ದಾವಣಗೆರೆ : ಇಡೀ ದೇಶದಲ್ಲಿ ಮೋದಿ ಅಲೆ ಇಲ್ವೇ ಇಲ್ಲ.. ಮೋದಿ ಅಲೆ ಇದೆ ಅಂತೇಳಿ ಯಾಮಾರಬೇಡಿ ಅಂತೇಳಿ ಕೆಲವು ಕಡೆ ಬಿಜೆಪಿ ಅಭ್ಯರ್ಥಿಗಳೇ ತಮ್ಮ ಕಾರ್ಯಕರ್ತರನ್ನ ಎಚ್ಚರಿಸುತ್ತಿದ್ದಾರೆ. ಇದೇ ಮಾತನ್ನ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮನ್ಸೂರ್ ಅಲಿ ಖಾನ್ ಅವರು ಕೂಡ ಹೇಳಿದ್ದಾರೆ. ಹಾಗಾದ್ರೆ ನಮ್ಮ ಕರ್ನಾಟಕದಲ್ಲಿ ಈ ಸಲ ಮೋದಿ ಅಲೆ ನೆಲಕ್ಕಚ್ಚಿದೆಯಾ..? ಸದ್ಯ ರಾಜ್ಯದಲ್ಲಿರೋದು ಕಾಂಗ್ರೆಸ್ನ ಐದು ಗ್ಯಾರಂಟಿ ಯೋಜನೆಗಳ ಅಲೆ ಇದೀಯಾ.?
2019ರ ಲೋಕಸಭಾ ಚುನಾವಣೆ ಟೈಂಗೆ ಹೋಲಿಸಿದ್ರೆ ಈಗ ರಾಜ್ಯದಲ್ಲಿ ಮೋದಿ ಅಲೆ ಇಲ್ವೇ ಇಲ್ಲ. ಅಲ್ಮೋಸ್ಟ್ ಕುಗ್ಗಿ ಹೋಗಿದೆ. 2023ರ ಸಾರ್ವತ್ರಿಕ ವಿಧಾನಸಭಾ ಚುನಾವಣಾ ಟೈಮಲ್ಲೇ ರಾಜ್ಯದಲ್ಲಿ ಮೋದಿ ಅಲೆ ಇರ್ಲಿಲ್ಲ. ಇನ್ನ ಈಗ ಇರಲು ಸಾಧ್ಯವೇ ಅಂತೇಳಿ ರಾಜ್ಯ ಕಾಂಗ್ರೆಸ್ ನಾಯಕರು ಪ್ರಶ್ನೆ ಮಾಡ್ತಿದ್ದಾರೆ. ಇಂಟ್ರೆಸ್ಟಿಂಗ್ ಸಂಗತಿ ಏನಂದ್ರೆ ದೇಶದಲ್ಲಿ ಮೋದಿ ಅಲೆ ಇಲ್ಲ ಅಂತೇಳಿ ಮಹಾರಾಷ್ಟ್ರದ ಅಮರಾವತಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನವನೀತ್ ರಾಣಾ ಅವರು ಹೇಳಿರೋದು ದೇಶಾಧ್ಯಂತ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಈ ಬಗ್ಗೆ ರಿಯಾಕ್ಟ್ ಮಾಡಿರೋ ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್, ಬಿಜೆಪಿಯು ವಿರೋಧ ಪಕ್ಷಗಳ ನಾಯಕರನ್ನು ತನ್ನ ತೆಕ್ಕೆಗೆ ಸೆಳೆದುಕೊಳ್ಳಲು ಮೋದಿ ಅಲೆ ಇದೆ ಅಂತೇಳಿ ಬಿಂಬಿಸೋ ಕೆಲಸ ಮಾಡ್ತಿವೆ ಅಂತೇಳಿ ತಿರುಗೇಟನ್ನ ಕೊಟ್ಟಿದ್ದಾರೆ.
ಇನ್ನ ಕರ್ನಾಟಕದಲ್ಲೂ ಮೋದಿ ಅಲೆ ಇಲ್ವೇ ಇಲ್ಲ. ಅದರಲ್ಲೂ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಲ್ಲಿ ಮೋದಿ ಅಲೆ ಇಲ್ಲದಿದ್ರೂ ಇಲ್ಲಿನ ಹಾಲಿ ಬಿಜೆಪಿ ಸಂಸದ ಪಿಸಿ ಮೋಹನ್ ಮೋದಿ ಅಲೆ ಇದೆ. ಮತ್ತೆ ತಾವು ಗೆದ್ದು 4ನೇ ಸಲ ಸಂಸತ್ ಪ್ರವೇಶಿಸ್ತೀವಿ ಅಂತೇಳುತ್ತಿದ್ದಾರೆ.. ಈ ಬಗ್ಗೆ ರಿಯಾಕ್ಟ್ ಮಾಡಿರೋ ಈ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮನ್ಸೂರ್ ಅಲಿ ಖಾನ್, ನಮ್ಮ ಕ್ಷೇತ್ರದಲ್ಲಷ್ಟೇ ಅಲ್ಲ, ರಾಜ್ಯದಲ್ಲಿ ಮೋದಿ ಅಲೆ ಇಲ್ವೇ ಇಲ್ಲ. ಇಲ್ಲಿರೋದು ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರೋ ಐದು ಗ್ಯಾರಂಟಿ ಯೋಜನೆಗಳ ಅಲೆ ಅಂತೇಳಿ ಮಾರ್ಮಿಕವಾಗಿ ಕುಟುಕಿದ್ದಾರೆ. ಅಷ್ಟೇ ಅಲ್ಲ., ಈ ಸಲ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಲ್ಲಿ ಹಾಲಿ ಸಂಸದ ಪಿಸಿ ಮೋಹನ್ ಸೋಲು ಗ್ಯಾರಂಟಿ ಅಂತೇಳಿದ್ದಾರೆ. ಯಾಕಂದ್ರೆ ಕಳೆದ 15 ವರ್ಷಗಳಿಂದ ಪಿಸಿ ಮೋಹನ್ ಬೆಂಗಳೂರು ಕೇಂದ್ರದ ಸಂಸದರಾಗಿದ್ರೂ ಈ ಕ್ಷೇತ್ರದ ಜನ ಸಂಸದರನ್ನ ನೋಡೇ ಇಲ್ವಂತೆ.
ಕ್ಷೇತ್ರದಲ್ಲಿ ಬಿಜೆಪಿ ಸಂಸದರ ಇಲ್ಲದಿರುವಿಕೆ ಸೇರಿ ಹಲವು ದೂರುಗಳಿವೆ. ನಮ್ಮ ಪರವಾಗಿ ಕೆಲಸ ಮಾಡುತ್ತಿರುವ ಒಂದು ಪ್ರಮುಖ ವಿಷಯವೆಂದರೆ ರಾಜ್ಯ ಸರ್ಕಾರದ ಐದು ಖಾತರಿಗಳು. ಬಹಳಷ್ಟು ಜನ ಇದಕ್ಕೆ ಸಂಬಂಧಿಸಿ ರಾಜ್ಯ ಸರ್ಕಾರ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಅಂತೇಳಿ ಕಾಂಗ್ರೆಸ್ ಅಭ್ಯರ್ಥಿ ಮನ್ಸೂರ್ ಅಲಿಖಾನ್ ಹೇಳಿದ್ದಾರೆ.
ಇನ್ನ ಕಳೆದ 5 ವರ್ಷಗಳಲ್ಲಿ ಬೆಂಗಳೂರು ಸೆಂಟ್ರಲ್ ಸಂಸದ ಸೇರಿದಂತೆ ರಾಜ್ಯದ 25 ಬಿಜೆಪಿ ಎಂಪಿಗಳು ಸಂಸತ್ನಲ್ಲಿ ರಾಜ್ಯದ ಪರ ದನಿ ಎತ್ತಿಲ್ಲ. ನೆರೆ, ಬರ ಪರಿಹಾರವನ್ನ ಕೇಂದ್ರದಿಂದ ತರುವಲ್ಲಿ ರಾಜ್ಯದ ಬಿಜೆಪಿ ಸಂಸದರು ವಿಫಲವಾಗಿದ್ದಾರೆ. ಜಿಎಸ್ಟಿ ಪಾಲಲ್ಲಿ ಕೇಂದ್ರದಿಂದ ನಿರಂತರವಾಗಿ ಅನ್ಯಾಯವಾಗ್ತಾಯಿದೆ. ಹೀಗಿದ್ರೂ ರಾಜ್ಯದ ಬಿಜೆಪಿ ಸಂಸದರು ಸುಮ್ಮನಿದ್ರು. ಹೀಗಾಗಿ ಈ ಸಲ ಬೆಂಗಳೂರು ಕೇಂದ್ರ ಸೇರಿದಂತೆ ರಾಜ್ಯದ ಉದ್ದಗಲಕ್ಕೂ ಮತದಾರರು ಬಿಸಿ ಮುಟ್ಟಿಸೋದು ಗ್ಯಾರಂಟಿ ಅಂತೇಳಿ ಮನ್ಸೂರ್ ಅಲಿಖಾನ್ ಹೇಳಿದ್ದಾರೆ.
ಮನ್ಸೂರ್ ಗೆದ್ರೆ ಬೆಂ. ಕೇಂದ್ರದ ಅಭಿವೃದ್ಧಿಗೆ ಒತ್ತು?
ಕಾಂಗ್ರೆಸ್ನಿಂದ ಮಾತ್ರ ಸಮಗ್ರ ಅಭಿವೃದ್ಧಿ ಸಾಧ್ಯ?
ಯಾವುದೇ ಪಕ್ಷ ನಿರಂತರವಾಗಿ ಆಳ್ವಿಕೆ ನಡೆಸಿದ್ರೆ, ಪದೇ ಪದೇ ಓರ್ವ ಅಭ್ಯರ್ಥಿಯೇ ಗೆದ್ದು ಹೋಗ್ತಾಯಿದ್ದಾರೆ ಆ ಪ್ರದೇಶ, ಆ ಕ್ಷೇತ್ರ ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ.. ಅದೇ ರೀತಿ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಲ್ಲೂ ಬಿಜೆಪಿಯ ಪಿಸಿ ಮೋಹನ್ ಅವರು ಸತತ 3 ಸಲ ಗೆದ್ದು ಪರ್ಲಿಮೆಂಟ್ಗೆ ಹೋಗಿದ್ದು, ಇವರಿಂದ ಇನ್ನ ಈ ಕ್ಷೇತ್ರದ ಅಭಿವೃದ್ಧಿ ಸಾಧ್ಯವಿಲ್ಲ ಅನ್ನೋ ಮಾತುಗಳು ಕೇಳಿಬರ್ತಾಯಿವೆ. ಇನ್ನ ಈ ಬಗ್ಗೆ ರಿಯಾಕ್ಟ್ ಮಾಡಿರೋ ಈ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮನ್ಸೂರ್ ಅಲಿ ಖಾನ್, ನಾನು ಅಭಿವೃದ್ಧಿಯನ್ನು ಆಧರಿಸಿದ ಅಜೆಂಡಾವನ್ನು ಹೊಂದಿದ್ದೇನೆ. ಬೆಂಗಳೂರು ನಗರದಲ್ಲಿ ಶಿಕ್ಷಣ, ಆರೋಗ್ಯ ರಕ್ಷಣೆ ಮತ್ತು ಮೂಲಸೌಕರ್ಯ ಅಭಿವೃದ್ಧಿ ಕುರಿತು ನೀತಿ ನಿರ್ಧಾರಗಳನ್ನು ಕೈಗೊಳ್ಳಲು ನಾನು ಉತ್ಸುಕನಾಗಿದ್ದೇನೆ. ಮೂಲಸೌಕರ್ಯ ಅಭಿವೃದ್ಧಿ ಎಂದರೆ, ಬೆಂಗಳೂರಿನ ಹಸಿರು ಹೊದಿಕೆಯನ್ನು ಮರಳಿ ಪಡೆಯುವುದು, ಕೆರೆಗಳ ಅಭಿವೃದ್ಧಿ ಮತ್ತು ಅಂತರ್ಜಲದ ಪುನಶ್ಚೇತನ. ಅವು ನಗರದ ದೊಡ್ಡ ಸಮಸ್ಯೆಗಳಾಗಿದ್ದು, ನಗರದ ಮೇಲೆ ಪರಿಣಾಮ ಬೀರಬಹುದು. ನಗರದಲ್ಲಿ ನೀರಿಲ್ಲದಿದ್ದರೆ ನೀವು ಏನು ಮಾಡುತ್ತೀರಿ? ಎಂಬುದು ನಾನು ನಾಗರಿಕರ ಗಮನ ಸೆಳೆಯಲು ಬಯಸುವ ಒಂದು ವಿಷಯವಾಗಿದೆ. ಇದು ಸರ್ಕಾರ ಮತ್ತು ನಾಗರಿಕರ ಜಂಟಿ ಜವಾಬ್ದಾರಿಯಾಗಿದೆ ಅಂತೇಳಿ ಮನ್ಸೂರ್ ಅಲಿ ಖಾನ್ ಹೇಳಿದ್ದಾರೆ.
ಹಾಗಾದ್ರೆ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಲ್ಲಿ ಈ ಸಲ ಬದಲಾವಣೆಯ ಗಾಳಿ ಬೀಸುತ್ತಾ.? ಕಾಂಗ್ರೆಸ್ನ ಯುವ ಮುಖಂಡ ಮನ್ಸೂರ್ ಅಲಿ ಖಾನ್ ಗೆದ್ದು ಈ ಕ್ಷೇತ್ರದ ಹಳೆ ದಾಖಲೆಗೆ ಬ್ರೇಕ್ ಹಾಕ್ತಾರಾ..?