


ಕೊನೆಗೂ ಕಣ್ಣು ಬಿಟ್ಟ ಕಾಲಭೈರೇಶ್ವರ ; ಫಲಿಸಿತೂ ಶಿಷ್ಯ ಕುರುವಳ್ಳಿ ನಾಗರಾಜ್ ಭಕ್ತಿ
….
ಇಡಿ ಬಲೆಯಿಂದ ಹೊರಬಂದ ಮಂಜುನಾಥ್ ಗೌಡ…ಎಂಭತ್ತೇರಡು ದಿನಗಳ ನಂತರ ಮರಳಿದ ಸಹಕಾರಿ ಧುರೀಣ
ಶಿವಮೊಗ್ಗ : ಎಂಭೆತ್ತೇರಡು ದಿನಗಳ ನಂತರ ಇಡಿ ಬಲೆಯಿಂದ ಸಹಕಾರಿ ಧುರೀಣ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಮಂಜುನಾಥ್ ಗೌಡ ಹೊರ ಬರಲಿದ್ದಾರೆ.

ಶಿವಮೊಗ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಲ್ಲಿ ನಕಲಿ ಚಿನ್ನಾಭರಣ ಅಡವಿಟ್ಟು 62.77 ಕೋಟಿ ಸಾಲ ಪಡೆದಿದ್ದ ಪ್ರಕರಣದಲ್ಲಿ ಇಡಿ ಮಂಜುನಾಥ್ ಗೌಡರನ್ನು ಬಂಧಿಸಿತ್ತು. ಈ ಸಂಬಂಧ ಮುಖಂಡರಾದ ಆರ್ ಎಂ ಮಂಜುನಾಥ್ ಗೌಡ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ಹೈ ಕೋರ್ಟ್ ಮಾನ್ಯ ಮಾಡಿದೆ.

ಏನಿದು ಪ್ರಕರಣ:
ಶಿವಮೊಗ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಲ್ಲಿ ನಕಲಿ ಚಿನ್ನಾಭರಣ ಅಡವಿಟ್ಟು 62.77 ಕೋಟಿ ಸಾಲ ಪಡೆದಿದ್ದ ಪ್ರಕರಣದಲ್ಲಿ, ಬ್ಯಾಂಕ್‌ನ ಹಾಲಿ ಅಧ್ಯಕ್ಷ ಆರ್. ಎಂ ಮಂಜುನಾಥಗೌಡ ಅವರನ್ನು ಜಾರಿ ನಿರ್ದೇಶನಾಲಯವು ಬಂಧಿಸಿತ್ತು. ಈ ಹಿನ್ನೆಲೆಯಲ್ಲಿ ಮಂಜುನಾಥ್ ಗೌಡರು ತಾವು ಸಲ್ಲಿಸಿದ್ದ ಒಟ್ಟು ಮೂರು ಜಾಮೀನು ಅರ್ಜಿಗಳನ್ನು ನ್ಯಾಯಾಲಯ ತಿರಸ್ಕೃತ ಮಾಡಿತ್ತು. ಆದರೆ ಇಂದು ಕಡೆಗೂ ಜಾಮೀನು ಮಂಜೂರು ಮಾಡಿದೆ.
ಆರ್ ಎಂ ಮಂಜುನಾಥ್ ಗೌಡ ಅವರು ಬಂಧನಕ್ಕೊಳಗಾಗಿ ಎರಡುವರೇ ತಿಂಗಳಿಗೂ ಹೆಚ್ಚಾಗಿತ್ತು. ಹೀಗಾಗಿ ಜಾಮೀನು ಕೋರಿ ನ್ಯಾಯಾಲಯದ ಮೊರೆ ಹೋಗಿದ್ದ ಮಂಜುನಾಥ್ ಗೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ.
ಪತ್ನಿ ಆಸ್ತಿ ಜಫ್ತಿ ಮಾಡಿದ್ದ ಇಡಿ
ಶಿವಮೊಗ್ಗ ಡಿಸಿಸಿ ಬ್ಯಾಂಕ್ ಅಧ್ಯಕ್ಷ, ಶಿಮುಲ್ ನಿರ್ದೇಶಕ ಮಂಜುನಾಥ್ ಗೌಡಗೆ ಇಡಿ ಬಿಗ್ ಶಾಕ್ ನೀಡಿದ್ದು, ಅವರ ಪತ್ನಿಗೆ ಸೇರಿ 13.91 ಕೋಟಿ ಆಸ್ತಿಯನ್ನು ಜಾರಿ ನಿರ್ದೇಶನಾಲಯವು ಜಪ್ತಿ ಮಾಡಿದೆ.
ಈ ಕುರಿತಂತೆ ಎಕ್ಸ್ ನಲ್ಲಿ ಟ್ವಿಟ್ ಮಾಡಿ ಮಾಹಿತಿ ಹಂಚಿಕೊಂಡಿದ್ದ ಇಡಿ ಆರ್ ಎಂ ಮಂಜುನಾಥ ಗೌಡ ಮತ್ತು ಅವರ ಪತ್ನಿಗೆ ಸೇರಿದ ಪ್ರಸ್ತುತ ಮಾರುಕಟ್ಟೆ ಮೌಲ್ಯದ ರೂ. 13.91 ಕೋಟಿ ಮೌಲ್ಯದ ಸ್ಥಿರ ಮತ್ತು ಚರ ಆಸ್ತಿಗಳನ್ನು ವಲಯ ಕಚೇರಿಯು ಪಿಎಂಎಲ್‌ಎ, 2002 ರ ನಿಬಂಧನೆಗಳ ಅಡಿಯಲ್ಲಿ ತಾತ್ಕಾಲಿಕವಾಗಿ ಮುಟ್ಟುಗೋಲು ಹಾಕಿಕೊಂಡಿತ್ತು.
ಏಪ್ರಿಲ್ ತಿಂಗಳಿನಲ್ಲಿ ಬಂಧನವಾಗಿತ್ತು
ನಕಲಿ ಚಿನ್ನ ಅಡವಿಟ್ಟು 62 ಕೋಟಿ ರೂ ಸಾಲ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಅಧಿಕಾರಿಗಳು ಏಪ್ರಿಲ್ 08 ರಂದು ಮನೆ, ಕಚೇರಿ ಮೇಲೆ ದಾಳಿ ನಡೆಸಿದ್ದರು. ಅಲ್ಲದೇ ಮಂಜುನಾಥ್ ಅವರನ್ನು ವಶಕ್ಕೆ ಪಡೆದುಕೊಂಡು ಬೆಂಗಳೂರಿನ ಚಾಮರಾಜಪೇಟೆಯ ಅಪೆಕ್ಸ್ ಬ್ಯಾಂಕ್ ಅತಿಥಿಗೃಹದಲ್ಲಿ ವಿಚಾರಣೆ ಸಹ ನಡೆಸಿದ್ದರು. ಬಳಿಕ ಇಡಿ, ಶಿವಮೊಗ್ಗ ಡಿಸಿಸಿ ಅಧ್ಯಕ್ಷ ಮಂಜುನಾಥ್ ಗೌಡ ಅವರನ್ನು ಅಧಿಕೃತವಾಗಿ ಬಂಧಿಸಿ ಕೋರ್ಟ್ಗೆ ಹಾಜರುಪಡಿಸಿದ್ದರು. ಕೋರ್ಟ್, ಕೂಡ ಮಂಜುನಾಥ ಗೌಡ ಅವರನ್ನು 14 ದಿನ ಇಡಿ ಕಸ್ಟಡಿಗೆ ನೀಡಿತ್ತು.
ವೈದ್ಯಕೀಯ ಸವಲತ್ತು ನಿಡುವಂತೆ ಸೂಚಿಸಿದ್ದ ಕೋರ್ಟ್
ಡಿಸಿಸಿ ಬ್ಯಾಂಕ್ ಅಧ್ಯಕ್ಷ ಮಂಜುನಾಥ ಗೌಡಗೆ ಆರೋಗ್ಯ ಸಮಸ್ಯೆ ಹಿನ್ನೆಲೆ ಅಗತ್ಯ ವೈದ್ಯಕೀಯ ಸವಲತ್ತು ನೀಡುವಂತೆ ನ್ಯಾಯಾಲಯ ಸೂಚನೆ ನೀಡಿತ್ತು. ಅಲ್ಲದೇ ದಿನದಲ್ಲಿ 30 ನಿಮಿಷ ವಕೀಲರಿಂದ ಮಂಜುನಾಥ್ ಗೌಡ ಭೇಟಿಗೆ ಕೋರ್ಟ್ ಅವಕಾಶ ನೀಡಿತ್ತು.ಅಲ್ಲದೇ ಇಡಿ ಅಧಿಕಾರಿಗಳು, ಶಿವಮೊಗ್ಗ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಮಂಜುನಾಥ್ ಗೌಡ, ಮ್ಯಾನೇಜರ್ ಸೇರಿದಂತೆ ಇತರರ ಮೇಲೆ ದಾಳಿ ಮಾಡಿ ಪರಿಶೀಲನೆ ನಡೆಸಿದ್ದರು. ಆದ್ರೆ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಮಂಜುನಾಥ್ ಅವರನ್ನು ಇಡಿ ಅಧಿಕಾರಿಗಳು ಬಂಧಿಸಿ ವಿಚಾರಣೆ ನಡೆಸಿದ್ದರು. ಬಳಿಕ ಬೆಂಗಳೂರಿನ 1ನೇ ಸಿಸಿಹೆಚ್ ನ್ಯಾಯಾಲಯ ಮುಂದೆ ಹಾಜರುಪಡಿಸಿದ್ದರು.
ಪ್ರಕರಣದ ಹಿನ್ನೆಲೆ:
ಶಿವಮೊಗ್ಗ ನಗರದ ಗಾಂಧಿ ಬಜಾರ್‌ನಲ್ಲಿರುವ ಡಿಸಿಸಿ ಬ್ಯಾಂಕ್ ಶಾಖೆಯಲ್ಲಿ ನಕಲಿ ಚಿನ್ನ ಅಡವಿಟ್ಟು ಕೋಟ್ಯಾಂತರ ರೂ ವಂಚನೆ ನಡೆದಿತ್ತು. 2014ರಲ್ಲಿ ಈ ಹಗರಣ ನಡೆದಿತ್ತು. ಈ ಸಂಬಂಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿದ್ದ ಪೊಲೀಸರು 2014ರಲ್ಲಿ ನ್ಯಾಯಾಲಯಕ್ಕೆ ಚಾರ್ಜ್ಶೀಟ್ ಸಲ್ಲಿಸಿದ್ದರು. ಬಳಿಕ ಇಡಿ ಸಹ ಇಸಿಐಆರ್ ದಾಖಲಿಸಿಕೊಂಡು ತನಿಖೆ ಕೈಗೆತ್ತಿಕೊಂಡು ಮಂಜುನಾಥ್ ಗೌಡಗೆ ಸಮನ್ಸ್ ಜಾರಿಗೊಳಿಸಿತ್ತು. ಇಡಿ ಸಮನ್ಸ್ ಪ್ರಶ್ನಿಸಿ ಮಂಜುನಾಥ್ ಗೌಡ ಸಲ್ಲಿಸಿದ್ದ ಮೇಲ್ಮನವಿಯನ್ನ ಇತ್ತೀಚೆಗೆ ಹೈಕೋರ್ಟ್ ವಜಾಗೊಳಿಸಿತ್ತು. ಇದರ ಬೆನ್ನಲ್ಲೇ ಇಡಿ ಮಂಜುನಾಥ್ ಗೌಡ ಅವರ ಮನೆ, ಕಚೇರಿಗಳ ಮೇಲೆ ದಾಳಿ ಮಾಡಿ ಪರಿಶೀಲನೆ ನಡೆಸಿತ್ತು.
…..