ಶಿವಮೊಗ್ಗ,ಜೂ.6: ರಾಯಲ್ ಆರ್ಕೆಡ್ ಸೆಂಟ್ರಲ್ ವತಿಯಿಂದ ಜೂ.9 ಮತ್ತು ಜೂ.23ರಂದು ಟ್ಯಾಲೆಂಟ್ ಫೆಸ್ಟಿವಲ್ ಎಂಬ ವಿನೂತನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಜನರಲ್ ಮ್ಯಾನೇಜರ್ ಉಮೇಶ್ ಹೇಳಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಟ್ಯಾಲೆಂಟ್ ಫೆಸ್ಟಿವಲ್ನಲ್ಲಿ ವಯಸ್ಸಿನ ಮಿತಿಯಿಲ್ಲದೆ ಸಾರ್ವಜನಿಕರು ಭಾಗವಹಿಸಬಹುದಾಗಿದೆ. ಪ್ರತಿಭೆಗಳನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ಇದನ್ನು ಆಯೋಜಿಸಲಾಗಿದೆ.
ನೃತ್ಯ, ಕಾಮಿಡಿ, ನಾಟಕ, ವಾದ್ಯ ನುಡಿಸುವುದು, ಯೋಗಾಸನ, ಚಿತ್ರಕಲೆ, ನಿರೂಪಣೆ, ಕರೋಕೆ ಗೀತೆ, ಹಾಡುಗಾರಿಕೆ, ಭರತನಾಟ್ಯ, ಏಕಪಾತ್ರಭಿನಯ ಮುಂತಾದ ಪ್ರತಿಭೆಯನ್ನು ಪ್ರದರ್ಶಿಸಲು ಅವಕಾಶವಿದೆ ಎಂದರು.ಇದಕ್ಕಾಗಿ 599 ಶುಲ್ಕವನ್ನು ನಿಗಧಿಪಡಿಸಲಾಗಿದೆ. ಸಾರ್ವಜನಿಕರಿಗೆ ಮತ್ತು ಪೋಷಕರಿಗೆ 399 ಪ್ರವೇಶ ಶುಲ್ಕ ವಿಧಿಸಲಾಗಿದೆ. ಆಕರ್ಷಕ ಟ್ರೋಫಿ, ಪ್ರಶಸ್ತಿ ಪತ್ರ, ನೈಟ್ ಡಿನ್ನರ್ನ್ನು ನೀಡಲಾಗುವುದು. ಹೆಚ್ಚಿನ ವಿವರಗಳಿಗೆ ದೂರವಾಣಿ, 8123005603ನ್ನು ಸಂಪರ್ಕಿಸಬಹುದು.ಪತ್ರಿಕಾಗೋಷ್ಠಿಯಲ್ಲಿ ಚಲನಚಿತ್ರ ನಿರ್ದೇಶಕ ಶಶಿಕುಮಾರ್ ಎನ್., ಪ್ರಭು, ವಿಕಾಸ್, ಕೃಷ್ಣೇಗೌಡ ಮುಂತಾದವರು ಇದ್ದರು.