ದಾವಣಗೆರೆ : ವಿಶ್ವದಲ್ಲಿಯೇ ಯುವ ಭಾರತ ಎಂದೇ ಪ್ರಸಿದ್ಧಿಯಾಗಿರುವ ನಮ್ಮ ದೇಶ ದಲ್ಲಿ 60ರಷ್ಟು ಯುವಕರದ್ದೇ ಸಿಂಹ ಪಾಲು. ಈ ನಮ್ಮ ದೇಶದ ಯುವಕರು ಎಷ್ಟರಮಟ್ಟಿಗೆ ದೇಶ ಕಟ್ಟುವಲ್ಲಿ ಮತ್ತು ತಮ್ಮ ಬದುಕನ್ನು ರೂಪಿಸಿಕೊಳ್ಳುವಲ್ಲಿ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಎಷ್ಟರಮಟ್ಟಿಗೆ ಭಾಗಿಯಾಗಿದ್ದಾರೆ ಎಂಬುದೇ ಅತಿ ದೊಡ್ಡ ಪ್ರಶ್ನೆ?

ಒಂದು ರಾಷ್ಟ್ರ ನಿರ್ಮಾಣದಲ್ಲಿ ಯುವಜನರ ಪಾತ್ರ ಬಹುಮುಖ್ಯವಾಗಿರುತ್ತದೆ. ಕೋಟ್ಯಾಂತರ ಯುವಕರಿಂದಲೇ ಕೂಡಿದ ಯುವ ಭಾರತವು ಅಭಿವೃದ್ಧಿ ಆಗಬೇಕೆಂದರೆ ಅದು ಬಿಸಿರಕ್ತ ಹೊಂದಿದ ಯುವಕರಿಂದಲೇ ಸಾಧ್ಯ. ಬಿಸಿ ನೆಟ್ಟರು ಉಕ್ಕಿ ಹರಿಯುವ ಮುನ್ನ ಕಟ್ಟುವೆವು ನಾವು ಹೊಸ ನಾಡೊಂದನ್ನು ಎನ್ನುವ ಕವಿತೆಯಂತೆ ನಮ್ಮ ಯುವಕರ ಸೇವೆ ದೇಶದ ಅಭಿವೃದ್ಧಿಗೆ ಬಹು ಮುಖ್ಯವಾಗಿದೆ.

ದೇಶದ ಆರ್ಥಿಕ ವ್ಯವಸ್ಥೆಯು ಯುವಕರನ್ನು ಶಿಕ್ಷಣ ಕೃಷಿ ಕೈಗಾರಿಕೆ ಆರಕ್ಷಕ ವೈದ್ಯ ಇಂಜಿನಿಯರ್ ರಾಜಕಾರಣ ಎಂಬ ಎಲ್ಲಾ ಕ್ಷೇತ್ರಗಳಲ್ಲಿ ಸದ್ಬಳಕೆ ಮಾಡಿಕೊಳ್ಳಬೇಕಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಕೋಟ್ಯಾಂತರ ಯುವಕರು ನಿರುದ್ಯೋಗದಿಂದ ಕಂಗಾಲಾಗುತ್ತಿದ್ದಾರೆ. ಲಕ್ಷಾಂತರ ಯುವಕರು ತಮ್ಮ ವಿದ್ಯಾಭಾಸದ ಸಮಯದಲ್ಲಿ ಮುಜು ಮಸ್ತಿ ಮಾಡುತ್ತಾ ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದದೆ ತಮ್ಮ ಬದುಕನ್ನು ಹಲವಾರು ಚಟಗಳಲ್ಲಿ ಭಾಗಿಯಾಗಿ ತಮ್ಮ ಜೀವನವನ್ನು ವ್ಯರ್ಥ ಮಾಡಿಕೊಳ್ಳುತ್ತಿದ್ದಾರೆ.

ಯಾವುದೋ ಧರ್ಮಗಳು ಯಾವುದೋ ರಾಜಕಾರಣಿಗಳು ಯಾವುದೋ ಸಿನಿಮಾ ನಟರು ನಿಮ್ಮ ಭವಿಷ್ಯವನ್ನು ರೂಪಿಸುವುದಿಲ್ಲ ನಿಮಗೆ ನೀವೇ ಸಾರಥಿಯಾಗಿ ಬದುಕನ್ನು ಕಟ್ಟಿಕೊಳ್ಳಬೇಕು ಭಾರತ ದೇಶದ ನೆಲದಲ್ಲಿ ಹುಟ್ಟಿರುವ ನಾವು ಈ ದೇಶದ ಸರ್ವತೋಮುಖ ಬೆಳವಣಿಗೆಗೆ ಏನನ್ನು ಕೊಡುಗೆ ನೀಡುತ್ತಿದ್ದೇವೆ ಎಂಬುದು ಬಹಳಷ್ಟು ಮುಖ್ಯವಾಗುತ್ತದೆ. ತಂದೆ ತಾಯಿಗಳಿಗೆ ಗುರು ಹಿರಿಯರಿಗೆ ಆತ್ಮೀಯ ಬಾಂಧವರಿಗೆ ಗೌರವದಿಂದ ಮತ್ತು ಕರುಣೆಯಿಂದ ಕಾಣಬೇಕು.

ಇತ್ತೀಚಿನ ಯುವಕರಿಗೆ ತಮ್ಮ ವೈಯಕ್ತಿಕ ಭವಿಷ್ಯಕ್ಕಿಂತ ಧರ್ಮಧಾರಿತ ಕೂಗು ಬಣ್ಣದ ಹೆಸರಿನ ಕೋಮುಗಲಭೆ ಕಿಚ್ಚು ಇಂತಹ ವಿಚಾರಗಳಲ್ಲಿ ಆಸಕ್ತಿ ಹೆಚ್ಚಾಗುತ್ತಿದೆ.
ಈಗಿನ ಸ್ವಾರ್ಥ ರಾಜಕೀಯ ಪಕ್ಷಗಳು ಯುವಕರನ್ನು ಕೇವಲ ತಮ್ಮ ಪಕ್ಷಗಳ ಪ್ರಚಾರಕ್ಕೆ ಚುನಾವಣೆಯ ಸಂದರ್ಭಗಳಲ್ಲಿ ಪ್ರಚಾರಕ್ಕೆ ಅನೈತಿಕ ಧರ್ಮಾಧಾರಿತ ಕೂಗು ಘೋಷಣೆಗೆ ಉಪಯೋಗಿಸಿಕೊಳ್ಳುತ್ತಿದ್ದಾರೆ ಹೊರತು ಯುವಕರ ಭವಿಷ್ಯ ರೂಪಿಸುವ ಮತ್ತು ಉದ್ಯೋಗ ಸೃಷ್ಟಿಸುವ ಕೆಲಸಗಳನ್ನು ಮಾಡುತ್ತಿಲ್ಲ.

ಉಪ್ಪು ನಮ್ಮ ಆಹಾರದಲ್ಲಿ ರುಚಿಯ ಪಾತ್ರ ವಹಿಸಿದೆ ಆದ್ದರಿಂದಲೇ ಅದಕ್ಕೆ ನಾವು ತಾಯಿಯಂತೆ ಆತ್ಮ ಬಂಧು ಎಂದು ಹೇಳುತ್ತೇವೆ ಅಂತೇ ಜೀವನದಲ್ಲಿ ಉಪ್ಪಿನ ಪಾತ್ರ ನಮ್ಮ ಯುವಕರದ್ದಾಗಿರುತ್ತದೆ. ” ಯೂತ್ಸ್ ಆರ್ ದಿ ಸಾಲ್ಟ್ ಆಫ್ ನೇಶನ್ “ಎಂದು ಮಹಾತ್ಮ ಗಾಂಧೀಜಿಯವರು ಹೇಳಿದ್ದಾರೆ.
” ಕಣ್ಣುಗಳಲ್ಲಿ ವೈಭವದ ಕನಸು ಮನಸ್ಸಿನಲ್ಲಿ ಬಿರುಗಾಳಿಯ ವೇಗ “ಇರಬೇಕು ಎಂದು ಸ್ವಾಮಿ ವಿವೇಕಾನಂದರು ಹೇಳಿದ್ದಾರೆ. ಹೀಗೆ ಹೃದಯದಲ್ಲಿ ಏಳುತ್ತಿರುವ ಏರಿಳಿತಗಳ ಪರಿವರ್ತನೆಯ ದಾಹ, ಅದಮ್ಯ ಸಾಹಸ , ಸ್ಪಷ್ಟ ಸಂಕಲ್ಪ ಗೈಯುವ ಇಚ್ಛೆ ಇದರ ಹೆಸರೇ ಯುವವಸ್ತೆ ಎಂದು ಹೇಳಬಹುದು.

ಉಳಿದ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಯುವಕರ ಸಂಖ್ಯೆ 70% ರಷ್ಟು ಇದೆ ಆದರೆ ವಿಶ್ವದಲ್ಲಿ ಇವರಷ್ಟ ಎಂದೆ ಹೆಸರುವಾಸಿಯಾಗಿರುವ ಭಾರತದಲ್ಲಿ ಯುವಕರನ್ನು ಹೇಗೆ ಸಬ್ಬಳಿಕೆ ಮಾಡಿಕೊಳ್ಳುತ್ತಿದ್ದಾರೆ ಎನ್ನುವುದೇ ಅತಿ ದೊಡ್ಡ ಪ್ರಶ್ನೆ?
ಅತಿ ಹೆಚ್ಚು ಯುವಕರನ್ನು ಹೊಂದಿದ ದೇಶದಲ್ಲಿ ಪ್ರಮುಖವಾಗಿ ಯುವಕರ ಶಿಕ್ಷಣ ಮತ್ತು ಆರೋಗ್ಯಕ್ಕೆ ಹೆಚ್ಚಿನ ಆದ್ಯತೆ ನೀಡಬೇಕಿದೆ ಆರ್ಥಿಕ ಬೆಳವಣಿಗೆಯಲ್ಲಿ ಯುವಕರ ಪಾತ್ರ ಬಹುಮುಖ್ಯವಾಗಿರುತ್ತದೆ ಧರ್ಮಧಾರಿತ ಕೋಮುಗಲಭೆ ಇಂದ ದೇಶದ ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ. ಯುವಕರಿಗಾಗಿ ಎಲ್ಲಾ ವಲಯಗಳಲ್ಲಿ ಉದ್ಯೋಗ ಸೃಷ್ಟಿಸಬೇಕಿದೆ ‘ಧರ್ಮ ರಕ್ಷಣೆಯನ್ನು ಮಾಡಲು ಮಠಾಧೀಶರು ಸ್ವಾಮೀಜಿಗಳು ಇದ್ದಾರೆ ನೀವು ಮೊದಲು ಓದಿಕೊಳ್ರಪ್ಪ ‘ ಎಂದು ಕಿವಿಮಾತು.

ಭಾರತ ದೇಶದ ಸುಂದರ ಮನೆಯನ್ನು ಯುವಶಕ್ತಿ ಎಂಬ ಯೋಚನೆಯಿಂದ ಕಟ್ಟಬೇಕಿದೆ ಆತ್ಮವಿಶ್ವಾಸದ ನೀರುಣಿಸಿ ಪ್ರೀತಿ ಬಂದ ಸಂಬಂಧಗಳಲ್ಲಿ ಬೆರೆತು ದೇಶ ಕಟ್ಟಬೇಕಿದೆ ಬೆಳವಣಿಗೆಗೆ ಎಲ್ಲ ಸಮುದಾಯ ಮತ್ತು ಎಲ್ಲಾ ಧರ್ಮದ ಯುವಕರ ಶ್ರಮ ಬೇಕಿದೆ ನಮ್ಮದು ಜಾತ್ಯತೀತ ರಾಷ್ಟ್ರ ಇಲ್ಲಿ ಎಲ್ಲರಿಗೂ ಸ್ವಾತಂತ್ರ್ಯವಾಗಿ ಬದುಕುವ ಹಕ್ಕಿದೆ ಈಗಲಾದರೂ ಶೈಕ್ಷಣಿಕ ವೈಜ್ಞಾನಿಕ ಆರ್ಥಿಕವಾಗಿ ದೇಶದ ಪರಿಸ್ಥಿತಿಯನ್ನು ಆಲೋಚಿಸಿ ನಿಮ್ಮ ಭವಿಷ್ಯದ ಕಡೆ ಗಮನಹರಿಸಿ.

ಭಾಷಣಗಳು ಘೋಷಣೆಗಳು ಆಶ್ವಾಸನೆಯಿಂದ ದೇಶದ ಅಭಿವೃದ್ಧಿ ಹೊಂದುವುದಿಲ್ಲ ಬಡ ಕುಟುಂಬದಲ್ಲಿ ಓದಿದ ಕೋಟ್ಯಾಂತರ ಪದವಿದರಿಗೆ ಮತ್ತು ಯುವಕರಿಗೆ ಉದ್ಯೋಗ ದೊರಕಿಸಿಕೊಟ್ಟರೆ ಅದರಿಂದ ದೇಶವು ಬಹುದೊಡ್ಡ ಅಭಿವೃದ್ಧಿ ಆಗಲಿದೆ .ಜೊತೆಗೆ ಯುವಕರ ಯುವಕರು ತಪ್ಪು ದಾರಿಯನ್ನು ಹಿಡಿಯುವುದು ತಪ್ಪುತ್ತದೆ ಯುವಕರು ಸದಾ ಜಾಗರೂಕರಾಗಿ ತಮ್ಮ ವೈಯಕ್ತಿಕ ಬೆಳವಣಿಗೆ ಬಗ್ಗೆ ಯೋಚಿಸಿದರೆ ದೇಶದ ಅಭಿವೃದ್ಧಿ ಹೊಂದುತ್ತದೆ.

-ಎಂ.ಮಲ್ಲೇಶ್ ನಾಯ್ಕ್, ಉಪನ್ಯಾಸಕರು, ದಾವಣಗೆರೆ

Share.
Leave A Reply

Exit mobile version