ಚನ್ನಗಿರಿ : ತಾಲೂಕಿನ ಕಸಬಾ ಹೋಬಳಿಯ ಅರಸಿನಗಟ್ಟ ಗ್ರಾಮದ  ಧರ್ಮೇಂದ್ರ ಮತ್ತು ಪಾರ್ವತಮ್ಮನವರು  ವಾಸವಿದ್ದ  ದನದ ಮನೆಯಲ್ಲಿ ಸೋಮವಾರ ಸಿಲಿಂಡರ್ ಸ್ಪೋಟದಿಂದ ಸಂಪೂರ್ಣ ಮನೆ ನೆಲಸಮವಾಗಿದ್ದು , ಸ್ಥಳಕ್ಕೆ  ತಹಸೀಲ್ದಾರ್  ಯರ‍್ರಿಸ್ವಾಮಿ ಬೇಟಿ ನೀಡಿ ಪರಿಶೀಲನೆ ನಡೆಸಿದರು.

ಬಡ ಕುಟುಂಬದ  ಪರಿಸ್ಥಿತಿಯನ್ನು ಅರಿತ ತಹಸೀಲ್ದಾರ್ ಮಾನವೀಯ ನೆಲಗಟ್ಟಿನಲ್ಲಿ ತಾಲೂಕು ಮಟ್ಟದ  ಅಧಿಕಾರಿಗಳು ಮತ್ತು ಕಂದಾಯ ಇಲಾಖೆಯ  ಸಿಬ್ಬಂದಿಗಳಿಂದ ಸುಮಾರು 65.000 ರೂಗಳಷ್ಟು ಹಣವನ್ನು ಸಂಗ್ರಹಿಸಿ ನೊಂದ  ಕುಟುಂಬಕ್ಕೆ ನೀಡುವ ಮೂಲಕ ನೆರವಾಗಿದ್ದಾರೆ. 

ಸಿಲಿಂಡರ್ ಸ್ಪೋಟದ ಕುರಿತು ಸರಕಾರಕ್ಕೆ  ವರದಿಯನ್ನು  ಸಲ್ಲಿಸಲಾಗಿದೆ. ಆದರೆ ಓಡಾಡಲು ಬಾರದ ಗಂಡನೊಂದಿಗೆ  ಪತ್ನಿ ಜೀವನ ಸಾಗಿಸುತ್ತಿದ್ದು  ಊಟ ಮಾಡಲು ಕಷ್ಟದ ಪರಿಸ್ಥಿತಿ ಇದೆ. ಮುಂದಿನ  ದಿನಗಳಲ್ಲಿ  ಸರಕಾರಿ  ಇಲಾಖೆಗಳಿಂದ  ದೊರಕುವಂತಹ  ಸೌಲಭ್ಯವ್ನು ದೊರಕಿಸಿಕೊಡುವ ಭರವಸೆ ನೀಡಿದರು. ಈ ಸಂದರ್ಭದಲ್ಲಿ  ಗ್ರಾಮ ಲೆಕ್ಕಿಗರು. ಕಂದಾಯ ಇಲಾಖೆಯ  ಸಿಬ್ಬಂದಿಗಳು ಹಾಜರಿದ್ದರು.   

Share.
Leave A Reply

Exit mobile version