ಭದ್ರಾವತಿ : ಇತ್ತೀಚೆಗೆ ನಡೆದ ಭದ್ರಾವತಿ ವೀರಶೈವ ಮಹಾಸಭಾ ಚುನಾವಣೆಯಲ್ಲಿ ವಾಗೀಶ್ ತಂಡ ಸೋತರೂ, ಸಮಾಜದ ಅಭಿವೃದ್ಧಿಗೆ ಶ್ರಮಿಸುತ್ತದೆ ಎಂದು ನೂತನ‌ ನಿರ್ದೇಶಕ ಜನ್ನಾಪುರದ ಎಚ್.ಮಂಜುನಾಥ್ ಹೇಳಿದರು.

ದಾವಣಗೆರೆ ವಿಜಯಯೊಂದಿಗೆ ಮಾತನಾಡಿ, ಈ ಚುನಾವಣೆಯಲ್ಲಿ ಯಾರು, ಯಾರಿಗೆ ಗೊತ್ತಿರಲಿಲ್ಲ. ಈಗ ಎಲ್ಲರಿಗೂ ಗೊತ್ತಾಗಿದೆ. ನಮ್ಮ ತಂಡ ಗೆಲ್ಲಲೂ ಸಾಕಷ್ಟು ಪ್ರಯತ್ನ ನಡೆಸಿತ್ತು. ಆದರೆ 200 ಮತಗಳು ತಿರಸ್ಕೃತಗೊಂಡವು.‌ಮತದಾರರು ಮತ ಹಾಕುವ ವೇಳೆ ದ್ವಂದ್ವಕ್ಕೆ ಈಡಾದರು. ಈ ಕಾರಣದಿಂದ ಸೋಲುಂಟಾಯಿತು ಎಂದರು.

ಇಷ್ಟು ದಿನ ವೀರಶೈವ ಮಹಾಸಭಾ ಚುನಾವಣೆ ನಡೆಯದ ಕಾರಣ ಸಮಾಜ ಇದೇ ಅಂತ ಅನೇಕರಿಗೆ ಗೊತ್ತಿರಲಿಲ್ಲ. ಆದರೆ ಪ್ರಥಮ ಬಾರಿಗೆ ಈಗ ಚುನಾವಣೆ ನಡೆದ ಕಾರಣ ಪ್ರತಿಯೊಬ್ಬರಿಗೂ ಮಹಾಸಭಾದ ಬಗ್ಗೆ ತಿಳಿದಿದೆ. ಮುಂದಿನ  ದಿನಗಳಲ್ಲಿ 15 ಸಾವಿರಕ್ಕೂ ಹೆಚ್ಚು ಸದಸ್ಯತ್ವ ಹೊಂದುವ ಗುರಿ ಹೊಂದಲಾಗಿದೆ. ಆಡಳಿತದಲ್ಲೂ ಗೆದ್ದವರ ತಂಡಕ್ಕೆ ಸಹಕಾರ ಮಾಡಲಾಗುವುದು. ಚುನಾವಣೆ ಆಗುವ ತನಕ ನಾವೂ ಬೇರೆ, ಬೇರೆ ಚುನಾವಣೆ ನಂತರ ನಾವೆಲ್ಲ ಒಂದೆ. ಮುಂದಿನ ದಿನಗಳಲ್ಲಿ ಸಭಾ ಭವನ ಕಟ್ಟಬೇಕೆಂಬ ಉದ್ದೇಶ ಇದೆ. ಅದರಂತೆ ಸಹಕಾರ ನೀಡಲಾಗುವುದು ಎಂದು ಮಂಜುನಾಥ್ ಹೇಳಿದರು.

Share.
Leave A Reply

Exit mobile version