ಭದ್ರಾವತಿ ; ಸುಮಾರು ಐದು ವರ್ಷಗಳಿಂದ ಕುಂಟುತ್ತಾ ಇದ್ದ ಸಮುದಾಯ ಭವನ ಬಸವ ಜಯಂತಿ ದಿನ ಗಣ್ಯರ ಸಮ್ಮುಖದಲ್ಲಿ ಉದ್ಘಾಟನೆ ಗೊಳ್ಳಲಿದೆ. ಹಾಗಾದ್ರೆ ಈ ಸಮುದಾಯ ಯಾವುದು ಬನ್ನಿ ನೋಡೋಣ?

ಭದ್ರಾವತಿ ತಾಲೂಕಿನ ಜನ್ನಾಪುರದ ಅಂತರಘಟ್ಟಮ್ಮ ಸಮುದಾಯ ಭವನದ ಕನಸು ಈಗ ನನಸಾಗಿದೆ..ಈ ಸಮುದಾಯ ಕಟ್ಟಲು ಸಾಕಷ್ಟು ಅಡೆತಡೆಗಳು ಬಂದ್ರು..ಅಂತಿಮವಾಗಿ ಈಗ ಗುರಿ ಮುಟ್ಟಿದೆ.

ಜನ್ನಾಪುರದ ಅಧಿ ದೇವತೆ ಅಂತರಘಟ್ಟಮ್ಮ ಸಮ್ಮುಖದಲ್ಲಿಯೇ ಇರುವ ಈ ಸಮುದಾಯ ಭವನ ಸುಮಾರು ಒಂದು ಕೋಟಿ ವೆಚ್ಚದಲ್ಲಿ ಮೇಲೆದ್ದು ನಿಂತಿದೆ.

ಬಡವರಿಗೆ, ಸಂಕಷ್ಟದಲ್ಲಿದವರಿಗೆ ಉಪಯೋಗ

ಬೃಹದ್ ಕಾರವಾಗಿ ಕಟ್ಟಿರುವ ಅಂತರಘಟ್ಟಮ್ಮ ಸಮುದಾಯ ಭವನ ದೀನದಲಿತರಿಗಾಗಿ, ಬಡವರಿಗಾಗಿ ಕಟ್ಟಲಾಗಿದೆ. ಅಲ್ಲದೇ ಸುಮಾರು ಐದು ನೂರು ಜನ ಕುಳಿತುಕೊಳ್ಳಬಹುದಾಗಿದ್ದು, ನಾಮಕರಣ, ಸಭೆ, ಸಮಾರಂಭಗಳಿಗೆ ಅತಿ ಕಡಿಮೆ ದರದಲ್ಲಿ ದೊರೆಯಲಿದೆ.

ಈ ಸಮುದಾಯ ಭವನ ಸಾರ್ವಜನಿಕ ಉದ್ದೇಶಕ್ಕಾಗಿ ಬಳಸಲಾಗುತ್ತಿದ್ದು, ಜನರ ಸೇವೆಗಾಗಿ ಇರಲಿದೆ. ಇದರಲ್ಲಿ ಯಾವುದೇ ವೈಯಕ್ತಿಕ ಖಾತೆಗೆ ಹಣ ಹೋಗೋದಿಲ್ಲ ಎಂದು ಮಂಜಪ್ಪ ಹೇಳುತ್ತಾರೆ. ಇನ್ನು ಶಾಸಕ ಸಂಗಮೇಶ್ ಇದರ ಉದ್ಘಾಟನೆಗೆ ಬರಲಿದ್ದು, ಸಾಕಷ್ಟು ಗಣ್ಯರು ಬರಲಿದ್ದಾರೆ. ಒಟ್ಟಾರೆ ಬಸವ ಜಯಂತಿ ದಿನ ಸಮುದಾಯ ಭವನ ಲೋಕಾರ್ಪಣೆಗೊಳ್ಳಲಿದ್ದು, ಜನರ ಸೇವೆಗಾಗಿ ಬಳಕೆಯಾಗಲಿ.

 

Share.
Leave A Reply

Exit mobile version