ಶಿವಮೊಗ್ಗ : ಭಾರತೀಯ ಜನತಾಪಕ್ಷದಲ್ಲಿ ನಡೆಯುತ್ತಿರುವ ಘಟನೆಗಳನ್ನು ನೋಡಿದರೆ ಹಿಂದುತ್ವವೇ ಇಲ್ಲದಂತ್ತಾಗಿದೆ ಎಂದು ರಾಷ್ಟ್ರಭಕ್ತ ಬಳಗದ ಸಂಚಾಲಕ ಕೆ.ಎಸ್.ಈಶ್ವರಪ್ಪ ಅಸಮಾಧಾನ ವ್ಯಕ್ತಪಡಿಸಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಬಿಜೆಪಿಯ ಅಸಮಾಧಾನಿತ 12 ಹಿರಿಯ ಮುಖಂಡರು ನೆನ್ನೆ ಸಭೆ ನಡೆಸಿ ಪಾದಯಾತ್ರೆಗೆ ನಿರ್ಧರಿಸಿದ್ದಾರೆ.  ಸಭೆಯಲ್ಲಿ ಚರ್ಚಿಸಿರುವ ಬಗ್ಗೆ ಬಹಿರಂಗವಾಗಿ ಹೇಳುತ್ತಿಲ್ಲ. ಅನುಭವಿಗಳು, ಪಕ್ಷ ಕಟ್ಟಿದವರು, ನೋವು ಅನುಭವಿಸುತ್ತಿರುವವರು ಈ ಸಭೆ ನಡೆಸಿದ್ದಾರೆ ಎಂದರು.
ಬಿಜೆಪಿ ರಾಜ್ಯಾಧ್ಯಕ್ಷರನ್ನು ಬಿಟ್ಟು ಈ ರೀತಿ ಸಭೆಗಳು ನಡೆಯುತ್ತಿವೆ. ಹೀಗೆ ಸಭೆಗಳು ನಡೆಸುತ್ತ ಹೋದರೆ ಬಿಜೆಪಿ ಇಬ್ಬಾಗವಾಗುವ ಸಾಧ್ಯತೆ ಇದೆ. ತಾಲ್ಲೂಕು ಮಟ್ಟದಲ್ಲಿಯೂ ಕೂಡ 2 ಗುಂಪುಗಳಾಗುತ್ತವೆ. ಇವತ್ತು 12ಜನರಿರಬಹುದು. ಹಾಗಂತ ಪಕ್ಷದ ವರಿಷ್ಟರು ನಿರ್ಲಕ್ಷ ಮಾಡಿದರೆ ರಾಜ್ಯದಲ್ಲಿ ಬಿಜೆಪಿ ಪಕ್ಷ ಕುಂಠಿತವಾಗುತ್ತ ಹೋಗುತ್ತದೆ.ಕೂಡಲೇ ಕೇಂದ್ರದ ನಾಯಕರು ಈ ಬಗ್ಗೆ ಗಮನಹರಿಸಿ ಕೂಡಲ ಸಂಗಮದಿಂದ ಬಳ್ಳಾರಿಯ ತನಕ ಪಾದಯಾತ್ರೆಗೆ ಹೊರಟಿರುವ ಬಿಜೆಪಿ ನಾಯಕರನ್ನು ಕರೆದು ಚರ್ಚಿಸಿ ಅವರ ನೋವುಗಳನ್ನು ಆಲಿಸಿ ಅಗತ್ಯ ಮುನ್ಸೂಚನೆ ನೀಡಬೇಕು ಎಂದರು.
Share.
Leave A Reply

Exit mobile version