ದಾವಣಗೆರೆ: ಲೋಕಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸುವ ಕೊನೆಯ ದಿನವಾದ ಶುಕ್ರವಾರ ನಗರದಲ್ಲಿ ಬಿಜೆಪಿ ಪಕ್ಷ ಬೃಹತ್ ರ್ಯಾಲಿ ನಡೆಸಿತು. ಈ ಸಂದರ್ಭದಲ್ಲಿ ನಗರ ಕೇಸರಿಮಯಗೊಂಡಿತು.
ಮೊದಲ ಮೆರವಣಿಗೆ ನಗರ ದೇವತೆ ಶ್ರೀ ದುರ್ಗಾಂಭಿಕಾ ದೇವಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಮೊದಲ ಮೆರವಣಿಗೆಗೆ ಚಾಲನೆ ನೀಡಿದರು.
ಇತ್ತ ಇನ್ನೊಂದು ಕಡೆ ಸಂಸದ ಡಾ.ಜಿ.ಎಂ.ಸಿದ್ದೇಶ್ವರ, ರೇಣುಕಾಚಾರ್ಯ, ಮಾಡಾಳು ಮಲ್ಲಿಕಾರ್ಜುನ, ಶಿವಕುಮಾರ್ ತುಮ್ಕೋಸ್, ಲೋಕಿಕೆರೆ ನಾಗರಾಜ್ ಸೇರಿದಂತೆ ಇತರೆ ಮುಖಂಡರು ನಿಟುವಳ್ಳಿಯ ಗ್ರಾಮದೇವತೆ ಶ್ರೀ ದುರ್ಗಾಂಬಿಕ ದೇವಿ ದೇವಾಲಯ ಸಾಗಿ ವಿಶೇಷ ಪೂಜೆ ಸಲ್ಲಿಸಿ 2ನೇ ಮೆರವಣಿಗೆ ಚಾಲನೆ ನೀಡಿದರು.
ಮೊದಲ ಮೆರವಣಿಗೆ ನಗರ ದೇವತೆ ಶ್ರೀ ದುರ್ಗಾಂಬಿಕ ದೇವಿ ದೇವಾಲಯದಿಂದ ಎಸ್ಕೆಪಿ ರಸ್ತೆ, ಗಡಿಯಾರ ಕಂಬ, ಕೆಳಸೇತುವೆ, ಹಳೇ ಬಸ್ ನಿಲ್ದಾಣ, ಮಹಾನಗರ ಪಾಲಿಕೆ, ಅರುಣಾ ಚಿತ್ರಮಂದಿರದ ವೃತ್ತದಲ್ಲಿನ ಬಿಜೆಪಿ ಚುನಾವಣಾ ಕಾರ್ಯಾಲಯದ ಬಳಿ ಜಮಾವಣೆಗೊಂಡಿತು. 2ನೇ ಮೆರವಣಿಗೆ ನಿಟುವಳ್ಳಿಯ ಗ್ರಾಮದೇವತೆ ಶ್ರೀ ದುರ್ಗಾಂಬಿಕ ದೇವಿ ದೇವಸ್ಥಾನದಿಂದ ಹೆಚ್ಕೆಆರ್ ವೃತ್ತ, ಕೆಟಿಜೆ ನಗರ 1ನೇ ಮುಖ್ಯ ರಸ್ತೆ, ಜಯದೇವ ವೃತ್ತ, ಲಾಯರ್ ರಸ್ತೆ, ಗಾಂದಿ ವೃತ್ತ, ಹಳೇ ವಾಣಿ ಹೊಂಡಾ ಶೋ ರೂಂವರೆಗೆ ಸಾಗಿ ಸೇರಿತು.
ಇದಲ್ಲದೇ 3ನೇ ಮೆರವಣಿಗೆನಗರದ ಪಿ.ಜೆ. ಬಡಾವಣೆಯ ರಾಂ ಆಂಡ್ ಕೋ ಸರ್ಕಲ್‌ನಲ್ಲಿರುವ ಶ್ರೀ ಗಣಪತಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ 4ನೇ ಮುಖ್ಯರಸ್ತೆ ಮೂಲಕ ಸಾಗಿ ಚೇತನಾ ಹೋಟೆಲ್ ಮುಂಭಾಗದಿಂದ ಡಾ. ಬಿ.ಆರ್. ಅಂಬೇಡ್ಕರ್ ಸರ್ಕಲ್, ಜಯದೇವ ಸರ್ಕಲ್, ಗಾಂಧಿ ಸರ್ಕಲ್ ಮೂಲಕ ಮಹಾನಗರ ಪಾಲಿಕೆಯ ಮುಂಭಾಗದಿಂದ ಬಿಜೆಪಿ ಚುನಾವಣಾ ಕಾರ್ಯಾಲಯದ ಬಳಿ ಜಮಾವಣೆಗೊಂಡಿತು. ಮೂರು ಮೆರವಣಿಗೆ ಒಂದೆಡೆ ಸೇರಿ ನಂತರ ಅಲ್ಲಿಂದ ಬಿಜೆಪಿಯ ಪ್ರಮುಖರು ಜಿಲ್ಲಾಧಿಕಾರಿ ಕಚೇರಿಗೆ ಸಾಗಿ ನಾಮಪತ್ರ ಸಲ್ಲಿಸಿದರು.
ಕೈ ಪಡೆಗೆ ಠಕ್ಕರ್ ನೀಡಿದ ಬಿಜೆಪಿ
ಕೈ ಪಡೆ ಕಾಂಗ್ರೆಸ್ ಅಭ್ಯರ್ಥಿ ಪ್ರಭಾ ಮಲ್ಲಿಕಾರ್ಜುನ್ ನಾಮ ಪತ್ರ ವೇಳೆ ಸಹಸ್ರಾರು ಸಂಖ್ಯೆಯಲ್ಲಿ ಜನರ ನಡುವೆ ನಾಮಪತ್ರ ಸಲ್ಲಿಸಿದ್ದು, ಬಿಜೆಪಿ ಕಾಂಗ್ರೆಸ್ ಗೆ ಠಕ್ಕರ್ ನೀಡಿತು. ಎಲ್ಲಿ ನೋಡಿದರೂ ಜನಗಳೇ ಕಾಣುತ್ತಿದ್ದರು. ಈ ನಡುವೆ ಮೋದಿ ಜೈಕಾರ, ಬಾವುಟ ತಿರುಗಿಸುತ್ತಿದ್ದ ಯುವಕರು, ಬಿಜೆಪಿ ಹಾಡು ಕಾರ್ಯಕರ್ತರನ್ನು ಇನ್ನಷ್ಟು ಇಮ್ಮಡಿಗೊಳಿಸಿತು.
ಅತೃಪ್ತರ ಜತೆ ಹೊರಟ ಗಾಯಿತ್ರಿ ಸಿದ್ದೇಶ್
ಮಾಜಿ ಸಚಿವ ಎಂ. ಪಿ. ರೇಣುಕಾಚಾರ್ಯ, ಲೋಕಿಕೆರೆ ನಾಗರಾಜ್, ಬಸವರಾಜ್ ನಾಯ್ಕ್, ಮಾಡಾಳ್ ಮಲ್ಲಿಕಾರ್ಜುನ್, ಸಂಸದ ಡಾ. ಜಿ. ಎಂ. ಸಿದ್ದೇಶ್ವರ ಜತೆ ಮೆರವಣಿಗೆಯಲ್ಲಿ ಪಾಲ್ಗೊಂಡರು. ಈ ಸಂದರ್ಭದಲ್ಲಿ ವಿಜಯದ ಸಂಕೇತವನ್ನು ಜನರಿಗೆ ಪ್ರದರ್ಶಿಸಿದರು.
ಯುವ ನಾಯಕ ಅನಿತ್ ನೇತೃತ್ವದಲ್ಲಿ ಬೃಹತ್ ಮೆರವಣಿಗೆ
ಯುವ ನಾಯಕ ಅನಿತ್ ನೇತೃತ್ವದಲ್ಲಿ ಸಾವಿರಾರು ಕಾರ್ಯಕರ್ತರ ಪಡೆ ಜತೆಗೆ ಬೃಹತ್ ಮೆರವಣಿಗೆ ನಡೆಯಿತು. . ಗಾಯತ್ರಿ ಸಿದ್ದೇಶ್ವರ್, ದೂಡಾ ಮಾಜಿ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್, ಮಾಜಿ ಸಚಿವ ಕರುಣಾಕರ ರೆಡ್ಡಿ, ಮಹಾನಗರ ಪಾಲಿಕೆ ಮಾಜಿ ಮೇಯರ್ ಅಜಯ್ ಕುಮಾರ್, ಬಿಜೆಪಿ ಜಿಲ್ಲಾಧ್ಯಕ್ಷ ರಾಜಶೇಖರ್ ನಾಗಪ್ಪ ಸೇರಿದಂತೆ ಸಾವಿರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.
ತೆನೆಹೊತ್ತ ಮಹಿಳೆ ಸಾಥ್
ಬಿಜೆಪಿ ಜತೆ ಜೆಡಿಎಸ್ ವಿಲೀನಗೊಂಡಿರುವ ಕಾರಣ ಕಮಲದ ಜತೆ ಜೆಡಿಎಸ್ ಬಾವುಟಗಳು ರಾರಾಜಿಸಿದವು. ಒಂದು ಕಡೆ ಕಮಲದ ಬಾವುಟಗಳು ಝಗಮಗಿಸುತ್ತಿದ್ದರೇ, ಇನ್ನೊಂದೆಡೆ ನಾಯಕರ ಜತೆ ಸೆಲ್ಪಿಗಾಗಿ ಜನ ಮುಗಿ ಬಿದ್ದಿದ್ದರು. ಅಲ್ಲದೇ ವಾಟ್ಸ್ ಅಫ್ ಸ್ಟೇಟಸ್ ನಲ್ಲಿ ನಾಮ ಪತ್ರ ಪಾಲ್ಗೊಂಡದ್ದನ್ನು ಪೋಟೋ ಸಮೇತ ಹಾಕಿದರು. ಎಲ್ಲ ತಾಲೂಕುಗಳ ಬಿಜೆಪಿ ನಾಯಕರ ಜತೆ ಕಾರ್ಯಕರ್ತರು ಬಂದಿದ್ದರು. ಒಟ್ಟಾರೆ ಕೇಸರಿ ಪಡೆ ದಾವಣಗೆರೆಯಲ್ಲಿ ಭಾರೀ ಜನಸ್ತೋಮದೊಂದಿಗೆ ನಾಮ ಪತ್ರ ಸಲ್ಲಿಸಿದರು.
ಕೋಟ್
ಸಾವಿರಾರು ಸಂಖ್ಯೆಯಲ್ಲಿ ನಾಮಪತ್ರ ಸಲ್ಲಿಸುವ ವೇಳೆ ಜನ ಸೇರಿದ್ದಾರೆ. ಸಂಸದ ಜಿ.ಎಂ.ಸಿದ್ದೇಶ್ವರ ಅಭಿವೃದ್ಧಿ ಕೆಲಸಗಳು ಮಾತನಾಡುತ್ತಿವೆ. ಮೋದಿ ಕೈ ಬಲಪಡಿದುವುದಕ್ಕಾಗಿ ಇಷ್ಟೊಂದು ಜನ ಸೇರಿದ್ದಾರೆ. ಈ ಬಾರಿ ಗೆಲುವು ನಮ್ಮದೇ.
– ಶ್ರೀನಿವಾಸ ದಾಸಕರಿಯಪ್ಪ, ಬಿಜೆಪಿ ನಾಯಕ
– ……..