


ನಂದೀಶ್ ಭದ್ರಾವತಿ, ದಾವಣಗೆರೆ
ಅತ್ತ ಶಿರಡಿಯಲ್ಲಿ ಗುರುಪೂರ್ಣಿಮಾ ಹಬ್ಬವು ಭಕ್ತಿ ಭಾವದಿಂದ ಆರಂಭವಾಗಲಿದ್ದು, ಸಾವಿರಾರು ಭಕ್ತರು ಸಾಯಿನಾಮವನ್ನು ಪಠಿಸುತ್ತ ಶಿರಡಿಯನ್ನು ಪ್ರವೇಶಿಸುತ್ತಿದ್ದಾರೆ. ಇತ್ತ ಜಯನಗರದಲ್ಲಿರುವ ಸಾಯಿಬಾಬಾ ಮಂದಿರದಲ್ಲಿ ಗುರುಪೂರ್ಣಿಮ ನಿಮಿತ್ತ ಸಕಲ ಕೆಲಸ ಕಾರ್ಯಗಳು ಅದ್ದೂರಿಯಿಂದ ಸಾಗುತ್ತಿದೆ.

ಸಬ್ಕಾ ಮಾಲಿಕ್ ಏಕ್ (ಎಲ್ಲರ ಮಾಲೀಕ ಒಬ್ಬನೇ) ಎಂಬ ಸಂದೇಶವನ್ನು ನೀಡಿದ್ದ ಶ್ರೀ ಸಾಯಿಬಾಬಾ ಅವರನ್ನು ಗುರುವಾಗಿ ನೋಡುವ ಅಸಂಖ್ಯಾತ ಭಕ್ತರು ತಮ್ಮ ಭಕ್ತಿಯನ್ನು ಸಲ್ಲಿಸಿದ್ದಾರೆ. ಈ ವೇಳೆ, ಕಣ್ಮನ ಸೆಳೆಯುವ ಆಕರ್ಷಕ ವಿದ್ಯುತ್ ದೀಪಾಲಂಕಾರವನ್ನು ದೇವಾಲಯಕ್ಕೆ ಮಾಡಲಾಗಿದೆ. ಜೊತೆಗೆ ಹೂವಿನ ಅಲಂಕಾರವನ್ನು ಮಾಡಲಾಗಿದೆ.

ವಿಜೃಂಭಣೆಯಿಂದ ಗುರು ಪೂರ್ಣಿಮೆ ಆಚರಣೆ
ದಾವಣಗೆರೆ ನಗರದ ಎಸ್ ಎಸ್ ಹೈಟೆಕ್ ಆಸ್ಪತ್ರೆ ಬಳಿ ಇರುವ ಶ್ರೀ ಶಿರಡಿ ಸಾಯಿಬಾಬಾ ಮಂದಿರದಲ್ಲಿ ಗುರು ಪೂರ್ಣಿಮೆ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ.ಜುಲೈ 10 ರಂದು ಬೆಳಗ್ಗೆ 6 ಗಂಟೆಗೆ ಕಾಕಡಾರತಿ, 9 ಗಂಟೆಗೆ ದೀಪಾರಾಧನೆ, ಕಳಶ ಸ್ಥಾಪನೆ ಮತ್ತು ಗೋಪುರ ಧ್ವಜಾರೋಹಣ ನಡೆಯಲಿದೆ.
ವಿಶೇಷ ಪೂಜೆ
ಗುರುಪೂರ್ಣಿಮೆ ನಿಮಿತ್ತ ಸಾಯಿ ಬಾಬಾ ಮೂರ್ತಿಗೆ ಭಕ್ತಾಧಿಗಳು ವಿಶೇಷ ಪೂಜೆ, ಅಭಿಷೇಕ ನೆರವೇರಿಸಲಿದ್ದಾರೆ. ಬೆಳಗಿನ ಜಾವದಿಂದಲೇ ಸಾಯಿಬಾಬಾ ದರ್ಶನ ಆರಂಭವಾಗಲಿದ್ದು, ಅಭಿಷೇಕ ಇರಲಿದೆ. ದೇವಸ್ಥಾನದ ಸುತ್ತ ದೇವರ ದರ್ಶನಕ್ಕೆ ಭಕ್ತರು ಸಾಲುಗಟ್ಟಿ ಬರಬೇಕಿದೆ. ಪ್ರಸಾದ ಸೇವನೆಗೆ ದೇವಸ್ಥಾನದ ಎಡ ಮತ್ತು ಬಲಭಾಗದ ರಸ್ತೆಯಲ್ಲಿ ವ್ಯವಸ್ಥೆ ಮಾಡಲಾಗಿದೆ.
ಸಾಯಿಬಾಬಾ ಟ್ರಸ್ಟ್ ನಿಂದ ಪ್ರಸಾದ ವ್ಯವಸ್ಥೆ
ಸಾಯಿ ಬಾಬಾ ಮಂದಿರದ ಟ್ರಸ್ಟಿಗಳ ನೇತೃತ್ವದಲ್ಲಿ ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿದೆ. ಅಡುಗೆ ತಯಾಕರನ್ನು ಹೊರತು ಪಡಿಸಿದರೆ ಊಟ ಬಡಿಸಲು ಸ್ವಯಂ ಸೇವಕರು ಬರಲಿದ್ದಾರೆ.
….
ಕಾರ್ಯಕ್ರಮ ಏನಿರಲಿದೆ
ಪ್ರತಿ ವರ್ಷದಂತೆ ಈ ವರ್ಷವೂ ಸಹ ಗುರುಪೂರ್ಣಿಮೆಯ ಪ್ರಯುಕ್ತ ಶ್ರೀ ಶಿರಡಿ ಸಾಯಿಬಾಬಾ ಸೇವಾ ಟ್ರಸ್ಟ್ (ಜಯನಗರ) ಇವರ ವತಿಯಿಂದ ನಾನಾ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ. 09-07-2025ನೇ ಬುಧವಾರ
ಬೆಳಗ್ಗೆ 10-30 ರಿಂದ 12-00 ಗಂಟೆಯವರೆಗೆ ಶ್ರೀ ಶಿರಡಿ ಸಾಯಿಬಾಬಾರವರ ಉತ್ಸವಮೂರ್ತಿಯ ಮೆರವಣಿಗೆ ನಡೆಯಲಿದೆ. ಈ ಮೆರವಣಿಗೆಯಲ್ಲಿ ನಂದಿಕೋಲು, ಚಂಡಿ ಹಾಗೂ ನಾಸಿಕ್ ಡೋಲು ವಾದ್ಯಗಳು ಇರಲಿದೆ.
….
ಎಲ್ಲಿಂದ ಎಲ್ಲಿಗೆ ಮೆರವಣಿಗೆ
ನಿಟುವಳ್ಳಿಯ ಶ್ರೀ ದುರ್ಗಾಂಬಿಕಾ ದೇವಸ್ಥಾನದಿಂದ ಶ್ರೀ ಶಿರಡಿ ಸಾಯಿಬಾಬಾ ದೇವಸ್ಥಾನದ ವರೆಗೆ ಮೆರವಣಿಗೆ ಏರ್ಪಡಿಸಲಾಗಿದೆ. ಮಧ್ಯಾಹ್ನ 12-30 ರಿಂದ 1-00 ಗಂಟೆವರೆಗೆ ಮಹಾಮಂಗಳಾರತಿ ನಡೆಯಲಿದೆ. ತದನಂತರ 1-00 ಗಂಟೆಯಿಂದ 3 ಗಂಟೆಯ ವರೆಗೆ ಪ್ರಸಾದ ವಿನಿಯೋಗ ಇರುತ್ತದೆ.
….
ಜುಲೈ 10 ಕ್ಕೆ ಏನಿರಲಿದೆ
ದಿನಾಂಕ 10-07-2025ನೇ ಗುರುವಾರ ಗುರುಪೂರ್ಣಿಮೆಯ ಪ್ರಯುಕ್ತ ಮುಂಜಾನೆಯ ಬ್ರಾಹ್ಮ ಮುಹೂರ್ತದಲ್ಲಿ ಶ್ರೀ ಸೂರ್ಯನಾರಾಯಣ ಸ್ವಾಮಿಜೀಯವರ ನೇತೃತ್ವದಲ್ಲಿ ಬೆಳಗ್ಗೆ 04-30 ರಿಂದ 09-30ರ ವರೆಗೆ ಗಣಹೋಮ ಹಾಗೂ ಗುರುಹೋಮ, ಶ್ರೀ ಸಾಯಿಬಾಬಾರವರ ಮೂರ್ತಿಗೆ ಹಾಲಿನ ಅಭಿಷೇಕ ನಡೆಯಲಿದೆ.
..
ನವಗ್ರಹ ಪೂಜೆ
ಬೆಳಗ್ಗೆ 09-30 ರಿಂದ 12-00ರ ವರೆಗೆ : ಶ್ರೀ ಸಾಯಿ ಸತ್ಯನಾರಾಯಣ ಹಾಗೂ ನವಗ್ರಹ ಪೂಜೆ ನಡೆಯಲಿದೆ. ಮಧ್ಯಾಹ್ನ12-30 ರಿಂದ 01-00ರ ವರೆಗೆ : ಶ್ರೀ ಸಾಯಿಬಾಬಾರವರ ಮಹಾಮಂಗಳಾರತಿ ಮಧ್ಯಾಹ್ನ01-30 ರಿಂದ 04-00ರ ವರೆಗೆ : ಮಹಾಪ್ರಸಾದ ವಿನಿಯೋಗ ಸಂಜೆ 06-30 ರಿಂದ 07-00ರ ವರೆಗೆ : ಶ್ರೀ ಶಿರಡಿ ಸಾಯಿಬಾಬಾರವರ ಸಾಯಂಕಾಲದ ಆರತಿ ರಾತ್ರಿ 09-30 ರಿಂದ 10-00ರ ವರೆಗೆ : ಶ್ರೀ ಸಾಯಿಬಾಬಾರವರ ಶೇಜಾರತಿ ನಡೆಯಲಿದೆ. ಆದ್ದರಿಂದ ಸರ್ವ ಭಕ್ತಾದಿಗಳು ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಸಹಸ್ರ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಟ್ರಸ್ಟ್ ಮನವಿ ಮಾಡಿದೆ.
…
ವಿಶೇಷ ಕೋರಿಕೆ :
ಗುರುಪೂರ್ಣಿಮೆಯ ಪ್ರಯುಕ್ತ ದವಸ-ಧಾನ್ಯ ದೇಣಿಗೆ ನೀಡಲು ಇಚ್ಛಿಸುವ ಭಕ್ತಾದಿಗಳು ಶ್ರೀ ಶಿರಡಿ ಸಾಯಿಬಾಬಾ ಸೇವಾ ಟ್ರಸ್ಟ್ ಕಛೇರಿಯಲ್ಲಿ ಬಂದು ಅಥವಾ ದೂರವಾಣಿ ಮೂಲಕ ಸಂಪರ್ಕಿಸಿ ದೇಣಿಗೆಯನ್ನು ನೀಡಿ ಸೂಕ್ತ ರಸೀದಿಯನ್ನು ಪಡೆಯಬೇಕಾಗಿದೆ.
…
ದೂರವಾಣಿ ಸಂಖ್ಯೆ, ವಿಳಾಸ
ಶ್ರೀ ಶಿರಡಿ ಸಾಯಿಬಾಬಾ ಸೇವಾ ಟ್ರಸ್ಟ್ (ರಿ.)
ಎಸ್.ಎಸ್. ಹೈಟೆಕ್ ಆಸ್ಪತ್ರೆ ರಸ್ತೆ, ಜಯನಗರ, ದಾವಣಗೆರೆ-577004.
ಪೋನ್ ನಂಬರ್ : 826 826 7878, 77604 69608
87796 32040, 87 2244 7878 ಸಂಪರ್ಕಿಸಬಹುದು.