
ದಾವಣಗೆರೆ : ರಾಜ್ಯದಲ್ಲಿ ಬರ ಪರಿಸ್ಥಿತಿಯ ಪರಿಣಾಮ ರಾಜ್ಯ ಸರ್ಕಾರ ರೈತರಿಗೆ ಕೃಷಿ ಇಲಾಖೆ ವತಿಯಿಂದ
ಸೂಕ್ಷ್ಮ ನೀರಾವರಿ ಯೋಜನೆಯಡಿ ತುಂತುರು ನೀರಾವರಿ ಘಟಕಗಳನ್ನು ರೈತರಿಗೆ ಶೇ 90 ರ ರಿಯಾಯಿತಿ ದರದಲ್ಲಿ ವಿತರಣೆ ಮಾಡಲಾಗುತ್ತಿದೆ.
ಈ ಹಿನ್ನೆಲೆಯಲ್ಲಿ ರೈತರು ಈ ಸೌಲಭ್ಯವನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಸಹಾಯಕ ಕೃಷಿ ನಿರ್ದೇಶಕ ಶ್ರೀಧರ ರ್ಮೂರ್ತಿ ತಿಳಿಸಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ಸೂಕ್ಷ್ಮ ನೀರಾವರಿ ಯೋಜನೆಯಡಿ ತುಂತುರು ನೀರಾವರಿ ಘಟಕಕ್ಕೆ ರೈತರು ರೈತರ ವಂತಿಕೆ ಪಾವತಿಸಬೇಕಿದೆ.ಎರಡು ಇಂಚಿಗೆ 4139 ರೂ. ಎರಡೂವರೆ ಇಂಚಿಗೆ 4667 ರೂಪಾಯಿ ರೈತರ ವಂತಿಕೆಯನ್ನು ಆರ್ಟಿ ಜಿಎಸ್ ಮುಖಾಂತರ ಪಾವತಿಸಬೇಕಿದೆ ಎಂದರು.
ಏನು ದಾಖಲೆಗಳು ಬೇಕು.
ಅರ್ಜಿಯ ಜೊತೆ ದಾಖಲಾತಿಗಳನ್ನು ಸಲ್ಲಿಸಬೇಕು.ಆ ದಾಖಲಾತಿಗಳು ಯಾವುವು ಎಂದರೆ ಒಂದು ಅರ್ಜಿ ಇತ್ತೀಚಿನ ಭಾವಚಿತ್ರ. ಡೆಲಿವರಿ ಚಲನ್,ಪಾಸ್ ಬುಕ್ ಜೆರಾಕ್ಸ್,ಬೆಳೆ ದೃಢೀಕರಣ, ಕೊಳವೆ ಬಾವಿ ಪತ್ರ, ಜಾತಿ ಪ್ರಮಾಣ ಪತ್ರ,ಆಧಾರ್ ಕಾರ್ಡ್,ಪಹಣಿ,ಅಫಿಡೆವಿಟ್ ಇಷ್ಟು ದಾಖಲಾತಿಗಳನ್ನು ಕೂಡಲೇ ಹತ್ತಿರದ ಹೊಬಳಿಯ ರೈತ ಸಂಪರ್ಕ ಕೇಂದ್ರದಲ್ಲಿ ಸಂಪರ್ಕಿಸಿ ಈ ಸೌಲಭ್ಯ ಪಡೆಯಬಹುದು ಎಂದರು.
ಶೇ.90 ರಷ್ಟು ರಿಯಾಯಿತಿ
ಬರದ ಹಿನ್ನೆಲೆಯಲ್ಲಿ ಸರ್ಕಾರ ರೈತರಿಗಾಗಿ ತುಂತುರು ನೀರಾವರಿ ಘಟಕಗಳನ್ನು ಶೇ 90 ರ ರಿಯಾಯಿತಿ ದರದಲ್ಲಿ ವಿತರಣೆ ಮಾಡಲಾಗುತ್ತಿದ್ದು , ರೈತರು ಈ ಸೌಲಭ್ಯ ಪಡೆಯಲು ಕೋರಿದರು.
ಈಗಾಗಲೇ ಒಂದು ಬಾರಿ ಈ ಸೌಲಭ್ಯ ಪಡೆದಿದ್ದರೆ ಅಂತಹ ರೈತರಿಗೆ ಮತ್ತೆ ಈ ಸೌಲಭ್ಯ ಸಿಗುವುದಿಲ್ಲ. ಆದ್ದರಿಂದ ರೈತರು ದಾಖಲಾತಿಗಳನ್ನು ಸಲ್ಲಿಸಿ ಸದುಪಯೋಗ ಪಡಿಸಿಕೊಳ್ಳಲು ಸಹಾಯಕ ಕೃಷಿ ನಿರ್ದೇಶಕರಾದ ಶ್ರೀಧರ ಮೂರ್ತಿ ತಿಳಿಸಿದರು.