ಶಿವಮೊಗ್ಗ.

ಶಿವಮೊಗ್ಗ ಜಿಲ್ಲಾ ದೇಹದಾಢ್ರ್ಯ ಪಟುಗಳ ಸಂಘದ ನೊಂದಣಿಯನ್ನು ನವೀಕರಿಸಲಾಗಿದೆ ಮತ್ತು ಸಂಘದ ಆಶ್ರಯದಲ್ಲಿ ದೇಹದಾಢ್ರ್ಯ ಸ್ಪರ್ಧೆಯನ್ನು ಆಯೋಜಿಸಲಾಗಿದೆ ಎಂದು ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯೋಗೀಶ್ ಹೇಳಿದರು.

ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕರ್ನಾಟಕ ಅಸೋಸಿಯೇಷನ್ ಆಫ್ ಬಾಡಿಬಿಲ್ಡರ್ಸ್‍ನ ಜಿಲ್ಲಾ ಘಟಕವಾಗಿ ನಮ್ಮ ಸಂಘವು ಕೆಲಸ ಮಾಡುತ್ತ ಬಂದಿದೆ. ಹಲವು ಕಾರ್ಯಕ್ರಮಗಳನ್ನು ಆಯೋಜಿಸುತ್ತ ಬಂದಿರುವ ಸಂಘವು ಡಿ.27ರಂದು ತರೀಕೆರೆಯಲ್ಲಿ ರಾಜ್ಯ ಮಟ್ಟದ ದೇಹದಾಢ್ರ್ಯ ಸ್ಪರ್ಧೆಯನ್ನು ಆಯೋಜಿಸಿದೆ ಎಂದರು.

ರಾಜ್ಯದೇಹದಾಢ್ರ್ಯ ಸಂಘ, ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಘಟಕದ ವತಿಯಿಂದ ಡಿ.27ರಂದು ಸಂಜೆ 5ಕ್ಕೆ ತರೀಕೆರೆಯ ಬಯಲು ರಂಗಮಂದಿರದಲ್ಲಿ 55ಕೆ.ಜಿ.ಯಿಂದ 90ಕೆ.ಜಿಯವರೆಗಿನ ರಾಜ್ಯ ಮಟ್ಟದ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಮಿಸ್ಟರ್ ಪವರ್‍ಸ್ಟಾರ್ 2024ರ ಸ್ಪರ್ಧೆಯಲ್ಲಿ ಹಲವು ಬಹುಮಾನಗಳನ್ನು ನೀಡಲಾಗುವುದು ಎಂದರು.

ರಾಜ್ಯಮಟ್ಟದಲ್ಲಿ ವಿಜೇತರಾದವರಿಗೆ 20ಸಾವಿರ, ಮೊದಲ ರನ್ನರ್‍ಗೆ 15ಸಾವಿರ, 2 ನೇ ರನ್ನರ್‍ಗೆ 10 ಸಾವಿರ, ಬೆಸ್ಟ್ ಪಾಸರಿಗೆ 5ಸಾವಿರ ರೂ. ಬಹುಮಾನವಿದ್ದರೆ, ಜಿಲ್ಲಾ ಮಟ್ಟದಲ್ಲಿ ಹಲವು ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿದ್ದು, ಎಲ್ಲಾ ವಿಭಾಗಗಳಲ್ಲಿಯೂ ಮೊದಲ ಸ್ಥಾನ ಪಡೆದವರಿಗೆ 8 ಸಾವಿರ, ಮೊದಲ ರನ್ನರ್‍ಗೆ 5ಸಾವಿರ ರೂ.ಗಳನ್ನು ನೀಡಲಾಗುವುದು. ಒಟ್ಟು ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿವೆ. 5ಸಾವಿರ, 4ಸಾವಿರ, 3ಸಾವಿರ, 1,500, 1ಸಾವಿರ ರೂ.ಗಳನ್ನು ಕ್ರಮವಾಗಿ ನೀಡಲಾಗುವುದು ಎಂದರು.

ಸ್ಪರ್ಧೆಯಲ್ಲಿ ಭಾಗವಹಿಸುವ ರಾಜ್ಯ ಮಟ್ಟದ ಸ್ಪರ್ಧೆಗೆ 300 ರೂ. ಜಿಲ್ಲಾ ಮಟ್ಟದ ಸ್ಪರ್ಧೆಗೆ 200 ರೂ. ನೊಂದಣಿ ಶುಲ್ಕ ನಿಗಧಿಪಡಿಸಲಾಗಿದೆ. ಈ ಸ್ಪರ್ಧೆಯು ಸ್ಥಳೀಯ ಸಾಯಿಫಿಟ್ನೆಸ್ ಜಿಮ್ ಹಾಗೂ ಶಿವಮೊಗ್ಗ ಜಿಲ್ಲಾ ಸಂಘ, ಭಾರತೀಯ ಹಾಗೂ ಕರ್ನಾಟಕ ದೇಹದಾಢ್ರ್ಯ ಸಂಘಗಳ ಆಶ್ರಯದಲ್ಲಿ ನಡೆಯಲಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಸಂಘದ ಜಿಲ್ಲಾಧ್ಯಕ್ಷ ರವಿಕುಮಾರ್, ಉಪಾಧ್ಯಕ್ಷ ಶರವಣ, ಗೌರವಾಧ್ಯಕ್ಷ ಶಿವಬಸಪ್ಪ, ನಿತಿನ್, ಶ್ರೀನಿವಾಸ್ ಮುಂತಾದವರು ಇದ್ದರು

ಹೆಚ್ಚಿನ ವಿವರಕ್ಕೆ 7619338506, 9972369121 ನ್ನು ಸಂಪರ್ಕಿಸಬಹುದಾಗಿದೆ.

Share.
Leave A Reply

Exit mobile version