ದಾವಣಗೆರೆ; ನಗರದ ಧ.ರಾ.ಮ. ವಿಜ್ಞಾನ ಕಾಲೇಜಿನ ಕನ್ನಡ ವಿಭಾಗದ ವತಿಯಿಂದ “ತಿಂಗಳ – ತಿರುಳು” ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮಕ್ಕೆ  ಪ್ರಾಂಶುಪಾಲರಾದ ಎಂ.ಪಿ ರೂಪಶ್ರೀ ಸಸಿಗೆ ನೀರೆರಯುವುದರ ಮೂಲಕ ಚಾಲನೆ ನೀಡಿದರು.  ಈ ವೇಳೆ  ಬಸವಣ್ಣನವರ ವಚನಗಳ ವಾಚನ ಸ್ಪರ್ಧೆಯನ್ನು ಏರ್ಪಡಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲರಾದ, .ಎಂ.ಪಿ.ರೂಪಶ್ರೀ ಮಾತನಾಡುತ್ತಾ ವಚನಗಳಲ್ಲಿ ಬದುಕಿನ ಸಾರ ಅಡಗಿದೆ. ಶರಣರ ತತ್ವಗಳು ನಮ್ಮ ಜೀವನಕ್ಕೆ ಅತೀ ಅವಶ್ಯಕ ಆಗಿರುತ್ತವೆ ಎಂದು ತಿಳಿ ಹೇಳಿದರು. ಪ್ರಾರಂಭದಲ್ಲಿ ಕನ್ನಡ ವಿಭಾಗದ ಮುಖ್ಯಸ್ಥರಾದ,  ಶಿವಪ್ಪ ಮುಳ್ಳೂರ  ಪ್ರಾಸ್ತಾವಿಕವಾಗಿ ಮಾತನಾಡಿದರು. ಐ.ಕ್ಯು.ಎ.ಸಿ. ಸಂಯೋಜಕರಾದ, ಡಾ.ರೋಹಿತ್.ಎಲ್.ಎಸ್.‌ ಉಪಸ್ಥಿತರಿದ್ದರು. ಹಾಗೂ ಡಾ.ವಸಂತನಾಯ್ಕ್‌.ಟಿ. ಮಾತನಾಡಿ ಶರಣರ ಸಂದೇಶಗಳು ಇಂದಿಗೂ ಪ್ರಸ್ತುತ ಎಂದು ಹೇಳಿದರು. ಕಾರ್ಯಕ್ರಮದ ಸ್ಪರ್ಧೆಯ ನಿರ್ಣಾಯಕರಾಗಿ ಡಾ.ಸೌಮ್ಯ.ಹೆಚ್.ಬಿ.ವಿ. ಹಾಗೂ ಡಾ.ಪ್ರಶಾಂತ್‌ ಕುಮಾರ್.ಪಿ.ಎಸ್.‌  ನಿರ್ವಹಿಸಿದರು. ಸ್ವಾಗತ ಕು.ಗೌರಿ. ಪ್ರಥಮ ಬಿ.ಎಸ್‌ಸಿ., ವಂದನಾರ್ಪಣೆ ಪೂರ್ಣಿಮಾ.ಎಂ.ಎಂ.ದ್ವಿತೀಯ ಬಿ.ಎಸ್ಸಿ., ನಿರೂಪಣೆ ಚಂದನಾ.ತೃತೀಯ ಬಿ.ಎಸ್ಸಿ., ಕಾಲೇಜಿನ ಎಲ್ಲಾ ಬೋಧಕ-ಬೋಧಕೇತರ ಸಿಬ್ಬಂದಿಯವರು ಉಪಸ್ಥಿತರಿದ್ದರು.

Share.
Leave A Reply

Exit mobile version