ದಾವಣಗೆರೆ : ಮತದಾನ ಎನ್ನುವುದು ಮತ ಮತ್ತು ದಾನ ಎನ್ನುವ ಎರಡು ಪದಗಳನ್ನು ಒಳಗೊಂಡಿದೆ. ದಾನ ಎನ್ನುವುದು ಯೋಗ್ಯರಿಗೆ ನೀಡುವಂತಹದು. ಆಮಿಷಕ್ಕೆ ಬಿದ್ದು ಅದನ್ನು ಮಾರಿಕೊಳ್ಳಬಾರದು ಎಂದು ಹರಿಹರ ಪಂಚಮಸಾಲಿ ಗುರುಪೀಠದ ಶ್ರೀ ವಚನಾನಂದ ಸ್ವಾಮೀಜಿ ಹೇಳಿದರು.
ಹರಿಹರ ತಾಲ್ಲೂಕಿನ ಹನಗವಾಡಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆಯಲ್ಲಿ ಮೊದಲ ಮತವನ್ನು ಚಲಾಯಿಸಿದ ಬಳಿಕ ಮಾತನಾಡಿದ ಶ್ರೀಗಳು
ಯಾರಿಗೆ ದಾನ ಮಾಡುತ್ತಿದ್ದೇವೆ ಮತ್ತು ಯಾಕೆ ಮಾಡುತ್ತಿದ್ದೇವೆ ಎನ್ನುವ ಬಗ್ಗೆ ಅರಿವಿರಬೇಕು. ಆ ದಾನಕ್ಕೆ ಅವರು ಯೋಗ್ಯರಾಗಿದ್ದಾರಾ ಎಂದು ಯೋಚನೆ ಮಾಡಬೇಕು.
ಅಪಾತ್ರರಿಗೆ ದಾನ ಮಾಡಬಾರದೆನ್ನುವ ವಿಚಾರವೂ ನಮ್ಮಲ್ಲಿ ಜಾರಿಯಲ್ಲಿದೆ. ಮತದಾನ ಮಾಡುವ ಅವಕಾಶ ಐದು ವರ್ಷಗಳಿಗೆ ಒಮ್ಮೆ ಸಿಗುವಂತಹದು. ಅಂತಹ ಅವಕಾಶವನ್ನು ಕಳೆದುಕೊಳ್ಳಬಾರದು ಮತ್ತು ಅದರ ಸದುಪಯೋಗ ಪಡೆಯಬೇಕು. ಮತದಾನ ಮಾಡದೇ ಬಿಟ್ಟರೆ ನಿಮ್ಮ ಹಕ್ಕು ಬಿಟ್ಟುಕೊಟ್ಟ ಹಾಗೆ. ನಂತರ ಅದರ ಬಗ್ಗೆ ಮಾತನಾಡುವ ಹಕ್ಕನ್ನು ಕಳೆದುಕೊಳ್ಳುತ್ತೀರಿ. ಮತದಾನ ಮಾಡಿ ನಾಗರೀಕ ಹಕ್ಕು ಚಲಾಯಿಸಿ ಎಂದರು.