ಭದ್ರಾವತಿ: ಕಪ್ಪೆ ತಿನ್ನುವ ಬರದಲ್ಲಿ ಪಾರ್ಸೆಲ್ ಪ್ಲಾಸ್ಟಿಕ್ ತಿಂದ ಹಾವನ್ನು ಹವ್ಯಾಸಿ ಉರಗ ರಕ್ಷಕ ಎನ್ ಪ್ರಹ್ಲಾದ್ ರಾವ್ ರಕ್ಷಿಸಿದ್ದಾರೆ.

ಭದ್ರಾವತಿ ಹಳೇನಗರ ಬಸವೇಶ್ವರ ಸರ್ಕಲ್ ನಲ್ಲಿ ಘಟನೆ ನಡೆದಿದೆ. ಖಾಸಗಿ ಟ್ರಾನ್ಸ್ಪೋರ್ಟ್ ಕಚೇರಿ ಲಾರಿಗಳ ನಿಲುಗಡೆ ಪ್ರದೇಶದಲ್ಲಿ ಕೇರೆ ಹಾವು ಪ್ಲಾಸ್ಟಿಕ್ ನುಂಗಿತ್ತು. ಈ ಹಾವು ಕಪ್ಪೆ ಕಾಲಿಗೆ ಸಿಲುಕಿಕೊಂಡಿದ್ದ ಪ್ಲಾಸ್ಟಿಕ್ ನ್ನ ನುಂಗಿರಬಹುದು ಎಂದು ಶಂಕಿಸಲಾಗಿದೆ.
ನಿತ್ರಾಣ ಸ್ಥಿತಿಯಲ್ಲಿ ಬಿದ್ದಿದ್ದ ಹಾವನ್ನ, ಸ್ಥಳೀಯರ ಮಾಹಿತಿಯ ಆಧಾರದ ಮೇರೆಗೆ ಉರಗ ರಕ್ಷಕ ಪ್ರಹ್ಲಾದ್ ರಾವ್ ರಕ್ಷಿಸಿದ್ದಾರೆ. ಬಾಯಿಯ ತುದಿಯಲ್ಲಿ ಕಂಡ ಪ್ಲಾಸ್ಟಿಕ್ ಎಳೆದಾಗ ಮೂರು ಅಡ್ಡಿ ಉದ್ದದ ಪ್ಲಾಸ್ಟಿಕ್ ನ್ನ ಹೊಟ್ಟೆಯಿಂದ ತೆಗೆಯಲಾಗಿದೆ.

Share.
Leave A Reply

Exit mobile version