡುತ್ತಾರಾ ಎಂಬ ಪ್ರಶ್ನೆ ಉದ್ಬವಾಗಿದೆ.
ವಿನಯ್ ಅಭಿಮಾನಿಗಳಲ್ಲಿ ಗೊಂದಲ
ನೂರಕ್ಕೂ ಹೆಚ್ಚು ಹಳ್ಳಿ ಹಳ್ಳಿಗೂ ತೆರಳಿ ಜನರೊಂದಿಗೆ ಬೆರೆತು, ನೋವು ಹಂಚಿಕೊಂಡಿದ್ದ ವಿನಯ್ ಕುಮಾರ್ ದಿಡೀರನೆ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಜತೆ ಕಾಣಿಸಿಕೊಂಡಿರುವುದು ವಿನಯ್ ನಡಿಗೆ ಎತ್ತ ಕಡೆ ಎಂಬ ಪ್ರಶ್ನೆ ಉದ್ಬವಿಸಿದೆ. ಸುಮಾರು ಒಂದು ವರ್ಷಗಳ ಕಾಲ ಒಬ್ಬರೇ ಇಡೀ ದಾವಣಗೆರೆ ಸುತ್ತಾಡಿದ್ದರು.ಅಲ್ಲದೇ ಕಾಂಗ್ರೆಸ್ ಜಿಲ್ಲಾಧ್ಯಕ್ಷ , ಎಸ್ ಎಸ್ ಎಂ ಪರಮಾಪ್ತ ಮಂಜಪ್ಪ ವಿನಯ್ ಕುಮಾರ್ ಕಾಂಗ್ರೆಸ್ ಪ್ರಾಥಮಿಕ ಸದಸ್ಯತ್ವ ಪಡೆದಿಲ್ಲ ಅಂದಿದ್ದರು. ವೀಕ್ಷಕರು ಬಂದಾಗ ವಿನಯ್ ಕುಮಾರ್ ಶಕ್ತಿ ಪ್ರದರ್ಶನ ಮಾಡಿದ್ದರು.ನಂತರ ಪ್ರಭಾ ಮಲ್ಲಿಕಾರ್ಜುನ್ ಗೆ ಟಿಕೆಟ್ ಸಿಕ್ಕ ನಂತರ ಶಾಮನೂರು ಕುಟುಂಬದಿಂದ ಒಂದಿಷ್ಟು ದೂರವೇ ಉಳಿದಿದ್ದರು. ಹೀಗೀರುವಾಗ ಸಚಿವ ಎಸ್ ಎಸ್ ಎಂ ಜತೆ ವಿನಯ್ ಕುಮಾರ್ ಭೇಟಿಯಾಗಿರುವ ಪೋಟೋ ನೋಡಿ ಕಾರ್ಯಕರ್ತರು ಶಾಖ್ ಆಗಿದ್ದಾರೆ.
ವಿನಯ್ ಕುಮಾರ್ ಸ್ಪಷ್ಟನೆ
ಬಂಡಾಯ ಶಮನವಾಗಿಲ್ಲ. ಇನ್ನೆರಡು ದಿನಗಳಲ್ಲಿ ಅಂತಿಮ ನಿರ್ಧಾರ ಪ್ರಕಟಿಸುತ್ತೇನೆ. ಯಾವುದೇ ವದಂತಿಗಳಿಗೆ ಕಿವಿಗೊಡಬೇಡಿ. ಪಕ್ಷೇತರ ಸ್ಪರ್ಧೆ ಮಾಡುವುದಿಲ್ಲ ಎಂಬ ಮಾತು ಹರಿದಾಡುತ್ತಿದೆ. ಸದ್ಯಕ್ಕೆ ಈ ತೀರ್ಮಾನ ಆಗಿಲ್ಲ ಎಂದು ವಿನಯ್ ಸ್ಪಷ್ಟಪಡಿಸಿದ್ದಾರೆ.
ವಿಡಿಯೋ ಮಾಡಿ ಸ್ಪಷ್ಟನೆ
ನಾನು ವಿನಯ್ ಕುಮಾರ್ ಬೆಂಗಳೂರಿನಲ್ಲಿ ಇಂದು ಸಿಎಂ ಸಿದ್ದರಾಮಯ್ಯ ಸಾಹೇಬರನ್ನು ಭೇಟಿ ಮಾಡಿದ್ದೆವು. ಇದೊಂದು ಸೌದಾರ್ದಯುತ, ಸೌಜನ್ಯ ಭೇಟಿಯಾಗಿತ್ತು. ಈ ವೇಳೆ ದಾವಣಗೆರೆ ಲೋಕಸಭಾ ಕ್ಷೇತ್ರದಿಂದ ಪಕ್ಷೇತರನಾಗಿ ಕಣಕ್ಕಿಳಿದರೆ ಗೆಲ್ಲುವ ಸಾಧ್ಯತೆ ಇದೆ. ಈ ವಿಚಾರವನ್ನು ಸಿದ್ದರಾಮಯ್ಯ ಅವರಿಗೆ ಮನವರಿಕೆ ಮಾಡಿಕೊಟ್ಟೆ. ನಿಮ್ಮನ್ನು ಬೆಳೆಸುತ್ತೇವೆ ಎಂಬ ಭರವಸೆ ನೀಡಿದ್ದಾರೆ. ಇನ್ನು ವಯಸ್ಸಿದೆ. ಈಗಲೇ ದುಡುಕಬೇಡ, ಯೋಚನೆ ಮಾಡು ಎಂದು ಹೇಳಿದ್ದಾರೆ.
ದಾವಣಗೆರೆ ರಾಜಕೀಯ ಪರಿಸ್ಥಿತಿಯಲ್ಲಿ ಲಕ್ಷಾಂತರ ಜನರು ನಾನು ಪಕ್ಷೇತರನಾಗಿ ಕಣಕ್ಕಿಳಿಯಬೇಕೆಂದು ಅಪೇಕ್ಷೆ ಪಡುತ್ತಿದ್ದಾರೆ. ನಾನು ಇನ್ನೂ ಮುಂಚೆ ಹೇಳಿದ ಹಾಗೆ ಅಂತಿಮ ನಿರ್ಧಾರ ತೆಗೆದುಕೊಂಡಿಲ್ಲ. ಜನಾಭಿಪ್ರಾಯ ಸಂಗ್ರಹ ಮಾಡುವುದು ಬಾಕಿ ಇದೆ. ಮಾಯಕೊಂಡ, ದಾವಣಗೆರೆ ಉತ್ತರ ಕ್ಷೇತ್ರದಲ್ಲಿನ ಜನರು, ಮತದಾರರ ಅಭಿಪ್ರಾಯ ಸಂಗ್ರಹ ಮಾಡಬೇಕಿದೆ. ಇದಾದ ಬಳಿಕ ನಾನೇ ಪತ್ರಿಕಾಗೋಷ್ಠಿ ಕರೆದು ಅಂತಿಮ ನಿರ್ಧಾರ ತಿಳಿಸುತ್ತೇನೆ. ದಯವಿಟ್ಟು ಬಂಡಾಯ ಶಮನವಾಯ್ತು, ನನ್ನ ಪಕ್ಷೇತರ ಸ್ಪರ್ಧೆ ಮಾಡಬೇಕೆಂಬ ಬಯಕೆ ಶಮನವಾಯ್ತು ಎಂದುಕೊಳ್ಳಬೇಡಿ. ನಾನು ಬರುತ್ತೇನೆ, ನಿಮ್ಮನ್ನು ಕಾಣುತ್ತೇನೆ ಎಂದು ವಿನಯ್ ಕುಮಾರ್ ಹೇಳಿದ್ದಾರೆ. ಒಟ್ಟಾರೆ ವಿನಯ್ ನಡಿಗೆ ಎತ್ತ ಕಡೆ ಎಂಬ ಪ್ರಶ್ನೆ ಹಾಗೇ ಉಳಿದಿದೆ