
ದಾವಣಗೆರೆ : ಇಲ್ಲಿ ಯಾವುದೇ ಕ್ರೀಡಾಂಗಣವಿಲ್ಲ, ಬಸ್ ನಿಲ್ಲೋಸದಕ್ಕೆ ಜಾಗವಿಲ್ಲ, ನಿವಾಸಿಗಳಿಗೆ ನಿದ್ದೆಯಿಲ್ಲ ಇವೆಲ್ಲದರ ನಡುವೆ ಕಾಲೇಜು ನಡೆಯುತ್ತಿರುವುದು ಕಾಂಪ್ಲೆಕ್ಸ್ ನಲ್ಲಿ..ಸದಾ ಆರೋಪ, ಪ್ರತಿಭಟನೆ, ರಾಜಕಾರಣಿಗಳ ಶ್ರೀ ರಕ್ಷೆ ಈ ಕಾಲೇಜಿಗೆ ಇದೆ. ಅಲ್ಲದೇ ದೊಡ್ಡ ಪತ್ರಿಕೆ ಅನ್ನಿಸಿಕೊಂಡಿರುವ ಪತ್ರಿಕೆಯಲ್ಲಿನ ಬ್ಯೂರೋ ಚೀಪ್ ಗೂ ಈ ಕಾಲೇಜಿನ ಮೇಲೆ ಎಲ್ಲೆಲ್ಲಿದ ಪ್ರೀತಿ…ಅಷ್ಟಕ್ಕೂ ಲಕ್ಷ, ಲಕ್ಷ ತೆಗೆದುಕೊಂಡು ವಿದ್ಯಾರ್ಥಿಗಳಿಗೆ ಸೌಲಭ್ಯ ಕೊಡದೇ, ಇರುವ ಕಾಲೇಜು ಯಾವುದು? ಯಾವ ಬ್ಯೂರೋ ಚೀಪ್ ನ ಶ್ರೀ ರಕ್ಷೆ ಈ ಕಾಲೇಜಿಗೆ ಇದೆ ಅದರ ಸಂಪೂರ್ಣ ಡೀಟೆಲ್ಸ್ ನಿಮ್ಮ ಮುಂದೆ…
ಹೌದು…ದಾವಣಗೆರೆ ಹದಡಿ ರಸ್ತೆಯಲ್ಲಿರುವ ಸರ್ ಎಂವಿಕಾಲೇಜ್ ನೇ ಮೂಲ ಸೌಕರ್ಯವಿಲ್ಲದೇ ನಡೆಯುತ್ತಿರುವ ಕಾಲೇಜ್…ವಾಕ ಪತ್ರಿಕೆಯ ಘಟ್ಟ ಪ್ರದೇಶದ ಬ್ಯೂರೋ ಚೀಪ್ ಯೇ ಈ ಕಾಲೇಜ್ ಗೆ ಪ್ರೀಯ ಪತ್ರಕರ್ತ..
ಒಂದು ಪತ್ರಿಕೆಗೆ ತನ್ನದೇ ಆದ ಸಿದ್ದಾಂತ, ತನ್ನತನ, ಮೌಲ್ಯಗಳು ಈ ಹಿಂದೆ ಇರುತ್ತಿತ್ತು..ಜನರು ಕೂಡ ಪತ್ರಿಕೆ ಮೇಲೆ ನಂಬಿಕೆ ಇಟ್ಟಿದ್ದರು..ಆದರೆ ಬರ ಬರುತ್ತಾ ಜನರಿಗೂ ಕೂಡ ಪತ್ರಿಕೆ ಮೇಲೆ ವಿಶ್ವಾಸ ಹೋಗುತ್ತಿದೆ..ಅದಕ್ಕೂ ಕಾರಣವಿದೆ..ಆ ಕಾರಣ ನೀವೇ ಮುಂದೆ ಓದಿ..
ದಾವಣಗೆರೆ ವಾಕ ಪತ್ರಿಕೆಯಲ್ಲಿ ಸುಮಾರು ಹತ್ತು ವರ್ಷಕ್ಕೂ ಹೆಚ್ಚು ಕಾಲ ಠಿಕಾಣಿ ಹೂಡಿರುವ ಘಟ್ಟ ಪ್ರದೇಶದ ಕೆಳಗಿರುವ ಮಿಸ್ಟರ್ ರೊಬ್ಬರು ಸರ್ ಎಂವಿಕಾಲೇಜಿನ ಪ್ರಿಯ ಪತ್ರಕರ್ತ..ಈ ಕಾಲೇಜ್ ವಿರುದ್ಧ ಏನೇ ಪ್ರತಿಭಟನೆ ನಡೆದರೂ, ಪತ್ರಿಕಾಗೋಷ್ಠಿ ನಡೆದರೂ ವಾಕ ಪತ್ರಿಕೆಯಲ್ಲಿ ಸುದ್ದಿ ಬರೋದಿಲ್ಲ. ಬರೋದಕ್ಕೆ ಘಟ್ಟ ಪ್ರದೇಶದ ವ್ಯಕ್ತಿ ಬಿಡೋದು ಇಲ್ಲ..ಆದರೆ ಅಲ್ಲಿ ನಡೆಯುವ ಮನೋರಂಜನಾ ಸುದ್ದಿ, ಪ್ರಚಾರಗಳಿಗೆ ಇಲ್ಲಿನ ಮುಖ್ಯಸ್ಥ ಶ್ರೀಧರ್ ಅಭಿಪ್ರಾಯ ಇರುತ್ತದೆ..ಆ ಕಾಲೇಜಿನ ಬಗ್ಗೆ ಹೊಗಳಿಕೆ ಮಾತುಗಳು ಬರುತ್ತದೆ.. ಅದೇ ದಾವಣಗೆರೆಯಲ್ಲಿನ ಸರಕಾರಿ ಕಾಲೇಜಿನ ಬಗ್ಗೆ ಇದುವರೆಗೂ ಒಂದು ಸುದ್ದಿ ಕೂಡ ಬರೋದಿಲ್ಲ..ಅಲ್ಲಿನ ಸಮಸ್ಯೆಗಳ ಬಗ್ಗೆ ಬಿಂಬೋಸೋದಿಲ್ಲ..ಈ ತಾರತಮ್ಯ ಏಕೆ ಎಂದು ಘಟ್ಟ ಪ್ರದೇಶದ ಬ್ಯೂರೋ ಚೀಪ್ ಗೆ ಓದುಗರು ಪ್ರಶ್ನೆ ಕೇಳುತ್ತಿದ್ದಾರೆ…
ಎಡಿಟರ್ ಗೆ ಈ ಬಗ್ಗೆ ಮಾಹಿತಿ ಇಲ್ವ?
ವಾಕ ಪತ್ರಿಕೆ ಬಗ್ಗೆ ಸರ್ ಎಂವಿ ಕಾಲೇಜಿನ ಬಗ್ಗೆ ಬೆಂಗಳೂರಿನಲ್ಲಿ ಮಾಹಿತಿ ಇಲ್ಲ. ಇದನ್ನೆ ಬಂಡವಾಳವನ್ನಾಗಿಸಿಕೊಂಡ ವಾಕ ಪತ್ರಿಕೆ ಬ್ಯೂರೋ ಚೀಫ್ ಪತ್ರಿಕೆಯಿಂದ ಯಾವುದೇ ಕಾರ್ಯಕ್ರಮವಾದರೂ ಸರ್ ಎಂವಿ ಕಾಲೇಜಿನ ಶ್ರೀಧರ್ ರನ್ನು ಆಹ್ವಾನಿಸುತ್ತಾರೆ..ಅಡ್ಮಿಷನ್ ಗೂ ಅದೇ ಕಾಲೇಜಿನ ಪೋಟೋವನ್ನು ತನ್ನದೇ ಪತ್ರಿಕೆಯೆಂದು ಪ್ರಕಟಿಸುತ್ತಾರೆ..ಯಾರಾದರೂ ಈ ಬಗ್ಗೆ ಚಕಾರ ಎತ್ತಿದರೆ ಮುಂದೆಯಿಂದ ನಗು ನಗುತ್ತಾ ಮಾತನಾಡಿ ಹಿಂದೆಯಿಂದ ತನ್ನದೇ ಆದ ಕೆಲಸ ಮಾಡುತ್ತಾರೆ.
ವಾಕ ಪತ್ರಿಕೆ ಬ್ಯೂರೋ ಚೀಪ್ ಮಕ್ಕಳು ಓದಿದ್ದು ಇದೇ ಕಾಲೇಜಿನಲ್ಲಿ
ದಾವಣಗೆರೆ ವಾಕ ಪತ್ರಿಕೆಯ ಬ್ಯೂರೋ ಚೀಪ್ ಮಕ್ಕಳು ಕೂಡ ಇದೇ ಕಾಲೇಜಿನಲ್ಲಿ ಓದಿದ್ದರಿಂದ ಘಟ್ಟ ಪ್ರದೇಶದ ಈ ವ್ಯಕ್ತಿಗೆ ಸಾಕಷ್ಟು ಪ್ರೀತಿ..ಅಲ್ಲದೇ ಪುಕ್ಸಟೆ ಪ್ರಚಾರ ಮೂಲಕ ತನ್ನ ಋಣ ಭಾರ ತೀರಿಸುತ್ತಿದ್ದಾರೆ.. ಈ ಕಾರಣದಿಂದಲೇ ಈ ಕಾಲೇಜಿನ ವಿರುದ್ಧ ಏನೇ ಆರೋಪ ಬಂದರೂ ವಾಕ ಪತ್ರಿಕೆಯಲ್ಲಿ ಸುದ್ದಿ ಬರೋದಿಲ್ಲ.
ವಾಕ ಪತ್ರಿಕೆ ದಾವಣಗೆರೆ ಸಂಪಾದಕರೇ ನಿಮ್ಮ ಒಂದೇ ಒಂದು ಪತ್ರಿಕೆಯೂ ಈ ಕಾಲೇಜಿಗೆ ಹೋಗೋದಿಲ್ಲ
ದಾವಣಗೆರೆ ವಾಕ ಪತ್ರಿಕೆ ಸಂಪಾದಕರು ಬಹಳ ಪ್ರೀತಿಯಿಂದ ಸರ್ ಎಂವಿ ಕಾಲೇಜಿನ ಬಗ್ಗೆ ಪ್ರಚಾರ ಮಾಡುತ್ತಾರೆ..ಆದರೆ ಒಂದೇ ಒಂದು ಪತ್ರಿಕೆ ಕೂಡ ಈ ಕಾಲೇಜಿಗೆ ಹೋಗೋದಿಲ್ಲ…ಅಲ್ಲದೇ ಈ ಕಾಲೇಜ್ ಆಂಧ್ರಮೂಲದ್ದಾಗಿದ್ದು, ಕನ್ನಡ ಪತ್ರಿಕೆ ಓದೋದಿಲ್ಲ.
ಲಕ್ಷ, ಲಕ್ಷ ರೂ. ನೀಡಿದರೂ ಇಲ್ಲಿ ಇಲ್ಲ ಮೂಲ ಸೌಕರ್ಯ
ಈ ಸರ್ ಎಂವಿ ಕಾಲೇಜಿಗೆ ಪೋಷಕರು ಲಕ್ಷ, ಲಕ್ಷ ರೂ ನೀಡಿ ಸೇರಿಸುತ್ತಿದ್ದಾರೆ. ಆದರೆ ಮೂಲ ಸೌಕರ್ಯದ ಕೊರತೆಯೂ ಇದೆ..ಅಲ್ಲದೇ ವಿದ್ಯಾರ್ಥಿ ನಿಲಯದಲ್ಲಿ ಅಕ್ರಮ ಚಟುವಟಿಕೆಗಳು ಕೂಡ ನಡೆಯುತ್ತದೆ ಎಂಬ ಆರೋಪವಿದೆ..ಈ ಹಿಂದೆ ಇದೇ ಕಾಲೇಜಿನ ವಿದ್ಯಾರ್ಥಿಯೊಬ್ಬರು ಆತ್ಮಹತ್ಯೆಗೆ ಪ್ರಯತ್ನಿಸಿದ್ದರು..ಇಷ್ಟಿದ್ದರೂ ದಾವಣಗೆರೆ ವಾಕ ಪತ್ರಿಕೆ ಸಂಪಾದಕರಿಗೆ ಕಾಲೇಜಿನ ಮೇಲೆ ಸಾಕಷ್ಟು ಫಿದಾ.
ಸ್ಥಳೀಯ ನಿವಾಸಿಗಳಿಗೆ ಕಿರಿಕಿರಿ
ಸ್ಥಳೀಯ ನಿವಾಸಿಗಳಿಗೆ ಕಿರಿಕಿರಿ ಉಂಟಾಗುತ್ತಿರುವ ಹಿನ್ನೆಲೆಯಲ್ಲಿ ಶಿವಕುಮಾರಸ್ವಾಮಿ ಬಡಾವಣೆ ಒಂದನೇ ಹಂತದಲ್ಲಿರುವ ಸರ್.ಎಂ.ವಿ. ಕಾಲೇಜನ್ನು ಸ್ಥಳಾಂತರ ಮಾಡುವಂತೆ ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ನಿರ್ದೇಶಕರಿಗೆ ಪಿಯು ಡಿಡಿ ಮೂಲಕ ಹಿರಿಯ ನಾಗರಿಕರು ಮನವಿ ಸಲ್ಲಿಸಿದ್ದರು.
ಸಣ್ಣಮಕ್ಕಳು, ವಯೋವೃದ್ಧರು, ಮಹಿಳೆಯರು, ವಿದ್ಯಾರ್ಥಿಗಳು ಸರಾಗವಾಗಿ ಓಡಾಡಲು ಆಗುತ್ತಿಲ್ಲ. ಎಲ್ಲಿ ನೋಡಿದರೂ ವಿದ್ಯಾರ್ಥಿಗಳ ಗುಂಪು, ಗಲಾಟೆ, ಶಬ್ದ ಧೂಳಿನಿಂದ ಕೂಡಿದ ವಾತಾವರಣ ಇದೆ. ಕಾಲೇಜು ಎದುರಿಗೆ ಹದಡಿ ಮುಖ್ಯ ರಸ್ತೆಯಿಂದ ಎರಡೂ ಬದಿಗಳಲ್ಲಿ ಬ್ಯಾಂಕ್, ಆಸ್ಪತ್ರೆ, ಮಾರ್ಟ್‌ಗಳಿದ್ದು, ಕಾಲೇಜಿನ ವಿದ್ಯಾರ್ಥಿಗಳು ಮತ್ತು ಪೋಷಕರು ಕಾಲೇಜಿನ ಅಕ್ಕಪಕ್ಕದಲ್ಲಿರುವ ಮನೆಗಳ ಮುಂದೆ, ಖಾಲಿ ಸೈಟುಗಳಲ್ಲಿ, ಓಡಾಡುವ ರಸ್ತೆ ಮುಂದೆ ವಾಹನಗಳನ್ನು ನಿಲ್ಲಿಸಿಕೊಂಡು ಸಂಚಾರಕ್ಕೂ ಅಡ್ಡಿ ಉಂಟು ಮಾಡುತ್ತಿದ್ದಾರೆ. ಇಷ್ಟಲ್ಲದೇ ಗುಟ್ಕಾ ತಿಂದು ಎಲ್ಲೆಂದರಲ್ಲಿ ಉಗಿಯುವುದು, ಸೀಗರೇಟ್ ಸೇದುವುದು, ತಿಂಡಿ ಪದಾರ್ಥಗಳನ್ನು ತಿಂದು ಎಲ್ಲೆಂದರಲ್ಲಿ ಖಾಲಿ ಪಾಕೆಟ್‌ಗಳನ್ನು ಎಸೆಯುತ್ತಿದ್ದಾರೆ.
ಕೂಡಲೇ ಕಾಲೇಜು ಸ್ಥಳಾಂತರ ಮಾಡಿ, ಈ ಭಾಗದ ನಾಗರಿಕರು ಆರೋಗ್ಯ ನೆಮ್ಮದಿಯಿಂದ ಬದುಕಲು ಅವಕಾಶ ನೀಡುವಂತೆ ಹಿರಿಯ ನಾಗರಿಕರಾದ ಕೆ.ಹೆಚ್.ಲೋಕೇಶ್, ಡಿ. ರವೀಂದ್ರ, ದಿನೇಶ್, ರಾಮಚಂದ್ರ ಶೆಟ್ರು, ನೀಲಕಂಠಪ್ಪ, ವಿರೂಪಾ ಕೆ.ಎಸ್. ಸತೀಶ್, ಅಂಕಿತ್ ಮನವಿ ಮಾಡಿದ್ದರು.
ಮಾತಿನಲ್ಲಿ ಮಾತ್ರ ನೈತಿಕತೆ, ಮಾಡೋದೆಲ್ಲ ಅನಾಚಾರ
ದಾವಣಗೆರೆ ವಾಕ ಪತ್ರಿಕೆ ಸಂಪಾದಕರು ಮಾತು ಎತ್ತಿದರೆ ಸಾಕು ನೈತಿಕ ಮೌಲ್ಯದ ಬಗ್ಗೆ ಮಾತನಾಡುತ್ತಾರೆ..ಆದರೆ ಮಾಡೋದೆಲ್ಲ ಅನಾಚಾರ. ಮೇಲೆ ಬಣ್ಣದ ಮಾತುಗಳನ್ನಾಡಿ, ಒಳೊಳಗೆ ಒಪ್ಪಂದ ನಡೆದಿರುತ್ತದೆ..ಎಷ್ಟೇ ಸಾಕ್ಷಿಗಳನ್ನೂ ನೀಡಿದರೂ ಸಹ ಮ್ಯಾನೆಜ್ ಮೆಂಟ್ ಮೌನ ವಹಿಸಿರುವುದು ದುರದೃಷ್ಟಕರ. ಇನ್ನಾದರೂ ದಾವಣಗೆರೆ ವಾಕಪತ್ರಿಕೆ ಬ್ಯೂರೋಚೀಪ್ ಗೆ ಒಂದಿಷ್ಟು ನೈತಿಕ ಮೌಲ್ಯ ಉಳಿಸಿಕೊಳ್ಳಲಿ…