ದಾವಣಗೆರೆ : ಒಂದೇ ಮನೆಗೆ ಮೂರು ಅಧಿಕಾರ ಅಂದರೆ ಜನ ಒಪ್ಪೋದಿಲ್ಲ ಎಂದು ಸಂಸದ ಜಿಎಂ ಸಿದ್ದೇಶ್ವರ ಶಾಮನೂರು ಕುಟುಂಬ ವಿರುದ್ಧ ಹರಿಹಾಯ್ದರು.
ದಾವಣಗೆರೆ ನಗರದ ದೇವತೆ ದುರ್ಗಾಂಬಿಕಾ ದೇವಿ ದರ್ಶನದ ಬಳಿಕ ಹೇಳಿಕೆ ನೀಡಿ, ಶಾಮನೂರು ಮನೆಯಲ್ಲಿ ಈಗಾಗಲೇ ಇಬ್ಬರು ಅಧಿಕಾರದಲ್ಲಿದ್ದಾರೆ.
ಮೂರನೇ ವ್ಯಕ್ತಿಗೆ ಅಧಿಕಾರ ಕೊಡೋದಕ್ಕೆ ಜನ ಒಪ್ಪೋದಿಲ್ಲ. ಜಿ.ಎಂ. ಫ್ಯಾಮಿಲಿಯಲ್ಲಿ ಯಾರೂ ಅಧಿಕಾರದಲ್ಲಿಲ್ಲ. ಹೀಗಾಗಿ ಈ ಬಾರಿ ಜನ ಜಿ.ಎಂ. ಸೊಸೆಯನ್ನ ಗೆಲ್ಲಿಸಬೇಕು ಎಂದು ನಿರ್ಧಾರ ಮಾಡಿದ್ದಾರೆ
ದುರ್ಗಾಂಬಿಕಾ ದೇವಿ ದರ್ಶನ ಆಗಿದೆ, ದಂಪತಿ ಸಮೇತ ದೇವರ ದರ್ಶನ ಪಡೆದಿದ್ದೇವೆ. ದೇವಿಯ ಆಶೀರ್ವಾದ ಇದೆ, ಗಾಯತ್ರಿ ಸಿದ್ದೇಶ್ವರ್ ಅವರು ಅತ್ಯ ಅಧಿಕ ಮತಗಳಿಂದ ಗೆಲುವು ಸಾಧಿಸುತ್ತಾರೆ.ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನ ಮಂತ್ರಿ ಆಗ್ತಾರೆ ಎಂದರು.
ಕಾಂಗ್ರೆಸ್ ನಲ್ಲಿ ಪ್ರಭಾ ಮಲ್ಲಿಕಾರ್ಜುನ್ ಗೆ ಟಿಕೆಟ್ ಎಂಬ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿ, ಶಾಮನೂರು ಫ್ಯಾಮಿಲಿಗೆ ದಾವಣಗೆರೆಯ ಎಲ್ಲ ಅಧಿಕಾರ ಬೇಕು, ಈಗಾಗಲೇ ಇಬ್ಬರು ಅಧಿಕಾರದಲ್ಲಿದ್ದಾರೆ. ಯಾರಾದರೂ ಸಾಮಾನ್ಯ ಕಾರ್ಯಕರ್ತನಿಗೆ ಕೊಡಬಹುದಿತ್ತು, ಮತ್ತೆ ಅವರ ಕುಟುಂಬಕ್ಕೆ ಟಿಕೆಟ್ ಕೊಟ್ಟಿದ್ದಾರೆ. ಜನ ದಡ್ಡರಲ್ಲ, ಒಂದೇ ಮನೆಗೆ ಮೂರು ಅಧಿಕಾರ ಏಕೆ ಅಂತ ಯೋಚನೆ ಮಾಡ್ತಾರೆ
ನಮ್ಮ ಮನೆಲೀ ಯಾರೂ ಅಧಿಕಾರದಲ್ಲಿ ಇಲ್ಲ, ಜಿ.ಎಂ.ಸೊಸೆ ಮಾತ್ರ ಸ್ಪರ್ಧಿಸಿರೋದು ಅಂತ ಜನ ಬೆಂಬಲ ನೀಡ್ತಿದ್ದಾರೆ ಎಂದು ಹೇಳಿದರು.
ರೇಣುಕಾಚಾರ್ಯ ಅಂಡ್ ಟೀಂನ ಸ್ಪರ್ಧೆ ಎಂಬ ಪತ್ರಕರ್ತರ ಪ್ರಶ್ನೆಗೆ ಜಿ.ಎಂ.ಸಿದ್ದೇಶ್ವರ್ ಪ್ರತಿಕ್ರಿಯಿಸಿ, ಕರುಣಾಕರರೆಡ್ಡಿ ನಮ್ಮ ಸ್ನೇಹಿತರು, ರವೀಂದ್ರನಾಥ ಹಿರಿಯರು, ಮಾರ್ಗದರ್ಶಕರು, ಮಾಡಾಳ್ ವಿರೂಪಾಕ್ಷಪ್ಪ, ರೇಣುಕಾಚಾರ್ಯ ಸೇರಿದಂತೆ ಎಲ್ಲರೂ ನನ್ನ ಮಿತ್ರರು.ಎಲ್ಲರೂ ನಮಗೆ ಬೆಂಬಲ ನೀಡ್ತಾರೆ, ನನ್ನ ಪತ್ನಿ ಎಲ್ಲರನ್ನೂ ಭೇಟಿಯಾಗಿ ಮಾತಾಡಿದ್ದಾರೆ.ಎಲ್ಲವೂ ಸರಿ ಹೋಗತ್ತೆ, ನಾವು ಗೆಲ್ಲುತ್ತೆವೆ ಎಂದ ಸಂಸದ ಜಿ.ಎಂ.ಸಿದ್ದೇಶ್ವರ್ ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದರು.