ದಾವಣಗೆರೆ : ದಾವಣಗೆರೆ ಭ್ರಷ್ಟ ಅಧಿಕಾರಿಗಳಿಗೆ ಚಳಿ ಬಿಡಿಸುತ್ತಿರುವ ಖಡಕ್ ಆಫೀಸರ್ ಲೋಕಾಯುಕ್ತ ಎಸ್ಪಿ ಕೌಲಾಪುರೆ ನೇತೃತ್ವದ ತಂಡಕ್ಕೆ ಖಾಕಿಯೊಬ್ಬರು ಬಲೆಗೆಬಿದ್ದಿದ್ದಾರೆ. ಹೌದು..ದಾವಣಗೆರೆಯಲ್ಲಿ ಸಾಕಷ್ಟು ಅಧಿಕಾರಿಗಳನ್ನು ಖೆಡ್ಡಾಕ್ಕೆ ಕೆಡವಿರುವ ಕೌಲಾಪುರೆ ತಂಡ ಎಲ್ಲರ ಮೇಲೆ ಹದ್ದಿನ ಕಣ್ಣಿಟ್ಟಿದ್ದಾರೆ. ಅದರಂತೆ ಹದ್ದಿನಂತೆ ಟೈಮ್ ಕಾದು ಒಬ್ಬರಾದ ನಂತರ ಒಬ್ಬರನ್ನು ಕಾನೂನು ತೆಕ್ಕೆಗೆ ಎಳೆದು ತರುತ್ತಿದ್ದಾರೆ. ಅಷ್ಟಕ್ಕೂ ಈಗ ಲೋಕಾಯುಕ್ತ ತಂಡಕ್ಕೆ ಬಿದ್ದಿರುವ ವ್ಯಕ್ತಿ ಯಾರು ಎಂಬುದರ ಕಂಪ್ಲೀಟ್ ಡೀಟೆಲ್ಸ್ ಇಲ್ಲಿದೆ.

ಪ್ರಕರಣ ಒಂದರಲ್ಲಿ ಆರೋಪಿಗಳ ಹೆಸರನ್ನು ಕೈ ಬಿಡಲು ಕೆಟಿಜೆನಗರ ಪೊಲೀಸ್ ಠಾಣೆಯ ಎಎಸ್‌ಐ ಈರಣ್ಣ ಎನ್ನುವವರು ವ್ಯಕ್ತಿ ಒಬ್ಬರ ಬಳಿ 50 ಸಾವಿರ ರೂಪಾಯಿ ಲಂಚ ಪಡೆಯುವ ವೇಳೆ ಲೋಕಾಯುಕ್ತ ಅಧಿಕಾರಿಗಳ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿದ್ದಾರೆ. ದಾವಣಗೆರೆಯ ಸರಸ್ವತಿ ನಗರದ ಮಣಿಕಂಠ ಆಚಾರ್ಯ ಹಾಗೂ ಅವರ ತಾಯಿ ಮತ್ತು ಪತಿ ನಡುವೆ ಜಗಳವಾಗಿ ಎಫ್‌ಐಆರ್ ದಾಖಲಾಗಿತ್ತು. ಆಗ ಕೆಟಿಜೆನಗರ ಎಎಸ್‌ಐ ಈರಣ್ಣ ಚಾರ್ಜ್ ಶೀಟ್‌ನಲ್ಲಿ ಇಬ್ಬರ ಹೆಸರು ಕೈಬಿಡಲು 1 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದರು. ಈ ವೇಳೆ ಮುಂಗಡವಾಗಿ ಠಾಣೆ ಬಳಿ ಎಎಸ್‌ಐ ಲಂಚ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಎಸ್‌ಪಿ ಎಂ. ಎಸ್ ಕೌಲಾಪುರೆ ನೇತೃತ್ವದ ತಂಡಕ್ಕೆ ಬಿದ್ದಿದ್ದಾರೆ. ಈ ಸಂದರ್ಭದಲ್ಲಿ ಪೊಲೀಸ್ ಉಪಾಧೀಕ್ಷಕಿ ಕಲಾವತಿ, ಮಧುಸೂಧನ್, ಪ್ರಭು, ಪಿ.ಸರಳ ಇದ್ದು, ಈರಣ್ಣ ಅವರನ್ನು ವಿಚಾರಣೆಗೆ ಒಳಪಡಿಸಿದ್ದು ತನಿಖೆ ಮುಂದುವರಿಸಿದ್ದಾರೆ.

Share.
Leave A Reply

Exit mobile version