ಚನ್ನಗಿರಿ;

ಸಹಕಾರ ಸಂಘಗಳ ಮೂಲಕ ರೈತರು ಸದೃಡರಾಗುತ್ತಿದ್ದು ಸಂಘಗಳ ನಿರಂತರ ಚಟುವಟಿಕೆಗಳಿಗೆ ತರಬೇತಿ ಕಾರ್ಯಗಾರಗಳು ಆಗತ್ಯವಾಗಿವೆ ಎಂದು ಶಿವಮೊಗ್ಗ, ಚಿತ್ರದುರ್ಗ,ದಾವಣಗೆರೆ ಜಿಲ್ಲಾ ಹಾಲು ಸಹಕಾರ ಸಂಘಗಳ ಒಕ್ಕೂಟದ ನಿರ್ದೇಶಕ ಎಚ್.ಕೆ.ಬಸಪ್ಪ ಹೇಳಿದರು.

ಸೋಮವಾರ ಪಟ್ಟಣದ ತುಮ್‌ಕೋಸ್ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ,ದಾವಣಗೆರೆ ಸಹಕಾರ ಇಲಾಖೆ, ದಾವಣಗೆರೆ ಜಿಲ್ಲಾ ಸಹಕಾರ ಒಕ್ಕೂಟ, ಶಿವಮೊಗ್ಗ, ಚಿತ್ರದುರ್ಗ,ದಾವಣಗೆರೆ ಜಿಲ್ಲಾ ಹಾಲು ಉತ್ಪಾದಕರ ಸಂಘಗಳ ಸಂಯುಕ್ತಾಶ್ರಯದಲ್ಲಿ ಚನ್ನಗಿರಿ ತಾಲೂಕಿನ ಹಾಲು ಉತ್ಪಾದಕರ ಸಂಘಗಳ ಕಾರ್ಯದರ್ಶಿಗಳಿಗೆ ಒಂದು ದಿನದ ತರಬೇತಿ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದರು.

ಸಹಕಾರ ಸಂಘಗಳ ನಿರ್ವಹಣೆಯಲ್ಲಿ ಕಾರ್ಯದರ್ಶಿಗಳ ಪಾತ್ರ ಪ್ರಮುಖವಾಗಿದ್ದು ಕಾರ್ಯದರ್ಶಿಗಳಿಗೆ ಸಂಘಗಳ ನಿರ್ವಹಣೆ ಮತ್ತು ಚುನಾವಣೆಯ ಸಂಧರ್ಭಧಲ್ಲಿ ಯಾವ ರೀತಿ ನಡೆದುಕೊಳ್ಳಬೇಕು ಮತ್ತು ಸಹಕಾರ ಸಂಘಗಳ ಅಭಿವೃದ್ದಿ ಪಡಿಸುವಲ್ಲಿ ಯಾವ ಯಾವ ಯೋಜನೆಗಳನ್ನು ಅಳವಡಿಸಿಕೊಳ್ಳಬೇಕು ಎನ್ನುವುದರ ಕುರಿತಾಗಿ ಮಾಹಿತಿ ನೀಡಲಾಗುತ್ತಿದೆ. ರೈತ ವರ್ಗಕ್ಕೆ ಇಂತಹ ಕಾರ್ಯಗಾರಗಳು ಆಗತ್ಯವಾಗಿವೆ ಎಂದರು.

ದಾವಣಗೆರೆ ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ಸಿರಿಗೆರೆ ರಾಜಣ್ಣ ಮಾತನಾಡಿ ದಾವಣಗೆರೆ ಜಿಲ್ಲೆಯಲ್ಲಿ ೩೫೦ ಕ್ಕೂ ಹೆಚ್ಚು ಹಾಲು ಉತ್ಪಾದಕರ ಸಂಘಗಳು ಕಾರ್ಯ ನಿರ್ವಹಿಸುತ್ತಿದ್ದು ದಾವಣಗೆರೆ ೧೧೪,ಹರಿಹರ ೫೫, ಚನ್ನಗಿರಿ ೮೦, ಹೊನ್ನಾಳಿ ಮತ್ತು ನ್ಯಾಮತಿ ೧೪೦, ಜಗಳೂರು ತಾಲೂಕಿನಲ್ಲಿ ೪೫ ಸಂಘಗಳು ಕಾರ್ಯನಿರ್ವಹಿಸುತ್ತಿದ್ದು ರ‍್ಯೆತರಿಗೆ ಅನುಕೂಲವಾಗುವ ಸಮಗ್ರ ಮಾಹಿತಿಗಳನ್ನು ಸಂಘದ ವತಿಂಯಿAದ ನೀಡಲಾಗುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಚನ್ನಗಿರಿ ತಾಲೂಕು ಸಹಕಾರ ಅಭಿವೃದ್ದಿ ಅಧಿಕಾರಿ ವಿಜಯ, ಸಹಾಯಕ ವ್ಯವಸ್ಥಾಪಕ ಹರೀಶ್ ಕರೇಗೌಡ್ರು, ವಿಸ್ತರಣಾಧಿಕಾರಿ ಕರಿಯಮ್ಮ, ಗುಂಡಪ್ಪ ಯರಗುತ್ತಿ, ಅರ್.ಸಂಜೀವ್‌ಕುಮಾರ್,ಸAತೋಷ್‌ಕುಮಾರ್, ವಿ.ರಂಗನಾಥ್ ಹಾಜರಿದ್ದರು.

ಸಹಕಾರ ಸಂಘಗಳ ಚುನಾವಣಾ ಪ್ರಕ್ರಿಯೆ ಕುರಿತು ಲಿಯಾಖತ್ ಅಲಿ, ಯಶಸ್ವಿನಿ ಅರೋಗ್ಯ ವಿಮಾ ಕುರಿತುಟಿ.ಆರ್. ಮಂಜುನಾಥ್ ಮಾಹಿತಿ ನೀಡಿದರು.

 

Share.
Leave A Reply

Exit mobile version