
ಹೊಳೆಹೊನ್ನೂರು : ಇಷ್ಟು ದಿನ ಮಳೆಗಾಗಿ ಕಾಯುತ್ತಿದ್ದ ಪಟ್ಟಣದ ರೈತರು ಈಗ ಮಳೆ ಬಂದ ಕಾರಣ ಕೈ ಮುಗಿದು ಸ್ವಾಗತಿಸಿದರು. ಪಟ್ಟಣದ ಸುತ್ತಮುತ್ತಲಿನ ಗ್ರಾಮಗಳಲ್ಲಿ ಗುರುವಾರ ಉತ್ತಮ ಮಳೆಯಾಗಿದೆ. ಸಂಜೆ ನಾಲ್ಕು ಘಂಟೆಗೆ ಆರಂಭವಾದ ಮಳೆ ಭಾರೀ ಗಾಳಿ, ಗುಡುಗು ಮತ್ತು ಮಿಂಚು ಸೇರಿದಂತೆ ಸುಮಾರು ಒಂದು ಘಂಟೆ ಕಾಲ ಸತತವಾಗಿ ಸುರಿಯಿತು.
ಯಡೇಹಳ್ಳಿ, ಅಶೋಕನ ನಗರ, ಅಗರದಹಳ್ಳಿ, ಚಂದನಕೆರೆ, ಕಲ್ಲಿಹಾಳ್, ಬೈರನಹಳ್ಳಿ, ಅರಹತೊಳಲು, ಅರಕೆರೆ, ಅರಬಿಳಚಿ, ವಿಠಲಾಪುರ, ಜಂಭರಘಟ್ಟೆ, ಅಗಸನಹಳ್ಳಿ, ಎಮ್ಮೆಹಟ್ಟಿ, ಕೆರೆಬೀರನ ಹಳ್ಳಿ, ಹನುಮಂತಾಪುರ ಸೇರಿದಂತೆ ಎಲ್ಲಾ ಕಡೆಗಳಲ್ಲಿ ಉತ್ತಮ ಮಳೆಯಾಗಿದೆ.ಕಳೆದ ಮೂರ್ನಾಲ್ಕು ದಿನಗಳಿಂದ ಮಳೆ ವಾತಾವರಣವಿದ್ದರೂ, ಮಳೆ ಬರುತ್ತಿರಲಿಲ್ಲ. ಆದರೆ ಗುರುವಾರ ಮಳೆ ಬೀಳಲು ಆರಂಭಿಸಿದ ಕೂಡಲೇ ಸಂತಸಗೊAಡ ರೈತರು ವರುಣ ದೇವನಿಗೆ ಕೈ ಮುಗಿದು ಸ್ವಾಗತಿಸಿದರು.