
ಜಗಳೂರು ; ತಾಲೂಕಿನ ಮರಿಕಟ್ಟೆ ಗ್ರಾಮದಲ್ಲಿ ಬುಧವಾರ ಸಂಜೆ ಭಾರಿ ಮಳೆ-ಗಾಳಿಗೆ ಫಲಕ್ಕೆ ಬಂದ ಪಪ್ಪಾಯಿ ನೆಲಕ್ಕಚ್ಚಿದ್ದು ಲಕ್ಷಾಂತರ ಮೌಲ್ಯದ ಫಸಲು ನಷ್ಟವಾಗಿದೆ.
ರೈತರಾದ ಗೌರಮ್ಮ ಕೋಂ ಲೇ.ಪರಸಪ್ಪ ಅವರಿಗೆ ಸೇರಿದ 2ಎಕರೆ ಜಮೀನಿನಲ್ಲಿ ಅಂದಾಜು ₹4ಲಕ್ಷ ಮೌಲ್ಯದ ಪಪ್ಪಾಯಿ ಸಂಪೂರ್ಣ ಹಾನಿಗೊಳಗಾಗಿದೆ..ನಾಗರಾಜ್ ಎಂಬುವವರ 1ಎಕರೆ ಜಮೀನಿನಲ್ಲಿಯೂ ಫಲಕ್ಕೆ ಬಂದ ₹1ಲಕ್ಷದ ಮೌಲ್ಯದ ಪಪ್ಪಾಯಿ ಸಂಪೂರ್ಣ ನೆಲ್ಲಕ್ಕುರುಳಿದೆ.ಜೊತೆಗೆ ಅಡಿಕೆ ಗಿಡಗಳು ಭಾಗಶಃ ಹಾನಿಗೊಳಗಾಗಿವೆ ಎಂದು ರೈತರು ತಿಳಿಸಿದ್ದಾರೆ.
ಅದೇ ಗ್ರಾಮದ ಸುತ್ತಮುತ್ತ ಇರುವ ಮಹಾಂತೇಶ್,ಗಿಡ್ಡಬೋರಪ್ಪ,ಎಂಬುವವರ ಜಮೀನುಗಳಲ್ಲಿಯೂ ಪಪ್ಪಾಯಿ ಬೆಳೆ ಸುಮಾರು ಅರ್ಧ ಎಕರೆಯಷ್ಟು ಭಾಗಶಃ ಹಾನಿಗೊಳಗಾಗಿವೆ ಎಂದು ಅಂದಾಜಿಸಲಾಗಿದೆ.
ಜಮೀನಿಗೆ ಕಂದಾಯ ಇಲಾಖೆ ಅಧಿಕಾರಿಗಳು ಸಮೀಕ್ಷೆ ನಡೆಸಿ ಬೆಳೆನಷ್ಟದ ವರದಿ ತಯಾರಿಸಿಕೊಂಡು ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ಸಲ್ಲಿಸಿದ್ದಾರೆ.