ಶಿವಮೊಗ್ಗ : ಕಳವು ಮಾಡಿದ್ದ ಬೈಕ್‌ನ್ನು ನಗರದ ಪಶ್ಚಿಮ ಠಾಣೆ ಪೊಲೀಸರು ಮೂಲ ಮಾಲೀಕರಿಗೆ ಹಿಂದಿರುಗಿಸಿದ್ದಾರೆ.
ಹೀರೋ ಸ್ಪೇಂಡರ್ ಬೈಕ್ ಮಾರ್ಚ್ ತಿಂಗಳಿನಲ್ಲಿ ಮೆಗ್ಗಾನ್ ಆಸ್ಪತ್ರೆ ಬಳಿ ಕಳವಾಗಿತ್ತು. ಸದರಿ ಬೈಕ್‌ನ್ನು ಪಶ್ಚಿಮ ಸಂಚಾರ ಪೊಲೀಸ್ ಠಾಣೆಯ ಪಿಎಎಸ್‌ಐ ತಿರುಮಲೇಶ್ ರವರ ಮಾರ್ಗದರ್ಶನದಲ್ಲಿ ಬೈಕ್ ನ್ನು ಠಾಣಾ ಸಿಬ್ಬಂದಿಗಳಾದ ಮಹಮ್ಮದ್ ಜಕ್ರಿಯ, ಜಗದೀಶ್, ಸಂದೀಪ್, ಪ್ರವೀಣ್ ಪಾಟೀಲ್, ಪ್ರಶಾಂತ್ , ಪ್ರಕಾಶ್ , ಹರೀಶ್ , ಬೈಕ್ ಪತ್ತೆ ಹಚ್ಚಿದ್ದಾರೆ.ಅಲ್ಲದೆ ಬೈಕಿನ ಮಾಲೀಕರಾದ ಮ್ಯಾಕ್ಸಿಮ್ ಪರಯಸ್‌ರವರಿಗೆ ಮಾರ್ಚ್ ೧೬ಕ್ಕೆ ಮಾಲೀಕರಿಗೆ ಹಿಂದುರುಗಿಸಲಾಗಿದೆಯೆಂದು ಪ್ರಕಟಣೆ ತಿಳಿಸಿದೆ.