*01,♈🐏 🪷ಮೇಷ ರಾಶಿ🪷*
📖,ವ್ಯಾಪಾರದಲ್ಲಿ ಆರ್ಥಿಕ ಲಾಭ ದೊರೆಯಲಿದೆ. ಆದರೆ, ಕೆಲವರು ತಮ್ಮ ವೃತ್ತಿಜೀವನದಲ್ಲಿ ಸಣ್ಣ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ನಿಮ್ಮ ಮಾತಿನ ಜಾಣ್ಮೆ ಸರಳವಾದ ನಡೆ ನುಡಿಗಳಿಂದ ಜನರ ಪ್ರಶಂಸೆಯನ್ನು ಪಡೆಯಲು ಹೇರಳ ಅವಕಾಶಗಳು ಒದಗಿ ಬರುವುದು. ಸಂಗಾತಿಯ ಸಹಕಾರ ದೊರೆಯುವುದು. ವಾಹನ ಚಲಾಯಿಸುವಾಗ ಹೆಚ್ಚರದಿಂದಿರಿ, ಭಗವಂತನ ಅನುಗ್ರಹ ನಿಮ್ಮ ಕಡೆ ಇರುವುದರಿಂದ ಹೆಚ್ಚಿಗೆ ಚಿಂತಿಸುವ ಅಗತ್ಯವಿಲ್ಲ,
*⚜️,ಈಶ್ವರನ ಪ್ರಾರ್ಥನೆ ಮಾಡಿ,⚜️*
*02, ♉🐂🪷ವೃಷಭ ರಾಶಿ🪷*
📖,ನಿಮ್ಮ ಆರೋಗ್ಯದ ಕಡೆ ಗಮನ ಕೊಡಿ. ಅನಗತ್ಯ ಚರ್ಚೆಗಳನ್ನು ತಪ್ಪಿಸಿ. ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳಿ ಇಂದು ನಿಮಗೆ ಶುಭ ತರುವ ದಿನವಾಗಿದೆ, ದಿನವಿಡೀ ಲವಲವಿಕೆಯಿಂದ ಇರುವಿರಿ, ಜನರು ನಿಮ್ಮ ಮಾತು ಮತ್ತು ವಿಚಾರಗಳನ್ನು ಗೌರವಿಸುವರು. ಮಕ್ಕಳ ವಿದ್ಯಾಭ್ಯಾಸದಲ್ಲಿ ಏರುಪೇರು, ಪ್ರಯಾಣ ಮಾಡುವಾಗ ಜಾಗ್ರತೆ ಇರಲಿ,
*⚜️,ಗಣಪತಿಯ ಪ್ರಾರ್ಥನೆ ಮಾಡಿ,⚜️*
*03,♊👥🪷 ಮಿಥುನ ರಾಶಿ🪷*
📖,ವ್ಯಾಪಾರ ವಹಿವಾಟುಗಳಿಗೆ ಸಹಿ ಹಾಕುವಾಗ ವ್ಯಾಪಾರಸ್ಥರು ಸ್ವಲ್ಪ ಎಚ್ಚರಿಕೆ ವಹಿಸಬೇಕು. ಹಣಕಾಸಿನ ವಿಷಯಗಳಲ್ಲಿ ಯಾರನ್ನೂ ಕುರುಡಾಗಿ ನಂಬಬೇಡಿ ಬರೀ ನಿರೀಕ್ಷೆಯಲ್ಲಿಯೇ ಕಾಲ ಕಳೆಯುತ್ತಿರುವ ನಿಮಗೆ ಯಾವುದೇ ಕೆಲಸವನ್ನು ಸಕಾಲಕ್ಕೆ ಮಾಡಲಾಗುತ್ತಿಲ್ಲ ಎಂಬ ಕೊರಗು ಕಾಡುತ್ತದೆ. ಸ್ನೇಹಿತರಿಂದ ದನ ಸಹಾಯವಾಗುವುದು, ಹಿರಿಯರ ಸಲಹೆಯನ್ನು ಪಾಲಿಸಿ, ಆದಷ್ಟು ಭಗವಂತನ ಮೊರೆ ಹೋಗುವುದು ಒಳ್ಳೆಯದು,
*04, ♋🦀 🪷ಕಟಕ ರಾಶಿ🪷*
📖,ನಿಮ್ಮ ಕುಟುಂಬದ ಸದಸ್ಯರ ಆರೋಗ್ಯದ ಕಡೆ ಗಮನ ಕೊಡಿ. ನಿಮ್ಮ ಸಂಗಾತಿಯೊಂದಿಗೆ ಗುಣಮಟ್ಟದ ಸಮಯವನ್ನು ಕಳೆಯಿರಿ ದೂರದ ಊರಿಗೆ ಪ್ರಯಾಣ ಮಾಡುವ ಸಾಧ್ಯತೆಗಳಿರುವುದರಿಂದ, ನಾಳೆಯ ಕೆಲಸಗಳನ್ನು ಬೇಗನೆ ಪೂರ್ಣಗೊಳಿಸಿ, ಸ್ಥಳ ಬದಲಾವಣೆಯ ಸಾಧ್ಯತೆ ಇದೆ ಅಥವಾ ಮಾಡುವ ವೃತ್ತಿಯಲ್ಲಿ ಪ್ರಗತಿ ಕಂಡು ಬರುವುದು,*⚜️,ಶ್ರೀಪಾರ್ವತಿಪರಮೇಶ್ವರನನ್ನು ಪ್ರಾರ್ಥಿಸಿ,⚜️*
*05, ♌🦁 🪷ಸಿಂಹ ರಾಶಿ🪷*
📖,ಎಚ್ಚರಿಕೆಯಿಂದ ವಾಹನ ಚಲಾಯಿಸಿ. ಗಾಯಗಳು ಸಂಭವಿಸಬಹುದು. ಸಾಮಾಜಿಕ ಸ್ಥಾನಮಾನ ಮತ್ತು ಪ್ರತಿಷ್ಠೆ ಹೆಚ್ಚಾಗುತ್ತದೆ. ಮೋಸ ಮಾಡುವವರು ನಿಮ್ಮ ಸುತ್ತಲೂ ಇರುವರು, ಮಾಡುವ ಕೆಲಸದಲ್ಲಿ ಜಾಗ್ರತೆ ವಹಿಸಿ, ಸರಿಯಾಗಿ ಸಾಗುತ್ತಿರುವ ಕಾರ್ಯ ವಿಧಾನಗಳಲ್ಲಿ ಬದಲಾವಣೆ ಬೇಡ. ಸದ್ಯದ ಪರಿಸ್ಥಿತಿ ಅಷ್ಟೇನೂ ಉತ್ತಮವಾಗಿಲ್ಲ. ವ್ಯಾಪಾರದಲ್ಲಿ ಅಭಿವೃದ್ಧಿ ಪಡೆಯಬೇಕೆಂದರೆ,
*⚜️,ಕುಲದೇವರನ್ನು ಸ್ಮರಿಸಿ. ಜತೆಗೆ ಗ್ರಾಮದೇವತೆಗೆಪೂಜೆ ಮಾಡಿಸಿ,⚜️*
*06, ♍👸🏼🪷ಕನ್ಯಾ ರಾಶಿ🪷*
📖,ಹಣಕಾಸಿನ ವಿಷಯಗಳಲ್ಲಿ ಬುದ್ಧಿವಂತಿಕೆಯಿಂದ ನಿರ್ಧಾರಗಳನ್ನು ತೆಗೆದುಕೊಳ್ಳಿ. ಕಚೇರಿಯಲ್ಲಿ ಅನಗತ್ಯ ವಾದ ವಿವಾದಗಳಿಂದ ದೂರವಿರಿ. ಅಧಿಕ ಖರ್ಚು ಮಾಡುವುದು ಉತ್ತಮವಲ್ಲ, ಸ್ನೇಹಿತರ ಸಹಾಯ ಪಡೆಯಿರಿ, ವೃಥಾ ನಿಂದನೆಗಳನ್ನು ಎದುರಿಸಬೇಕಾಗಿ ಬರಬಹುದು. ನಿಮ್ಮನ್ನು ನೀವೇ ವಿಮರ್ಶಿಸಿಕೊಳ್ಳಿ.. ದೇವರಮನೆಯಲ್ಲಿ ಶಂಖವನ್ನಿಟ್ಟು ಪೂಜಿಸಿ,
*⚜️,ಶನಿ ಸ್ತೋತ್ರವನ್ನು ಪಠಿಸಿ,⚜️*
*07, ♎⚖️🪷ತುಲಾ ರಾಶಿ🪷*
📖,ನಿಮ್ಮ ಮನಸ್ಸು ಗೊಂದಲಕ್ಕೊಳಗಾಗಬಹುದು, ನಿಮ್ಮ ಸಂಗಾತಿಯ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ನಿಮಗೆ ಆಗದವರು ಕೆಲಸದ ಸ್ಥಳದಲ್ಲಿ ನಿಮ್ಮನ್ನು ಕೆಣಕುವ ಸಾಧ್ಯತೆ ಇದೆ. ಅವರೆಲ್ಲರನ್ನು ನಿಮ್ಮ ಬುದ್ಧಿಬಲದಿಂದ ದೂರ ಇಡಿ. ಈ ದಿನ ದೂರ ಪ್ರಯಾಣ ಮಾಡುವುದು ಬೇಡ, ಪ್ರಯಾಣದ ಸಮಯದಲ್ಲಿ ಜಾಗ್ರತೆ ಇರಲಿ,
*⚜️,ಶನಿ ಮಂತ್ರವನ್ನು ಪಠಿಸಿ. ಆಂಜನೇಯದೇವಸ್ಥಾನದಲ್ಲಿ ಎಳ್ಳುದೀಪ ಹಚ್ಚಿ,⚜️*
*08, ♏🦂🪷ವೃಶ್ಚಿಕ ರಾಶಿ🪷*
📖,ಅಧಿಕ ಖರ್ಚು ಇರುತ್ತದೆ. ನಿಮ್ಮ ಪೋಷಕರಿಂದ ನೀವು ಬೆಂಬಲವನ್ನು ಪಡೆಯುತ್ತೀರಿ. ವಾಹನ ನಿರ್ವಹಣೆಗೆ ಖರ್ಚು ಹೆಚ್ಚಾಗಲಿದೆ. ಸ್ನೇಹಿತರು ಮತ್ತು ಕುಟುಂಬ ಸದಸ್ಯರ ಬೆಂಬಲ ನಿಮಗಿರುವುದರಿಂದ ನೀವು ಹಮ್ಮಿಕೊಂಡ ಕಾರ್ಯಗಳನ್ನು ಧೈರ್ಯದಿಂದ ಮುನ್ನುಗ್ಗಿ ಮಾಡಬಹುದು. ಎಲ್ಲರನ್ನು ನಗುಮುಖದಿಂದ ಸ್ವಾಗತಿಸುವಿರಿ. ಎಲ್ಲಾ ರೀತಿಯಿಂದಲೂ ಈ ದಿನ ಉತ್ತಮ ಫಲ ಪಡೆಯುವ ಯೋಗವಿದೆ,
*⚜️,ನಿಮ್ಮ ಮನೆದೇವರ ಸ್ಮರಣೆ ಮಾಡಿ,⚜️*
*09, ♐🏹🪷ಧನಸ್ಸು ರಾಶಿ🪷*
📖,ನಿಮ್ಮ ಕೆಲಸದಲ್ಲಿ ನೀವು ಬಯಸಿದ ಫಲಿತಾಂಶಗಳನ್ನು ಪಡೆಯುತ್ತೀರಿ. ಆರ್ಥಿಕ ಲಾಭಕ್ಕಾಗಿ ಹೊಸ ಅವಕಾಶಗಳು ದೊರೆಯಲಿವೆ. ಆರ್ಥಿಕ ಸಮಸ್ಯೆ ಕಡಿಮೆ ಆಗುವುದು. ಮನೆಯ ಹಿರಿಯರು ಇದ್ದು ನಿಮಗೆ ಸಕಾಲಿಕ ಎಚ್ಚರಿಕೆಯನ್ನು ನೀಡುವರು. ಹಾಗಾಗಿ ಹಿರಿಯರ ಮಾತನ್ನು ಉದಾಸೀನ ಮಾಡದಿರಿ. ಉದ್ಯೋಗದಲ್ಲಿ ಸಕಾರಾತ್ಮಕ ಬದಲಾವಣೆಗಳು ಹಾಗುವ ಸಾಧ್ಯತೆ ಇದೆ,
*⚜️,ಶ್ರೀ ಶಕ್ತಿ ದೇವತೆಗೆ ಪೂಜೆ ಸಲ್ಲಿಸಿ,⚜️*
*10, ♑🐐🪷ಮಕರ ರಾಶಿ🪷*
📖,ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ. ಹಣದ ಒಳಹರಿವು ಹೆಚ್ಚಾಗುತ್ತದೆ. ಹೊಸ ಯೋಜನೆಗೆ ಜವಾಬ್ದಾರಿ ಸಿಗಲಿದೆ. ಆದಾಯದ ಮೂಲವಾಗಲಿದೆ. ವಿದೇಶದಿಂದ ಅಥವಾ ದೂರದೂರಿನಿಂದ ಬರುವ ಸುದ್ದಿಯು ನಿಮಗೆ ಸಂತಸವನ್ನುಂಟು ಮಾಡುತ್ತದೆ. ವಿವಿಧ ಮೂಲಗಳಿಂದ ಹಣಕಾಸು ಒದಗಿ ಬರುವುದರಿಂದ ಇಚ್ಛಿತ ಕಾರ್ಯಗಳು ಈ ದಿನ ಕೈಗೂಡುವುದು,
*⚜️,ಮನೋನಿಯಾಮಕ ರುದ್ರದೇವರನ್ನು ಪ್ರಾರ್ಥಿಸಿ ಶುಭವಾಗುವುದು,⚜️*
*11, ♒🏺🪷ಕುಂಭ ರಾಶಿ🪷*
📖,ಸಹೋದ್ಯೋಗಿಗಳೊಂದಿಗೆ ಒಟ್ಟಾಗಿ ಕೆಲಸ ಮಾಡಿ. ಇದು ಕೆಲಸದ ಉತ್ತಮ ಫಲಿತಾಂಶಗಳನ್ನು ನೀಡುತ್ತದೆ. ಪೂರ್ಣ ವಿಶ್ವಾಸ ಇರುತ್ತದೆ. ನಿಮಗಿಂತ ಹೆಚ್ಚಿನ ಬುದ್ಧಿವಂತರು ನಿಮ್ಮನ್ನು ಭೇಟಿ ಮಾಡಲಿದ್ದಾರೆ. ಹಣಕಾಸಿನ ಸ್ಥಿತಿ ಉತ್ತಮವಾಗಿದ್ದರೂ, ಸದ್ಯದ ಗ್ರಹಸ್ಥಿತಿ ಉತ್ತಮವಾಗಿಲ್ಲ. ಕುಟುಂಬದ ಜೊತೆ ಯಾವುದೇ ರೀತಿಯ ಜಗಳ ಬೇಡ, ಈ ದಿನ ಮಡದಿ ಮಕ್ಕಳೇ ನಿಮ್ಮನ್ನು ಆದರಿಸದೆ ಹೋಗುವ ಸಾಧ್ಯತೆ ಇದೆ,
*⚜️,ಶ್ರೀ ಗಾಯತ್ರಿ ಮಂತ್ರ ಪಠಿಸಿ,⚜️*
*12, ♓🐟🪷ಮೀನ ರಾಶಿ🪷*
📖,ವ್ಯವಹಾರದಲ್ಲಿ ತೊಂದರೆ ಉಂಟಾಗಬಹುದು. ಆದರೆ ಸ್ನೇಹಿತರ ಸಹಾಯದಿಂದ ಸಮಸ್ಯೆ ಬಗೆಹರಿಯಲಿದೆ. ಮನೆಯಲ್ಲಿ ಕಲಹದ ವಾತಾವರಣ ನಿರ್ಮಾಣವಾಗದಿರಲು ಸರ್ವ ಪ್ರಯತ್ನ ನಡೆಸಬೇಕು. ಕೆಲಸದ ಸ್ಥಳದಲ್ಲಿ ಚಾಡಿ ಚುಚ್ಚುವರು ಅಧಿಕವಾಗಿರುತ್ತಾರೆ. ಅದಕ್ಕಾಗಿ ತಲೆ ಕೆಡಿಸಿಕೊಳ್ಳದೆ ಮುಂದುವರೆಯಿರಿ. ನಿಮ್ಮಿಂದ ಸಹಾಯ ಬಯಸಿ ಬರುವವರಿಗೆ ಸೂಕ್ತ ಮಾರ್ಗದರ್ಶನ ನೀಡಿ,*⚜️,ಶ್ರೀದುರ್ಗಾದೇವಿಯನ್ನು ಪ್ರಾರ್ಥಿಸಿ,⚜️*
🚩