ದಾವಣಗೆರೆ : ಬಂಗಾರದಂತೆ ಅಡಕೆ ಕೂಡ ಏರಿಳಿಕೆ ಕಂಡಿದ್ದು ಬುಧವಾರ. 54 ಸಾವಿರ ಆಗಿದೆ. ಅಡಿಕೆ ಧಾರಣೆಯಲ್ಲಿ ಚೇತರಿಕೆಯಾಗಿದ್ದರಿಂದ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದೆ. ಬೇಡಿಕೆ ಹೆಚ್ಚಾಗಿರುವ ಕಾರಣ ಅಡಿಕೆ ಧಾರಣೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಅಡಕೆ ದರ ಎಷ್ಟು ಈ ಕಾಲಂ ನೋಡಿ
ಬರಗಾಲವಾದ ಕಾರಣ ರೈತರ ಬಳಿ ಅಡಕೆ ಇಲ್ಲ. ಅಲ್ಲದೇ ಇಳುವರಿ ಕೂಡ ಕಡಿಮೆ ಇದೆ. ಈ ಕಾರಣ ಅಡಕೆ ಬೆಲೆ ಏರಿಳಿತವಾಗಿದೆ. ಸದ್ಯ ಬಹುತೇಕ ರೈತರ ಬಳಿ ಅಡಿಕೆ ಇಲ್ಲ. ಆದರೆ, ರೇಟ್ ಮಾತ್ರ ಏರುತ್ತಲೇ ಇದೆ. ಅಲ್ಲೋ, ಇಲ್ಲೋ ಒಬ್ಬಿಬ್ಬರು ರೈತರು ಅಡಕೆಯನ್ನು ಆಪತ್ತಿಗೆಂದು ಇಟ್ಟುಕೊಂಡವರಿಗೆ ಬಂಪರ್ ಬೆಲೆ ಸಿಗುತ್ತಿದೆ.