ಶಿವಮೊಗ್ಗ.

ಪ್ರತಿಯೊಬ್ಬರೂ 40 ವರ್ಷಗಳ ನಂತರ ತಮ್ಮ ಆರೋಗ್ಯವನ್ನು ಸದೃಢವಾಗಿ ಇಟ್ಟುಕೊಳ್ಳುವುದರ ಜೊತೆಗೆ ಸಕಾಲದಲ್ಲಿ ಕೀಲು ಮೂಳೆಯ ಸಾಂದ್ರತೆಯನ್ನು ಪರೀಕ್ಷಿಸಿಕೊಳ್ಳುವುದು ಒಳ್ಳೆಯದು ಇದರಿಂದ ಮುಂದೆ ಆಗಬಹುದಾದ ದೊಡ್ಡ ಅನಾಹುತವನ್ನು ತಪ್ಪಿಸಬಹುದು ಎಂದು ನಾರಾಯಣ ಹೃದಯಾಲಯದ ಪ್ರಖ್ಯಾತ ಕೀಲು ಮೂಳೆ. ಮರುಜೋಡೋಣ ತಜ್ಞ ಡಾಕ್ಟರ್ ಚೇತನ್ ಮಠದ್ ಅಭಿಮತ ವ್ಯಕ್ತಪಡಿಸಿದರು.

ಅವರು ನಗರದ ಹೃದಯ ಭಾಗವಾದ ಕುವೆಂಪು ರಸ್ತೆಯಲ್ಲಿರುವ ನಾರಾಯಣ ಕ್ಲಿನಿಕ್ ನಲ್ಲಿ ಇಂದು ಮೊಣಕಾಲು ನೋವಿನಿಂದ ಸಂಪೂರ್ಣ ಸ್ವಾತಂತ್ರವೆಂಬ ಶೀರ್ಷಿಕೆ ಯಡಿ ಸಾರ್ವಜನಿಕರಿಗೆ ಹಮ್ಮಿಕೊಳ್ಳಲಾದ ಉಚಿತ ಮೂಳೆ ಸಾಂದ್ರತೆ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.

ಮನುಷ್ಯನ ದೇಹದಲ್ಲಿ ಮೂಳೆ ತುಂಬಾ ಪ್ರಮುಖ ಪಾತ್ರ ವಹಿಸುತ್ತದೆ ಇಂದು ಶೇಕಡ 30ರಷ್ಟು ಜನ ಮೂಳೆ ತೊಂದರೆಯಿಂದ ಬಳಲುತ್ತಿದ್ದಾರೆ ಪ್ರಾರಂಭಿಕ ಹಂತದಲ್ಲೇ ಕಾಯಿಲೆಯನ್ನು ಪತ್ತೆ ಹಚ್ಚಿ ಸಕಾಲದಲ್ಲಿ ಚಿಕಿತ್ಸೆ ಪಡೆದುಕೊಂಡರೆ ಕಾಯಿಲೆಯನ್ನು ಗುಣಪಡಿಸಿಕೊಳ್ಳಬಹುದು. ಪ್ರತಿಯೊಬ್ಬರೂ ಪ್ರತಿನಿತ್ಯ ವ್ಯಾಯಾಮ ಯೋಗ ಪ್ರಾಣಾಯಾಮ ಹಾಗೂ ಪೌಷ್ಟಿಕಾಂಶ ಆಹಾರ ಪದಾರ್ಥಗಳನ್ನು ಸೇವಿಸುವುದರಿಂದ ನಮ್ಮ ಕೀಲು ಮೂಳೆಗಳು ಸದೃಢವಾಗಿರುತ್ತವೆ.

ಇಂತಹ ವಿಶೇಷ ಶಿಬಿರಗಳಲ್ಲಿ ಸಾರ್ವಜನಿಕರು ಭಾಗವಹಿಸಿ ಉಚಿತವಾಗಿ ಪರೀಕ್ಷೆ ಮಾಡಿಸಿಕೊಳ್ಳುವುದರ ಜೊತೆಗೆ ಅಗತ್ಯ ಮಾಹಿತಿಯನ್ನು ಪಡೆದುಕೊಳ್ಳುವುದು ಒಳ್ಳೆಯದು.

ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಜಿ .ವಿಜಯಕುಮಾರ್ ಮಾತನಾಡುತ್ತಾ ಇತ್ತೀಚಿನ ಆಹಾರ ಪದ್ಧತಿಯಿಂದ ಮತ್ತು ನಮ್ಮ ಜೀವನಶೈಲಿಯಿಂದ ಕಡಿಮೆ ವಯಸ್ಸಿನಲ್ಲಿ ಹಲವಾರು ಸಮಸ್ಯೆಗಳನ್ನ ಎದುರಿಸುತ್ತಾ ಇದ್ದೇವೆ, ಇಂತಹ ಮೂಳೆ ಪರೀಕ್ಷೆಗಳನ್ನು ಹೊರಗಡೆ ಮಾಡಿಸಿಕೊಂಡರೆ 2000 ದಿಂದ 3000 ಖರ್ಚಾಗುತ್ತೆ ಶಿಬಿರದಲ್ಲಿ ಆದರೆ ಇಲ್ಲಿ ಸಂಪೂರ್ಣವಾಗಿ ಉಚಿತವಾಗಿ ಮಾಡುತ್ತಿರುವುದರಿಂದ ಇದರ ಪ್ರಯೋಜನವನ್ನು ಪಡೆದುಕೊಳ್ಳಬೇಕು ಆದ್ದರಿಂದ ಸಕಾಲದಲ್ಲಿ ನಮ್ಮ ಆರೋಗ್ಯವನ್ನು ತಪಾಸಣೆ ಮಾಡಿಸಿಕೊಳ್ಳುವುದು ಉತ್ತಮ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಡಾಕ್ಟರ್ ಅಭಿಲಾಶ್. ಸಹನಾ. ಶ್ವೇತಾ . ಪ್ರದೀಪ್. ಪ್ರೀತಿ. ಬಿಂದು ವಿಜಯ ಕುಮಾರ್ ಹಾಗೂ ಆಸ್ಪತ್ರೆಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು

Share.
Leave A Reply

Exit mobile version