ಅಂತರಘಟ್ಟ ಸಮುದಾಯಭವನ : ಯಾರೇ ಕುತಂತ್ರಿಗಳು ಅಡ್ಡ ಬಂದರೂ, ನಿಮ್ಮ ಜತೆ ನಾನಿರುತ್ತೇನೆಂದ ಕೆಂಚೆನಹಳ್ಳಿ ಕುಮಾರ್

ಭದ್ರಾವತಿ ; ಅಂತರ ಘಟ್ಟ ಸಮುದಾಯ ಭವನ ಸಾಕಷ್ಟು ಅಡೆತಡೆಗಳ ನಂತರ ಹುಟ್ಟಿಕೊಂಡಿದ್ದು, ಯಾರೇ ಕುತಂತ್ರಿಗಳು ಅಡ್ಡ ಬಂದರೂ, ನಿಮ್ಮ ಜತೆ ನಾನಿರುತ್ತೇನೆಂದ ಕಾಂಗ್ರೆಸ್ ನಾಯಕ ಕೆಂಚೆನಹಳ್ಳಿ ಕುಮಾರ್ ಹೇಳಿದರು.

ನಗರದ ಜನ್ನಾಪುರದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಅಂತರಘಟ್ಟಮ್ಮ ಸಮುದಾಯ ಭವನ ಉದ್ಘಾಟಿಸಿ ಮಾತನಾಡಿ, ನಾನು ಚಿಕ್ಕದಿನಿದಿಂದಲೂ ಈ ಏರಿಯಾಕ್ಕೆ ಬಂದಿದ್ದೇನೆ..ಇದು ಜನರಿಗಾಗಿ ಕಟ್ಟಿರುವ ಸಮುದಾಯ ಭವನ, ಒಂದು ಒಳ್ಳೆ ಕೆಲಸಕ್ಕೆ ನೂರೆಂಟು ವಿಘ್ನಗಳು ಬರುತ್ತದೆ. ಅದನ್ನೇಲ್ಲ ತಲೆಕೆಡಿಸಿಕೊಳ್ಳಬೇಡಿ ನಿಮ್ಮ ಜತೆ ಸದಾಕಾಲ ನಾನು ಇರುತ್ತೇನೆ ಎಂದರು.

ಈ ದೇವಸ್ಥಾನಕ್ಕೆ ಸುಮಾರು ಐವತ್ತು, ಆರವತ್ತು ವರ್ಷದ ಇತಿಹಾಸವಿದೆ. ಈ ಭಾಗದ ದೈವಿ ಸ್ವರೂಪ ಈ ದೇವಸ್ಥಾನವಾಗಿದೆ. ನಾನು ಸಣ್ಣ ಹುಡುಗ ಇದ್ದಾಗ ಇಲ್ಲಿಂದ ಶಾಲೆಗೆ ಹೋಗುತ್ತಿದ್ದೇ. ಆ ಸಂದರ್ಭದಲ್ಲಿ ಈ ಜಾಗವಿತ್ತು. ಕಮಿಟಿಯವರೆಲ್ಲರೂ ಸೇರಿ ಸಮುದಾಯ ಭವನ ನಿರ್ಮಾಣ ಮಾಡಿರುವುದು ಸಂತೋಷದ ವಿಚಾರ. ಇದು ಸಾರ್ವಜನಿಕರ ಸಮುದಾಯ ಭವನ, ಸಾರ್ವಜನಿಕರಿಗೆ ಸೇರಿದ್ದು, ಒಳ್ಳೆ ಕಾರ್ಯ ಮಾಡಿದ್ದೀರಿ. ದೇವಿಯ ಸನ್ನಿಧಿಯಲ್ಲಿ ಕಟ್ಟಡ ಉದ್ಘಾಟನೆಗೊಂಡಿದೆ. ಯಾರು ಕಮಿಟಿಯವರು ಅವರ ಮನೆಗಾಗಿ ಸಮುದಾಯಭವನ ಕಟ್ಟಿಲ್ಲ, ಏನು ಮನೆಗೆ ತೆಗೆದುಕೊಂಡು ಹೋಗೋದಿಲ್ಲ ಎಂದು ಕಮಿಟಿಯವರಿಗೆ ಬೆಂಬಲ ನೀಡಿದರು. ಈ ಸಂದರ್ಭದಲ್ಲಿ ಅಧ್ಯಕ್ಷ ವಿರೂಪಾಕ್ಷಪ್ಪ, ಕಾರ್ಯದರ್ಶಿ ಕೆ.ಮಂಜಣ್ಣ, ಉಪಾದ್ಯಕ್ಷ ಮಹಾಲಿಂಗಪ್ಪ, ಚೆಲುವೆಗೌಡರು, ಖಜಾಂಚಿ ಧರ್ಮರಾಜ್, ಟ್ರಸ್ಟಿಗಳಾದ ಬಿ.ಕೆ.ಚಂದ್ರಪ್ಪ, ಮಂಜುನಾಥ್, ರಮೇಶ್, ಮಹಾದೇವ,ಜಗದೀಶ್ ಜೆ.ಎಂ, ಡಿ.ರುದ್ರೇಶ್ ಸೇರಿದಂತೆ ಇತರರು ಇದ್ದರು.

 

Share.
Leave A Reply

Exit mobile version