ದಾವಣಗೆರೆ: ಪ್ರಾರಂಭದಿಂದ ಕೊನೆಯವರೆಗೂ ಜಿದ್ದಾಜಿದ್ದಿ ಏರ್ಪಟ್ಟಿದ್ದ ದಾವಣಗೆರೆ ಕ್ಷೇತ್ರದಲ್ಲಿ ಸುಮಾರು 42 ಸಾವಿರ ಮತಗಳ ಅಂತರದಿಂದ ಕಾಂಗ್ರೆಸ್ ಗೆಲುವಿನ ನಗೆ ಬೀರಲಿದೆ.

ದಾವಣಗೆರೆ ಮೊದಲಿನಂದಲೂ ಬಿಜೆಪಿ ಆಡಳಿತ ನಡೆಸುತ್ತಿದ್ದು, ಈ ಬಾರಿ ಪ್ರಭಾಕ್ಕ ಆಡಳಿತ ನಡೆಸುವರು. ಈ ಕಾರಣದಿಂದ ದಾವಣಗೆರೆಯಲ್ಲಿ ತ್ರಿಬಲ್ ಎಂಜಿನ್ ಸರಕಾರ ಬರಲಿದೆ. ಮೊದಲಿನಿಂದಲೂ ಲೀಡ್‌ನಲ್ಲಿದ್ದ ಪ್ರಭಾಕ್ಕ ಕೆಲ ಸುತ್ತುಗಳಲ್ಲಿ ಮಾತ್ರ ಹಿಂದೆ ಇದ್ದರು. ನಂತರದ ಸುತ್ತಗಳಲ್ಲಿ ಪ್ರಭಾಕ್ಕ ತನ್ನ ಮತಗಳಲ್ಲಿ ಏರಿಕೆ ಕಂಡರು.

ನಿರೀಕ್ಷೆಯಂತೆ ಪಕ್ಷೇತರ ಅಭ್ಯರ್ಥಿ ವಿನಯ್‌ಕುಮಾರ್ ಮತಗಳು ತೆಗೆದುಕೊಳ್ಳದ ಕಾರಣ ಬಿಜೆಪಿ ಸೋಲುವ ಸಂಭವವಿದೆ. ಒಂದು ವೇಳೆ ವಿನಯ್ ಕುಮಾರ್ ಹೆಚ್ಚು ಮತಗಳನ್ನು ತೆಗೆದುಕೊಂಡಿದ್ದರೇ ಬಿಜೆಪಿ ಗೆಲ್ಲುವ ಸಾಧ್ಯತೆ ಇತ್ತು. ಆದರೆ ಮತದಾರರು ವಿನಯ್‌ಕುಮಾರ್ ರನ್ನು ಒಪ್ಪಲಿಲ್ಲ.

ಸದ್ಯದ ಮಾಹಿತಿ ಪ್ರಕಾರ ಎರಡು ಸುತ್ತು ಮಾತ್ರ ಬಾಕಿ ಇದ್ದು, ಅತಿ ಹೆಚ್ಚು ಲೀಡ್‌ನಲ್ಲಿ ಪ್ರಭಾ ಮಲ್ಲಿಕಾರ್ಜುನ್ ಇದ್ದಾರೆ. ಇಲ್ಲಿ ಯಾರೇ ಗೆದ್ದರೂ ದಾವಣಗೆರೆ ಲೋಕಸಭಾ ಕ್ಷೇತ್ರದ ಇತಿಹಾಸದಲ್ಲಿ ಮಹಿಳೆಯೊಬ್ಬರು ಪಾರ್ಲಿಮೆಂಟ್ ಪ್ರವೇಶಿಸುತ್ತಾರೆ. ಇನ್ನು ಗಾಯಿತ್ರಿ ಸಿದ್ದೇಶ್ವರ ಕೂಡ ಕೊನೆ ಕ್ಷಣದವರೆಗೂ ಪೈಪೋಟಿ ನೀಡಿದ್ದು, ಚಮತ್ಕಾರ ನಡೆಯುವ ಸಾಧ್ಯತೆ ಕಡಿಮೆ ಇದೆ.

Share.
Leave A Reply

Exit mobile version