ದಾವಣಗೆರೆ : ಮಧ್ಯ ಕರ್ನಾಟಕ ಬಯಲು ಸೀಮೆಯ ಅಡಕೆ ಬೆಳೆಗಾರ ಪ್ರಾತಿನಿಧಿಕ ಬಹುದೊಡ್ಡ ಸಹಕಾರಿ ಸಂಸ್ಥೆಯಾದ ತುಮ್ ಕೋಸ್ ಚುನಾವಣೆ ಮತ ಎಣಿಕೆ ಆರಂಭವಾಗಿದ್ದು ರಾತ್ರಿ 10 ಕ್ಕೆ  ಮಾಜಿ ಸಂಸದ ಸಿದ್ದೇಶ್ವರ ನೇತೃತ್ವದ ಶಿವಕುಮಾರ್  ತಂಡ 15 ಸ್ಥಾನದಲ್ಲೂ ಮುನ್ನಡೆ ಸಾಧಿಸಿದ್ದು, ಕೆಲವೇ ಗಂಟೆಗಳಲ್ಲಿ ಫಲಿತಾಂಶ ಹೊರಬೀಳಲಿದೆ.

ಬೆಳಗ್ಗೆ 9ರಿಂದ ಸಂಜೆ 4ಗಂಟೆವರೆಗೂ ಮತದಾನ ನಡೆದಿದ್ದು, ಭಾರೀ ಜನಸ್ತೋಮದ ನಡುವೆ ಕೌಟಿಂಗ್ ನಡೆಯುತ್ತಿದೆ. ಮೂಲಗಳ ಪ್ರಕಾರ ಶಿವಕುಮಾರ್ ತಂಡದ 15 ಸದಸ್ಯರು ಗೆಲುವು ಸಾಧಿಸಲಿದ್ದಾರೆ.

ತುಮ್ ಕೋಸ್ ಒಟ್ಟು ಸದಸ್ಯರಲ್ಲಿ ಈವರೆಗೂ 9,420 ಮಂದಿ ಮತದಾನಕ್ಕೆ ಅರ್ಹರಾಗಿದ್ದರು. ಇನ್ನು 5205 ಜನ ಸದಸ್ಯರು ಅನರ್ಹರಾಗಿದ್ದು, ಅನರ್ಹರಾದವರು ಮತದಾನ ಮಾಡಿದ್ದು, ಆಡಳಿತ ವಿರೋಧಿ ಶಿವಕುಮಾರ್ ಮುನ್ನಡೆ ಸಾಧಿಸಿದ್ದಾರೆ ಎಂಬ ಮಾಹಿತಿ ಇದೆ. ಶಿವಕುಮಾರ್ ರಾಜ್ಯ ರಾಜಕಾರಣಕ್ಕೆ ಎಂಟ್ರಿಯಾಗಿದ್ದಾರೆ. ಸಹಕಾರವಲಯಕ್ಕೆ ಅವರ ಕೊಡುಗೆ ಏನು ಇಲ್ಲ ಎಂಬ ಆರೋಪದ ನಡುವೆಯೂ ಶಿವಕುಮಾರ್ ನೇತೃತ್ವದ ತಂಡ ಮುನ್ನಡೆ ಸಾಧಿಸಿದೆ.

ಅನರ್ಹರು ಅರ್ಹರ ಪಟ್ಟಿಗೆ:

ಈಗಾಗಲೇ ಎಚ್.ಎಸ್.ಶಿವಕುಮಾರ್ ಬಣದಿಂದ 3194 ಅನರ್ಹ ಮತದಾರರನ್ನು ಅರ್ಹರೆಂದು ಪರಿಗಣಿಸಲು ನ್ಯಾಯಾಲಯದಿಂದ ಆದೇಶ ತರಲಾಗಿದೆ. ಹಾಗೆ ಆರ್.ಎಂ. ರವಿ ಬಣದಿಂದ 2778 ಅನರ್ಹ ಮತದಾರರನ್ನು ಅರ್ಹ ಮತದಾರರೆಂದು ಪರಿಗಣಿಸಿ ಆದೇಶ ತಂದಿದ್ದು, ಎರಡು ಬಣ ಸೇರಿ ಕನಿಷ್ಠ 5000 ಮತದಾರರು ಮತ ಚಲಾಯಿಸಿದ್ದರು.

ಬಣಗಳ ತುರುಸು

15 ನಿರ್ದೇಶಕ ಸ್ಥಾನಗಳಿಗೆ ಚುನಾ ವಣೆ ನಡೆಯಲಿದ್ದು, ಚುನಾವಣಾ ಕಣದಲ್ಲಿ ಎರಡೂ ಬಣ ಸೇರಿ ಒಟ್ಟು 33 ಜನ ಅಭ್ಯರ್ಥಿಗಳಿದ್ದಾರೆ. ಹಾಲಿ ಅಧ್ಯಕ್ಷ ಆರ್.ಎಂ.ರವಿ ಮತ್ತು ಮಾಜಿ ಅಧ್ಯಕ್ಷ ಎಚ್.ಎಸ್. ಶಿವಕುಮಾ‌ರ್ ಬಣದ ನಡುವೆ ತೀವ್ರ ಪೈಪೋಟಿ ನಡೆದಿದೆ. ಈಗಾಗಲೇ ತುಮ್ ಕೋಸ್ ವ್ಯಾಪ್ತಿಯಲ್ಲಿ ಎರಡು ಬಣ ತುರುಸಿನ ಪ್ರಚಾರ ನಡೆಸಿದ್ದಾರೆ. ಚುನಾವಣೆ ಒಂದು ರೀತಿ ಎಂಎಲ್‌ ಎ ಚುನಾವಣೆ ಖದರ್ ಪಡೆದು ಕೊಂಡಿತ್ತು. ಅಡಕೆ ನಾಡಿನಲ್ಲಿ ಚುನಾ ವಣೆ ದೊಡ್ಡ ಸದ್ದು ಮಾಡಿದ್ದು ವಿಜ ಯಲಕ್ಷ್ಮೀ ಯಾರ ಮುಡಿಗೇರಲಿದೆ ಎಂಬ ತೀವ್ರ ಕುತೂಹಲ ತುಮ್ ಕೋಸ್ ಷೇರುದಾರರಷ್ಟೇ ಅಲ್ಲದೆ ಎಲ್ಲ ಅಡಕೆ ಸಹಕಾರ ಸಂಘಗಳ ವಲಯದಲ್ಲೂ ಮೂಡಿದೆ.

ಬಿಗಿ ಪೊಲೀಸ್ ಬಂದೋಬಸ್ತ್

ತುಮ್ ಕೋಸ್ ಚುನಾವಣೆಗಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಒಬ್ಬರು ಅಡಿಷನಲ್ ಎಸ್ಪಿ, ಒಬ್ಬರು ಡಿವೈಎಸ್ಪಿ, 4 ಪಿಐ, 9 ಪಿಎಸ್‌ಐ, 17 ಎಎಸ್‌ಐ, 145 ಜನ ಪೊಲೀಸ್ ಪೇದೆ, 1 ಕೆಎಸ್‌ಆರ್‌ಪಿ ತುಕಡಿ, 2 ಡಿಎಆರ್ ತು ಕಡಿಗಳ ನಿಯೋಜಿಸಲಾಗಿದೆ. ಆ್ಯಂಬುಲೆನ್ಸ್ ವ್ಯವಸ್ಥೆ ಮಾಡಲಾಗಿದೆ. ತುಮ್ ಕೋಸ್ ನ 150ಕ್ಕೂ ಹೆಚ್ಚು ಸಿಬ್ಬಂದಿ ಸಹ ಚುನಾವಣಾ ಕಾರ್ಯದಲ್ಲಿ ನಿರತರಾಗಿದ್ದಾರೆ.

 

Share.
Leave A Reply

Exit mobile version