ದಾವಣಗೆರೆ ; ರಾಜ್ಯದ ವಾಲ್ಮೀಕಿ ನಿಗಮ ಮಂಡಳಿಯಲ್ಲಿ ನಡೆದಿರುವ 187.33ಕೋಟಿ ಅವ್ಯವಹಾರದ ಹಗರಣದ
ಪ್ರಕರಣವನ್ನು ಅತೀ ಸೂಕ್ಷ್ಮವಾಗಿ ಪರಿಗಣಿಸಿ ತಪ್ಪಿತಸ್ಥರ ವಿರುದ್ಧ ತನಿಖೆ ಮಾಡಿ ನ್ಯಾಯಾಲಯಕ್ಕೆ ಅಂತಿಮ ವರದಿ ಸಲ್ಲಿಸುವಂತೆ ಶಿಕ್ಷೆಯಾಗಲು ಸಾಕ್ಷಾಧಾರಗಳನ್ನು ಒದಗಿಸಿ ಇನ್ನು ಮುಂದೆ ಇಂತಹ ಘಟನೆ ನಡೆಯದಂತೆ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕು ಹಾಗೂ ನಿಗಮದ ಅಧ್ಯಕ್ಷರಾದ ನಾಗೇಂದ್ರ ರಾಜೀನಾಮೆ ನೀಡಬೇಕು ಎಂದು ವಕೀಲರಾದ ಗುಮ್ಮನೂರು ಮಲ್ಲಿಕಾರ್ಜುನ್ ಆಗ್ರಹಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಎಸ್.ಟಿ. ನಿಗಮದ ಮಂಡಳಿಯ ಕರ್ಮಕಾಂಡದ ಬಗ್ಗೆ ನಿಷ್ಠಾವಂತ ಅಧಿಕಾರಿ ಡೆತ್ ನೋಟ್ ನಲ್ಲಿ ಎಲ್ಲಾ ಮಾಹಿತಿ ಬರೆದು ನೇಣಿಗೆ ಶರಣಾಗಿದ್ದಾರೆ. ಅವರಿಗೆ ನ್ಯಾಯ ಒದಗಿಸಬೇಕು. ಎಲ್ಲಾ ಅವ್ಯವಹಾರ ಬಯಲಿಗೆ ಬರಬೇಕು ಅದಕ್ಕಾಗಿ ಪ್ರಕರಣವನ್ನು ಸಿಬಿಐಗೆ ವಹಿಸಬೇಕು. ಹಿಂದುಳಿದ, ದಲಿತರ ಹಾಗೂ ಪರಿಶಿಷ್ಟ ಪಂಗಡ, ಪರಿಷ್ಟ ಜಾತಿ ಇತರೆ ಸಮಾಜದೊಂದಿಗೆ ಸಮಾನವಾಗಿ ಆರ್ಥಿಕವಾಗಿ ಅಭಿವೃದ್ಧಿ ಹೊಂದಲಿ ಎಂದು ಅಂಬೇಡ್ಕರ್ ರವರು ಬರೆದ ಸಂವಿಧಾನದ ಆಧಾರದ ಮೇಲೆ ಸರ್ಕಾರ ರೂಪಿಸಿದ ಯೋಜನೆಗಳ ಅನುದಾನ ದುರುಪಯೋಗವಾಗಿದೆ. ಆದರೆ ಈ ಬಗ್ಗೆ ಸಮಾಜದ ಮುಖ್ಯ ವಾಹಿನಿಯಲ್ಲಿರುವ ಶ್ರೀ ವಾಲ್ಮೀಕಿ ಮಠದ ಪ್ರಸನ್ನಾನಂದ ಸ್ವಾಮೀಜಿ ಹಾಗೂ ಸಮಾಜದ ಪ್ರಜಾ ಪ್ರತಿನಿಧಿಗಳು ಧ್ವನಿ ಎತ್ತದೇ ಇರುವುದು ಖಂಡನೀಯ ಎಂದರು.
ಸ್ವಾಮೀಜಿ ಪರಿಶಿಷ್ಟ ಪಂಗಡದ ಫಲಾನುಭವಿಯ ಪಟ್ಟಿ ತಯಾರು ಮಾಡಿ ನಿಗಮಕ್ಕೆ ಕಳುಹಿಸುತ್ತಾರೆ. ಫಲಾನುಭವ ಪಡೆಯುತ್ತಾರೆ. ನಿಜವಾದ ಫಲಾನುಭವಿಗಳು ವಂಚಿತರಾಗುತ್ತಾರೆ. ಹೀಗಾದರೆ ಅಭಿವೃದ್ಧಿ ಹೇಗೆ ಸಾಧ್ಯ? ಧಾರವಾಡದ ಶಕುಂತಲ ಎಂಬುವವರು ಪರಿಶಿಷ್ಟ ಪಂಗಡದ ಕಛೇರಿಯಲ್ಲಿ ಕರ್ತವ್ಯ ನಿರ್ವಹಿಸುವ ಸಂದರ್ಭದಲ್ಲಿ ಇದೇ ರೀತಿ ಹಣ ಬಿಡುಗಡೆ ಮಾಡುವಂತೆ ಒತ್ತಾಯಪಡಿಸಿದ್ದು ಆ ಅಧಿಕಾರಿ ಈ ಕಾರಣದಿಂದ ಮನನೊಂದು ವಿಷ ಸೇವಿಸಿ ದೂರನ್ನು ದಾಖಲಿಸಿದ್ದಾರೆ. ಈ ಘಟನೆ 2023 ರಲ್ಲಿ ನಡೆದಿದೆ ಆದರೆ ಇವರನ್ನು ಮೇಲಾಧಿಕಾರಿಗಳು ಸಸ್ಪೆಂಡ್ ಮಾಡಿದ್ದಾರೆ.
ಪ್ರಕರಣವನ್ನು ಅತೀ ಸೂಕ್ಷ್ಮವಾಗಿ ಪರಿಗಣಿಸಿ ತಪ್ಪಿತಸ್ಥರ ವಿರುದ್ಧ ತನಿಖೆ ಮಾಡಿ ನ್ಯಾಯಾಲಯಕ್ಕೆ ಅಂತಿಮ ವರದಿ ಸಲ್ಲಿಸುವಂತೆ ಶಿಕ್ಷೆಯಾಗಲು ಸಾಕ್ಷಾಧಾರಗಳನ್ನು ಒದಗಿಸಿ ಮುಂದೆ ಇಂತಹ ಘಟನೆ ನಡೆಯದಂತೆ ಕ್ರಮವಹಿಸಬೇಕು ಎಂದರು