ಚನ್ನಗಿರಿ: ತಾವರೆಕೆರೆ ಶಿಲಾಮಠವು ಐತಿಹಾಸಿಕ ಹಿನ್ನಲೆ ಮತ್ತು ಪರಂಪರೆಯನ್ನು ಹೊಂದಿದ್ದು 1250 ವರ್ಷಗಳ ಇತಿಹಾಸವನ್ನು ತಿಳಿಸುತ್ತದೆ ಎಂದು ತಾವರೆಕೆರೆ ಶಿಲಾಮಠದ ಡಾ. ಅಭಿನವ ಸಿದ್ದಲಿಂಗಶಿವಾಚಾರ್ಯ ಸ್ವಾಮಿಗಳು ಹೇಳಿದರು.
ತಾಲೂಕಿನ ತಾವರೆಕೆರೆ ಶಿಲಾಮಠದ ಶ್ರೀ ಉಮಾಮಹೇಶ್ವರ ಸಭಾಭವನದಲ್ಲಿ ಶ್ರೀ ಮಠದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಉಮಾ ಮಹೇಶ್ವರ ಜಾತ್ರಾ ಮಹೋತ್ಸವ ಕಾರ್ಯಕ್ರಮವನ್ನು ಮಕ್ಕಳ ಮೂಲಕ ಉದ್ಘಾಟಿಸಿ ಮಾತನಾಡಿ ಎರಡು ದಿನಗಳು ನಡೆಯುವ ಈ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ನಡೆಯಲಿದೆ.
ದಾವಣಗೆರೆ ಕಾಲೇಜಿನ ಇತಿಹಾಸ ಸಂಶೋಧನಾ ವಿಭಾಗದ ವಿದ್ಯಾರ್ಥಿನಿ ತಾವರೆಕೆರೆ ಗ್ರಾಮದ ಶಾಸನಗಳನ್ನು ಅಧ್ಯಯನ ಮಾಡಿದ್ದು ತಾವರೆಕೆರೆ ಶಿಲಾಮಠದ ನೀಲಕಂಠೇಶ್ವರ ಸ್ವಾಮಿಯ ದೇಗುಲದಲ್ಲಿ ಕಂಬದಲ್ಲಿ ಶಿಲಾ ಶಾಸನ ಇದ್ದು ಅದನ್ನು ಸ್ಥಂಬಶಾಸನ ಎಂದು ಕರೆಯುತ್ತಾರೆ. ಅದರ ಪರಿಶೀಲನೆ ನಡೆಸಿದಾಗ ಮಠದ ಐತಿಹಾಸಿಕ ಹಿನ್ನಲೆ ಎಂದು ಹೆಮ್ಮೆಯಿಂದ ಹೇಳಬೇಕಿದೆ.
ಮಠ ಪುರಾತನವಾಗಿದ್ದು ಮಠದ ಇತಿಹಾಸ ಮತ್ತು ಪರಂಪರೆಯನ್ನು ಶಾಶ್ವತವಾಗಿ ಉಳಿಸಿಕೊಂಡು ಬರಲಾಗಿದೆ ಎಂದರು.
ಈ ಜಾತ್ರಾ ಮಹೋತ್ಸವವು ಗ್ರಾಮದಲ್ಲಿ ಒಂದು ಬಾವೈಕ್ಯತೆಯನ್ನು ಸಾರುವ ಸಮಾರಂಭವಾಗಿದ್ದು ಪ್ರತಿವರ್ಷವೂ ಸಮಾಜದಲ್ಲಿ ಉತ್ತಮ ಸೇವೆ ಸಲ್ಲಿಸಿದವರಿಗೆ ಮಠದ ವತಿಯಿಂದ ಸನ್ಮಾನಿಸಿ ಗೌರವಿಸಲಾಗುತ್ತಿದ್ದು ಈ ಬಾರಿ ಪತ್ರಕರ್ತರಿಗೆ ಸನ್ಮಾನಿಸಿ ಗೌರವಿಸಲಾಗುತ್ತಿದೆ ಎಂದರು.
ಶಾಸಕ ಬಸವರಾಜು ವಿ ಶಿವಗಂಗಾ ಮಾತನಾಡಿ, ಮಠಗಳು ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಜನರಲ್ಲಿ ಅಂಧಕಾರವನ್ನು ದೂರ ಮಾಡಿ ಆದ್ಯಾತ್ಮದ ಬೀಜವನ್ನು ಬಿತ್ತಿತ್ತಿದ್ದಾರೆ. ನಾನು ಸಹ ಗುರಿಯನ್ನು ತಲುಪಲು ಶ್ರೀ ಮಠಗಳು ಆರ್ಶೀರ್ವಾದವನ್ನು ಮಾಡಿವೆ ಎಂದರು.
ಸಮಾರಂಭದ ನೇತ್ರತ್ವವವನ್ನು ಎಡೆಯೂರು ಕ್ಷೇತ್ರದ ರೇಣುಕಾ ಶಿವಾಚಾರ್ಯ ಸ್ವಾಮಿಗಳು ವಹಿಸಿ ಆಶೀರ್ವಚನ ನೀಡಿದರು. ಬಿಳಕಿ ಹಿರೇಮಠದ ರಾಚೋಟೇಶ್ವರ ಶಿವಾಚಾರ್ಯ ಸ್ವಾಮಿಗಳು , ನಂದಿಪುರ ಪುಣ್ಯ ಕ್ಷೇತ್ರದ ಡಾ.ಮಹೇಶ್ವರ ಶಿವಾಚಾರ್ಯ ಸ್ವಾಮಿಗಳು.ಬಳ್ಳಾರಿ ಕಮ್ಮಾರ ಚೇಡು ಕಲ್ಯಾಣಸ್ವಾಮಿ ಮಠದ ಕಲ್ಯಾಣ ಸ್ವಾಮೀಜಿಗಳು, ಉಗುರುಗೊಳ್ಳದ ನಿರ್ವಣೇಸ್ವರಮಠದ ಮಹಂತಸ್ವಾಮೀಜಿ ಹಟ್ಟಿಗೂಡೂರಿನಗಿರಿ ಮಲ್ಲೇಶ್ವರ ಸ್ವಾಮೀಜಿಗಳು ಬಾಗವಹಿಸಿ ಮಾತನಾಡಿದರು.