ದಾವಣಗೆರೆ: ದಾವಣಗೆರೆಯಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ ಯಾವುದೇ ಅಭಿವೃದ್ಧಿ ಕಾರ್ಯಗಳಾಗಿಲ್ಲ. ಹಾಗಾಗಿ ಕಾಂಗ್ರೆಸ್ ಅಭ್ಯರ್ಥಿ ಸೋಲಿಸಬೇಕು ಎಂದು ಪಕ್ಷೇತರ ಅಭ್ಯರ್ಥಿಗಳ ಒಕ್ಕೂಟ ನಿರ್ಧರಿಸಿದೆ ಎಂದು ಒಕ್ಕೂಟದ ಅಧ್ಯಕ್ಷ ಎಚ್. ಸುಭಾನ್ ಖಾನ್ ತಿಳಿಸಿದರು.ಭಾನುವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಕಾಂಗ್ರೆಸ್ ಅಭ್ಯರ್ಥಿಯನ್ನು ಸೋಲಿಸಬೇಕು ಎಂದೇ ಪಕ್ಷೇತರ ಅಭ್ಯರ್ಥಿಗಳ ಒಕ್ಕೂಟ ರಚಿಸಿ ಕೊಂಡಿದ್ದೇವೆ ಎಂದರು.
ಕಾಂಗ್ರೆಸ್ ಅಲ್ಪಸಂಖ್ಯಾತರನ್ನು ಕೇವಲ ಮತಗಳಿಗಾಗಿ ಬಳಕೆ ಮಾಡಿಕೊಳ್ಳುತ್ತಿದೆ ಯೇ ಹೊರತು ಸಮಾಜಕ್ಕೆ ಯಾವುದೇ ಸ್ಥಾನಮಾನ, ಅಧಿಕಾರ ನೀಡುತ್ತಿಲ್ಲ. ಕಾಂಗ್ರೆಸ್ ನವರು ಅಲ್ಪಸಂಖ್ಯಾತರನ್ನು ಬಾಳೆಎಲೆಯಂತೆ ಬಳಕೆ ಮಾಡಿಕೊಂಡು ನಂತರ ಮೂಲೆಗುಂಪು ಮಾಡುತ್ತಾರೆ. ವಿನಯ್ ಕುಮಾರ್ ಹೊರತುಪಡಿಸಿ ಎಲ್ಲ ಪಕ್ಷೇತರ ಅಭ್ಯರ್ಥಿಗಳು ಒಂದಾಗಿ ಕಾಂಗ್ರೆಸ್ ಸೋಲಿಸಲು ಕೆಲಸ ಮಾಡುತ್ತಿ ದ್ದೇವೆ. ಬಿಜೆಪಿ ಗೆದ್ದರೂ ಚಿಂತೆ ಇಲ್ಲ. ಕಾಂಗ್ರೆಸ್ ಸೋಲಲೇಬೇಕು ಎಂಬುದು ನಮ್ಮ ಒಕ್ಕೂಟದ ಉದ್ದೇಶ ಎಂದು ತಿಳಿಸಿದರು.ಪಕ್ಷೇತರ ಅಭ್ಯರ್ಥಿಗಳಾದ ತಸ್ಲೀಂಬಾನು, ಎಚ್. ಪರ್ವೇಜ್, ಸಲೀಂ, ರಷೀದ್ ಖಾನ್ ಇತರರು ಇದ್ದರು.