ಬೆಂಗಳೂರು:ಏಳು ಐಪಿಎಸ್ ಅಧಿಕಾರಿಗಳನ್ನು ತಕ್ಷಣ ದಿಂದಲೇ ಜಾರಿಗೆ ಬರುವಂತೆ ವರ್ಗಾವಣೆಗೊಳಿಸಿ ರಾಜ್ಯ ಸರಕಾರ ಶುಕ್ರವಾರ ಆದೇಶಿಸಿದೆ. 

ಶಾಂತನು ಸಿನ್ಹಾ ಅವರನ್ನು ಸಿಐಡಿ ವಿಭಾಗದ ಖಾಲಿ ಇದ್ದ ಡಿಐಜಿಪಿ ಹುದ್ದೆಗೆ ನೇಮಕ ಮಾಡಲಾಗಿದೆ. ಯಾದಗಿರಿಯ ಎಸ್‌ಪಿ ಜಿ.ಸಂಗೀತಾ ಅವರನ್ನು ಅಪರಾಧ ತನಿಖಾ ಇಲಾ ಖೆಯ ಎಸ್‌ಪಿಯಾಗಿ ಹಾಗೂ ಅಪರಾಧ ತನಿಖಾ ಇಲಾಖೆಯ ಎಸ್‌ಪಿ ಪೃಥ್ವಿಕ್ ಶಂಕರ್ ಅವರನ್ನು ಯಾದಗಿರಿ ಎಸ್ ಪಿಯಾಗಿ ವರ್ಗಾವಣೆ ಮಾಡಲಾಗಿದೆ. ಬೆಂಗಳೂರು ಸಿಟಿ ಕೈಂ ವಿಭಾಗದ ಡಿಸಿಪಿ ಅಬ್ದುಲ್ ಅಹ್ಮದ್ ಅವರನ್ನು ಬಿಎಂ ಭದ್ರತಾ ಮತ್ತು ವಿಚಕ್ಷಣೆ ವಿಭಾಗದ ಗದ ನಿರ್ದೇಶಕರಾಗಿದ್ದ ಸದಾಶಿವ ಪ್ರಭು ಬಿ. ವರ್ಗಾವಣೆ ಹಿನ್ನೆಲೆ ಆ ಜಾಗಕ್ಕೆ ವರ್ಗಾ ವಣೆ ಮಾಡಲಾಗಿದೆ.ಬೆಂಗಳೂರು ರಾಜ್ಯ ಅಪರಾಧ ದಾಖಲೆ ಬ್ಯೂರೋದ ಎಸ್‌ಪಿ ಲಕ್ಷ್ಮಣ್ ನಿಂಬರಗಿ ಅವರನ್ನು ನೇಮಕ ಮಾಡಲಾಗಿದೆ.

ಶಿಖಾ ಕೇಂದ್ರ ಸೇವೆಗೆ

ಹಲವು ವರ್ಷಗಳಿಂದ ರಾಜ್ಯ ಸೇವೆಯಲ್ಲಿದ್ದ ಐಎಎಸ್ ಅಧಿಕಾರಿ ಸಿ.ಶಿಖಾ ಅವರನ್ನು ಕೇಂದ್ರ ಸರಕಾರದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಜಂಟಿ ಕಾರ್ಯ ದರ್ಶಿ ಹುದ್ದೆಗೆ ನೇಮಕ ಮಾಡಲಾಗಿದೆ. ಚೆನ್ನಬಸವಣ್ಣ ಲಂಗೋಟಿ ಅವರನ್ನು ಎಂ.ಬಿ.ಬೋರಲಿಂಗಯ್ಯ ಅವರಿಂದ ತೆರವಾಗಿದ ಮೈಸೂ ರಿನ ಕರ್ನಾಟಕ ಪೊಲೀಸ್ ಅಕಾಡೆಮಿ ನಿರ್ದೇಶಕ ಹುದ್ದೆಗೆ ವರ್ಗಾವಣೆ ಮಾಡಲಾಗಿದೆ. ಭಯೋತ್ಪಾದನೆ ನಿಗ್ರಹ ಕೇಂದ್ರ ಬೆಂಗಳೂರಿನ ಎಸ್‌ಪಿ ಶಿವಾಂಶು ರಜಪೂತ್ ಅವರನ್ನು ಅಪರಾಧ ದಾಖಲೆಗಳ ವಿಭಾಗಕ್ಕೆ ವರ್ಗಾವಣೆ ಮಾಡಲಾಗಿದೆ

Share.
Leave A Reply

Exit mobile version