ದಾವಣಗೆರೆ : ದಾವಣಗೆರೆಯಲ್ಲಿ ಮಾಜಿ ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಬಿಜೆಪಿ ಸಮಾವೇಶ ಮಾಡುತ್ತೇವೆ ಎಂದು ಮಾಜಿ ಶಾಸಕ ರೇಣುಕಾಚಾರ್ಯ ಹೇಳಿದ ಬೆನ್ನೇಲೆ, ಹಾಗೂ ಯತ್ನಾಳ್ ಉಚ್ಚಾಟನೆ ಮಾಡಬೇಕೆಂಬ ಒತ್ತಡದ ಬೆನ್ನೇಲೆ ಮಾಜಿ ಶಾಸಕ ರೇಣುಕಾಚಾರ್ಯ ಈ ಹಿಂದೆ ಯಡಿಯೂರಪ್ಪ ವಿರುದ್ದ, ಪುತ್ರ ಹಾಲಿ ಸಂಸದ ರಾಘವೇಂದ್ರ ಬಗ್ಗೆ ರೆಬೆಲ್ ಆದ ಪೇಪರ್ ಕಟಿಂಗ್ ಗಳು ವಾಟ್ಸಾಪ್ ನಲ್ಲಿ ಹರಿದಾಡುತ್ತಿದೆ. ಅದರ ಕಂಪ್ಲಿಟ್ ಡೀಟೆಲ್ಸ್ ಇಲ್ಲಿದೆ

ಯಡಿಯೂರಪ್ಪ ಪುತ್ರ ರಾಘವೇಂದ್ರ ವಿರುದ್ದ ಹರಿಹಾಯ್ದಿದ್ದ ಮಾಜಿ ಶಾಸಕ ರೇಣುಕಾಚಾರ್ಯ ಪೇಪರ್ ಕಟಿಂಗ್ ನಲ್ಲಿ ಏನಿದೆ?

ಈ ಹಿಂದೆ ಗ್ರಾಮೀಣಾಭಿವೃದ್ಧಿ ಸಚಿವೆ ಶೋಭಾ ಕರಂದ್ಲಾಜೆ ಹಾಗೂ ಮುಖ್ಯಮಂತ್ರಿ ಕಾರ್ಯದರ್ಶಿ ವಿ.ಪಿ. ಬಳಿಗಾರ್ ತಮ್ಮನ್ನು ರಾಜಕೀಯವಾಗಿ ಮುಗಿಸುವ ಹುನ್ನಾರ ನಡೆಸಿದರೆ. ಇತ್ತ ಮುಖ್ಯಮಂತ್ರಿ ಪುತ್ರ ರಾಘವೇಂದ್ರ ಹೊನ್ನಾಳಿ ಕ್ಷೇತ್ರದಲ್ಲಿ ಕಾರ್ಯಕರ್ತ ರನ್ನು ತಮ್ಮ ವಿರುದ್ಧ ಎತ್ತಿಕಟ್ಟುತ್ತಿದ್ದಾರೆ ಎಂದು ರೇಣುಕಾಚಾರ್ಯ ಆರೋಪ ಮಾಡಿದ್ದರು. ಅಲ್ಲದೇ ‘ಬಿ.ಎಸ್.ಯಡಿಯೂರಪ್ಪ ಮುಖ್ಯ ಮಂತ್ರಿ ಸ್ಥಾನ ಅಲಂಕರಿಸುವವರೆಗೂ ಅವರ ಬಲಗೈಯಂತಿದ್ದೆ ಶೋಭಾ ಆವ ರನ್ನು ಅವರ ಮನೆಗೆ ಬಾರದಂತೆ ತಡೆ ಯಬೇಕೆಂದು ಯಡಿಯೂರಪ್ಪ ಅವರ ಕುಟುಂಬ ವರ್ಗ ವಿನಂತಿಸಿತ್ತು, ಇದು ಶೋಭಾ ನನ್ನ ವಿರುದ್ಧ ಸಿಟ್ಟಿ ಗೇಳಲು ಕಾರಣವಾಗಿತು. ಅವರ ಮಾತನ್ನು ನಂಬಿ 12 ಮುಖ್ಯಮಂತ್ರಿ ನನಗೆ ಅನ್ಯಾಯ ಮಾಡಿದರು’ ಎಂದು ರಾಜ್ಯಮಟ್ಟದ ಪತ್ರಿಕೆಯೊಂದಕ್ಕೆ ದೂರವಾಣಿ ಮೂಲಕ ಅಸಮಾಧಾನ ಹಂಚಿಕೊಂಡಿದ್ದರು. ‘ನಾನು ಜನರ ನಡುವೆ ಇದ್ದು ಕೆಲಸ ಮಾಡಿ ಗೆದ್ದು ಬಂದವನು. ಯಾರ ಕೃಪಾಶೀರ್ವಾದದ ಹಂಗಿನಿಂದ ಗೆದ್ದು ಬಂದಿಲ್ಲ. ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಹಣ- ಹೆಂಡ ಹಂಚಿ ಅವರು (ಸಂಸದ ರಾಘವೇಂದ್ರ) ಹೇಗೆ ಗೆದ್ದು ಬಂದರು ಎನ್ನುವುದು ಎಲ್ಲರಿಗೂ ಗೊತ್ತಿದೆ’ ಎಂದು ವ್ಯಂಗ್ಯವಾಡಿದ್ದರು. ಇನ್ನಾದರೂ ಇಂತಹ ಕೀಳು ಮಟ್ಟದ ರಾಜಕಾರಣ ಕೈಬಿಡದಿದ್ದರೆ ಶಿವಮೊಗ್ಗ ಕ್ಷೇತ್ರದಲ್ಲಿ ಪ್ರವಾಸ ಮಾಡಿ ಅಪ್ಪ-ಮಕ್ಕಳ ಬಂಡಾವಾಳ ಬಯಲು ಮಾಡುವೆ’ ಎಂದು ಎಚ್ಚರಿಸಿದ್ದರು ಎಂಬ ಕಟಿಂಗ್ ಈಗ  ಯತ್ನಾಳ್ ಬೆಂಬಲಿಗರ ಬಿಜೆಪಿ ವಲಯದ ವಾಟ್ಸ್ ಅಪ್ ನಲ್ಲಿ ಹರಿದಾಡುತ್ತಿದೆ.

ವಾಟ್ಸ್ ಅಪ್ ನಲ್ಲಿ ಕಾಮೆಂಟ್ ಏನು?

MP Renukacharya ಅವರು ಯಾವಾಗ ಯಾರ ಹೆಗಲ ಮೇಲೆ ಗನ್ ಇಟ್ಟು ಯಾರ ತಲೆಗೆ ಹೊಡೆಯುತ್ತಾರೆ ಗೊತ್ತಾಗುವುದಿಲ್ಲ. ವಾಸ್ತವವಾಗಿ ಅವರನ್ನು ಸೋಲಿಸಿದ್ದು ಯಾರು ಎಂಬುದನ್ನು ಮನವರಿಕೆ ಮಾಡಿಕೊಂಡು ಯಾರ ಪರ ಮಾತಾಡಬೇಕು‌ ಯಾರ ವಿರುದ್ಧ ಮಾತಾಡಬೇಕು‌ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು.ಅಂದು ಯಡಿಯೂರಪ್ಪ ಹಾಗೂ ಕುಟುಂಬ ವಿರುದ್ಧ ಹಾರಾಡಿದ್ದ ಇದೇ ಸ್ವಾಮಿ ಈಗ ಏಕಾಏಕಿ ವಿಜಯೇಂದ್ರ ಯಡಿಯೂರಪ್ಪ ಅವರ ಪರ ಬ್ಯಾಟ್ ಮಾಡುತ್ತಿರುವುದನ್ನು ನೋಡಿದರೇ ಆಶ್ಚರ್ಯ ಜನರಿಗೆ ಬಿಡಿ ಸ್ವತಃ ವಿಜಯೇಂದ್ರ ಭಯ ಬಿಳೋದು ಗ್ಯಾರಂಟಿ… 😁 ಎಂಬ ಕಾಮೆಂಟ್ ಕೂಡ ಬರುತ್ತಿದೆ.

ಈ ಹಿಂದಿನ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ವಿರುದ್ಧ ಹರಿಹಾಯ್ದಿದ್ದ ರೇಣುಕಾಚಾರ್ಯ, ಪಕ್ಷದಿಂದ ನೋಟಿಸ್

ಈ ಹಿಂದೆ ದಾವಣಗೆರೆಯಲ್ಲಿ ವಾಗ್ದಾಳಿ ನಡೆಸುತ್ತಿದ್ದ ರೇಣುಕಾಚಾರ್ಯ ಬೆಂಗಳೂರಿಗೆ ಆಗಮಿಸಿದ್ದರು. ಪಕ್ಷದ ವಿಚಾರಗಳಲ್ಲಿ ಯಾರೂ ಮಾತಾಡಬಾರದು ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ನಳೀನ್‌ ಕುಮಾರ್‌ ಕಟೀಲ್‌ ಎಚ್ಚರಿಕೆ ನೀಡಿದ್ದರು. ಆದರೂ ಎಂ.ಪಿ. ರೇಣುಕಾಚಾರ್ಯ ಮಾತು ಮುಂದುವರಿಸಿದ್ದು, ನಾನು ಪಕ್ಷದ ವಿರುದ್ಧವಾಗಿ ಮಾತಾಡುವುದಿಲ್ಲ. ಪಕ್ಷ ನನಗೆ ತಾಯಿ ಸಮಾನ. ಕೆಲವು ದೌರ್ಬಲ್ಯಗಳ ಬಗ್ಗೆ ನಾನು ಮಾತಡಬೇಕಾಗುತ್ತದೆ.ಮಾಧ್ಯಮದ ಮುಂದೆ ಮಾತನಾಬಾರದು ಅಂತ ಗೊತ್ತಿದೆ. ಪಕ್ಷ ಅಧಿಕಾರವಿದ್ದ ಸಮಯದಲ್ಲಿ ಯಡಿಯೂರಪ್ಪ ಕೆಳಗೆ ಇಳಿಸುವತನಕ ಮಾತಾಡುತ್ತಾ ಇದ್ದರು. ಏಕೆ ಮಾತಾಡುತ್ತಿದ್ದಿರಿ ನೀವು? ಯಡಿಯೂರಪ್ಪ ಇಳಿಸಬೇಕು ಎಂದೇ ಮಾತಾಡುತ್ತಿದ್ದಿರ? ಅದರಿಂದ ಯಡಿಯೂರಪ್ಪಗೆ ಏನೂ ನಷ್ಟ ಆಗಿಲ್ಲ.ಅವರನ್ನ ಕೆಳಗೆ ಇಳಿಸಿದ್ದಕ್ಕೆ ಸಮಾಧಾನ ಆಯಿತ? ಇಳಿಸಿದ ಮೇಲೂ ನಿರಂತರವಾಗಿ ಅವರ ವಿರುದ್ಧವಾಗಿ ಮಾತಾಡಿದಿರಿ. ಯಡಿಯೂರಪ್ಪ ನೇತೃತ್ವದಲ್ಲಿ ಚುನಾವಣೆ ಎದುರಿಸಿದ್ದರೆ ಈಗ ಸ್ಥಿತಿ ಬರುತ್ತಿರಲಿಲ್ಲ. ಆರು ಸಚಿವ ಸ್ಥಾನ ಖಾಲಿ ಇಟ್ಟುಕೊಂಡಿದ್ದಿರಿ. ಯಾವ ಕಾರಣಕ್ಕಾಗಿ ಸಚಿವ ಸ್ಥಾನ ಹಾಗೇ ಬಿಟ್ಟಿದ್ದಿರಿ? ಎಂದಿದ್ದರು. ಅಲ್ಲದೇರಾಜ್ಯ ಬಿಜೆಪಿ ಕಚೇರಿಯನ್ನು ಕೆಲವರು ಕಾರ್ಪೊರೇಟ್‌ ಕಚೇರಿ ಮಾಡಿಕೊಂಡಿದ್ದಾರೆ. ಸೂಜಿ ಹಾಗೂ ದಾರದ ರೀತಿಯಲ್ಲಿ ಜೋಡಿಸುವ ಕೆಲಸವನ್ನು ರಾಜ್ಯ ಕಚೇರಿ ಮಾಡಬೇಕು ಎಂದು ಅದನ್ನು ಕಟ್ಟಲಾಗಿದೆ. ಆದರೆ ಕತ್ತರಿಸುವ ಕೆಲಸವನ್ನು ಕೆಲವರು ಮಾಡುತ್ತಿದ್ದಾರೆ ಎಂದೂ ರೇಣುಕಾಚಾರ್ಯ ವಾಗ್ದಾಳಿ ನಡೆಸಿದ್ದರು.  ಈ ಹಿನ್ನೆಲೆಯಲ್ಲಿ  ರೇಣುಕಾಚಾರ್ಯ ಅವರಿಗೆ ಶೋಕಾಸ್‌ ನೋಟಿಸ್‌ ನೀಡಲಾಗಿತ್ತು.

ಶಿಸ್ತು ಸಮಿತಿ ನೋಟಿಸ್‌

ಪದೇಪದೇ ತಿಳಿ ಹೇಳಿದರೂ ತಾವು ರಾಜ್ಯ ಮತ್ತು ರಾಷ್ಟ್ರೀಯ ನಾಯಕರ ವಿರುದ್ಧ ಮಾಧ್ಯಮಗಳ ಮುಂದೆ ಪಕ್ಷಕ್ಕೆ ಮುಜುಗರವಾಗುವ ರೀತಿಯಲ್ಲಿ ಹೇಳಿಕೆಗಳನ್ನು ನೀಡುತ್ತಿರುವುದನ್ನು ರಾಜ್ಯ ಶಿಸ್ತು ಸಮಿತಿ ಗಂಭೀರವಾಗಿ ಪರಿಗಣಿಸಿ, ತಮ್ಮ ಮೇಲೆ ಯಾಕೆ ಶಿಸ್ತು ಕ್ರಮ ಜರುಗಿಸಬಾರದೆಂದು ಕಾರಣ ಕೇಳಿ ಈ ನೋಟಿಸನ್ನು ನೀಡಲಾಗಿದೆ. ಈ ನೋಟಿಸ್‌ ತಲುಪಿದ ಒಂದು ವಾರದೊಳಗೆ ತಾವು ಲಿಖಿತ ರೂಪದಲ್ಲಿ ಉತ್ತರವನ್ನು ನೀಡಬೇಕೆಂದು ತಿಳಿಸಲಾಗಿದೆ ಎಂದು ರಾಜ್ಯ ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ ಪಾಟೀಲ್‌ ಹೇಳಿದ್ದರು.ಸದ್ಯ ನೋಟಿಸ್‌ನಲ್ಲಿ ಉತ್ತರಿಸುವಂತೆ ಮಾತ್ರ ತಿಳಿಸಲಾಗಿದೆ. ಉತ್ತರಿಸದಿದ್ದರೆ ಯಾವುದೇ ಕ್ರಮದ ಸ್ಪಷ್ಟತೆ ನೀಡಿಲ್ಲ. ಆದರೆ ರೇಣುಕಾಚಾರ್ಯ ಪದೇಪದೇ ಹೀಗೆ ಹೇಳುತ್ತಿರುವುದರಿಂದ ಮುಂದಿನ ದಿನಗಳಲ್ಲಿ ರಾಜ್ಯ ಘಟಕದಲ್ಲಿ ಮತ್ತಷ್ಟು ಜನರು ಮಾತಾಡುವ ಸಾಧ್ಯತೆಯಿದೆ. ಹಾಗಾಗಿ ರೇಣುಕಾಚಾರ್ಯ ಅವರನ್ನು ಆರು ವರ್ಷದವರೆಗೆ ಪಕ್ಷದಿಂದ ಅಮಾನತು ಮಾಡುವ ಅಥವಾ ಉಚ್ಛಾಟನೆ ಮಾಡುವ ನಿರ್ಧಾರವನ್ನು ಮುಂದಿನ ವಾರದಲ್ಲಿ ಕೈಗೊಳ್ಳುವ ಸಾಧ್ಯತೆಯಿದೆ ಎಂದು ಪಕ್ಷದ ಮೂಲಗಳು ತಿಳಿಸಿದ್ದವು.

ಯತ್ನಾಳ್ ಗೆ ನೋಟಿಸ್ ಬೆನ್ನೆಲೆ, ರೀ ಓಪನ್ ಆದ ಮಾಜಿ ಶಾಸಕರ ಹಳೆ ಮಾತು

ಸದ್ಯ ಮಾಜಿ ಶಾಸಕ ರೇಣುಕಾಚಾರ್ಯ ಯಡಿಯೂರಪ್ಪ, ವಿಜಯೇಂದ್ರ ಪರ ಬ್ಯಾಟಿಂಗ್ ಬೀಸುತ್ತಾ, ಯತ್ನಾಳ್ ವಿರುದ್ದ ಆಕ್ರೋಶಗೊಂಡ ಬೆನ್ನೇಲೆ ಮಾಜಿ ಶಾಸಕ ರೇಣುಕಾಚಾರ್ಯರ ಹಳೆ ಮಾತುಗಳು ವಾಟ್ಸ್ ಅಫ್ ಯೂನಿರ್ವಸಿಟಿಯಲ್ಲಿ ಹರಿದಾಡುತ್ತಿದೆ. ಈ ಹಿಂದೆ ಇದೇ ರೇಣುಕಾಚಾರ್ಯ ಯಡಿಯೂರಪ್ಪ, ರಾಘವೇಂದ್ರ, ಕಟೀಲ್, ಬಿ.ಎಲ್.ಸಂತೋಷ್ ವಿರುದ್ದ ಮಾತನಾಡಿದ್ದರು. ಆಗ ಏಕೆ ಕ್ರಮ ಕೈಗೊಂಡಿಲ್ಲ. ಇದು ಪಕ್ಷದ ವಿರೋಧಿ ಚಟುವಟಿಕೆ ಅಲ್ಲವೇ ಎಂದು ಪ್ರಶ್ನಿಸುತ್ತಿದ್ದಾರೆ. ಒಟ್ಟಾರೆ ಈ ಬೆಳವಣಿಗೆ ಪಕ್ಷದ ಮೇಲೆ ಒಂದಿಷ್ಟು ಪರಿಣಾಮ ಬೀರುತ್ತಿದೆ.

Share.
Leave A Reply

Exit mobile version