ನಂದೀಶ್ ಭದ್ರಾವತಿ, ದಾವಣಗೆರೆ
ಶಿಮುಲ್ ಚುನಾವಣೆ ಏ.20 ರಂದು ನಡೆಯಲಿದ್ದು,ಶಿಮುಲ್ ಉಪಾಧ್ಯಕ್ಷ ಬಸಪ್ಪ ಮತ್ತೊಮ್ಮೆ ಚುನಾವಣೆಗೆ ಸ್ಪರ್ಧೆ ಮಾಡಲಿದ್ದಾರೆ. ಅಲ್ಲದೇ ಈ ಬಾರಿ ಗೆದ್ದರೇ, ರೈತರಿಗೋಸ್ಕರ ಮತ್ತಷ್ಟು ಶ್ರಮಿಸುವೆ ಎಂದು ಅವರು ಹೇಳಿದ್ದಾರೆ.
ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆ ವ್ಯಾಪ್ತಿಯ ಶಿವಮೊಗ್ಗ ಹಾಲು ಒಕ್ಕೂಟ(ಶಿಮುಲ್)ದ ಐದು ವರ್ಷದ ಆಡಳಿತ ಮಂಡಳಿ ಅವಧಿ ಜನವರಿಗೆ ಕೊನೆಗೊಂಅಡಿದ್ದು, 2024-25ರಿಂದ 2028-29ನೇ ಸಾಲಿನ ನೂತನ ಆಡಳಿತ ಮಂಡಳಿ ಆಯ್ಕೆಗೆ ಚುನಾವಣೆ ದಿನಾಂಕ ಘೋಷಿಸಲಾಗಿದೆ. ಈ ಹಿನ್ನೆಲೆಯಲ್ಲಿ ಬಸಪ್ಪ ಮತ್ತೊಮ್ಮೆ ಅಖಾಡಕ್ಕೆ ಇಳಿದಿದ್ದಾರೆ.
ಈಗಾಗಲೇ ಡಿಸಿಸಿ ಬ್ಯಾಂಕ್ ಹಾಲು ಒಕ್ಕೂಟಕ್ಕೆ ಯಾರ ಬೆಂಬಲವಿಲ್ಲದೇ ಸ್ಫರ್ಧೆ ಮಾಡಿದ್ದ ಬಸಪ್ಪ ಸ್ವತಂತ್ರವಾಗಿ ಅತ್ಯಧಿಕ ಮತಗಳಿಂದ ಜಯಗಳಿಸಿದ್ದರು. ಇವರ ವಿರುದ್ಧ ಸ್ವ ಪಕ್ಷದವರೇ ಪಿತೂರಿ ನಡೆಸಿದರೂ, ತನ್ನ ಪ್ರಾಬಲ್ಯ ತೋರಿದ ಬಸಪ್ಪ ರೈತರ ಅಭಿವೃದ್ದೀಗಾಗಿ ಮತ್ತೆ ಜಯಗಳಿಸಿದರು.
ಸಹಕಾರ ಕ್ಷೇತ್ರವೇ ಜೀವಾಳವೆಂದಿನಿಸಿಕೊಂಡಿರುವ ಬಸಪ್ಪ ರೈತರ ಶ್ರೇಯೋಭಿವೃದ್ಧಿಗಾಗಿ ದುಡಿಯುತ್ತಿದ್ದಾರೆ. ಅಲ್ಲದೇ ಶಿಮುಲ್ ನಲ್ಲಿ ನೀಡುವ ಎಲ್ಲ ಯೋಜನೆಗಳನ್ನು ರೈತರಿಗೆ ತಲುಪಿಸುವಲ್ಲಿ ತಮ್ಮದೇ ಪಾತ್ರವಹಿಸಿಕೊಂಡಿದ್ದಾರೆ.
ಸಂಘಗಳ ಸಂಖ್ಯೆಗೆ ಅನುಗುಣವಾಗಿ ಒಕ್ಕೂಟವನ್ನು ನಾಲ್ಕು ವಿಭಾಗಗಳಾಗಿ ವಿಂಗಡಿಸಲಾಗಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಶಿವಮೊಗ್ಗ(ತೀರ್ಥಹಳ್ಳಿ, ಭದ್ರಾವತಿ, ಶಿವಮೊಗ್ಗ ತಾಲೂಕುಗಳು) ಮತ್ತು ಸಾಗರ(ಸೊರಬ, ಸಾಗರ ಹೊಸನಗರ, ಶಿಕಾರಿಪುರ) ಎಂಬ ಎರಡು ವಿಭಾಗಗಳಿದ್ದರೆ ದಾವಣಗೆರೆ(ಹರಿಹರ, ದಾವಣಗೆರೆ, ಹೊನ್ನಾಳಿ, ನ್ಯಾಮತಿ, ಚನ್ನಗಿರಿ, ಜಗಳೂರು) ಮತ್ತು ಚಿತ್ರದುರ್ಗ(ಹೊಳಲ್ಕೆರೆ, ಚಿತ್ರದುರ್ಗ, ಹೊಸದುರ್ಗ, ಹಿರಿಯೂರು, ಚಳ್ಳಕೆರೆ, ಮೊಳಕಾಲ್ಮೂರು) ಪ್ರತ್ಯೇಕ ಎರಡು ವಿಭಾಗಗಳಾಗಿವೆ. 14 ನಿರ್ದೇಶಕ ಬಲದ ಒಕ್ಕೂಟದಲ್ಲಿಶಿವಮೊಗ್ಗ ಮತ್ತು ಸಾಗರ ವಿಭಾಗದಿಂದ ತಲಾ ಮೂವರು, ದಾವಣಗೆರೆ ಮತ್ತು ಚಿತ್ರದುರ್ಗ ವಿಭಾಗಗಳಿಂದ ತಲಾ ನಾಲ್ವರು ನಿರ್ದೇಶಕರನ್ನು ಆಯ್ಕೆ ಮಾಡಲಾಗುತ್ತಿದ್ದು, ಬಸಪ್ಪ ಪ್ರಬಲ ಆಕಾಂಕ್ಷಿಗಳಾಗಿದ್ದಾರೆ.
ಪ್ರಚಾರ ಶುರುಮಾಡಿದ ಬಸಪ್ಪ
ಈಗಾಗಲೇ ಡಿಸಿಸಿ ಬ್ಯಾಂಕ್ ನಿರ್ದೇಶಕರಾಗಿ ಆಯ್ಕೆಯಾಗಿರುವ ಬಸಪ್ಪ ಈಗ ಶಿಮುಲ್ ಗೆ ನಿರ್ದೇಶಕರಾಗಿ ಆಯ್ಕೆಯಾಗಲು ರೈತರ ಬಳಿ ಹೋಗುತ್ತಿದ್ದಾರೆ. ಅಲ್ಲದೇ ಈ ಹಿಂದೆ ಮಾಡಿರುವ ಕೆಲಸಗಳು ಅವರಿಗೆ ಶ್ರೀ ರಕ್ಷೆಯಾಗಿದೆ. ಇನ್ನು ರೈತರೊಂದಿಗೆ ನೇರ ಸಂವಾದ ನಡೆಸುತ್ತಿದ್ದಾರೆ. ಅಲ್ಲದೇ ರೈತರಿಗೆ ಬೇಕಾಗುವ ಅಗತ್ಯತೆಯನ್ನು ಪೂರೈಸಲು ಹಗಲು-ರಾತ್ರಿ ಶ್ರಮಿಸುತ್ತಿದ್ದಾರೆ. ಅಲ್ಲದೇ ಮುಂದಿನ ದಿನಗಳಲ್ಲಿ ಇನ್ನಷ್ಟು ರೈತರಿಗಾಗಿ ದುಡಿಯುತ್ತೇನೆ ಎಂಬ ಆಶ್ವಾಸನೆ ನೀಡುತ್ತಿದ್ದಾರೆ.
70,000 ಹಸುಗಳಿಗೆ ವಿಮೆ
70,000 ಹಸುಗಳಿಗೆ ವಿಮೆ ಮಾಡಿಸುವ ಗುರಿ ಹೊಂದಲಾಗಿದೆ. ಒಕ್ಕೂಟದಿಂದ ನೀಡಲಾಗುವ ಹಾಲಿನ ದರದಲ್ಲಿ ಪ್ರತಿ ಲೀಟರ್ಗೆ ರೂ 10 ಪೈಸೆಯನ್ನು ಕಲ್ಯಾಣ ಟ್ರಸ್ಟ್ಗೆ ಭರಿಸಲಾಗುತ್ತದೆ. ಇದು ವರ್ಷಕ್ಕೆ ರೂ. 20 ಕೋಟಿಯಿಂದ ರೂ. 22 ಕೋಟಿ ಆಗುತ್ತದೆ. 18ರಿಂದ 59 ವಯಸ್ಸಿನ ಶೇರುದಾರರು ಮರಣ ಹೊಂದಿದರೆ ಒಕ್ಕೂಟದಿಂದ ರೂ. 1 ಲಕ್ಷ, 61 ವರ್ಷ ಮೇಲ್ಪಟ್ಟವರಿಗೆ ರೂ. 40,000 ವಿಮೆ ಪರಿಹಾರ ಕೊಡಲಾಗುತ್ತದೆ’ ಅದನ್ನು ನಾನು ತಪ್ಪದೇ ಮಾಡಿಸುವೆ ಎಂದು ಶಿವಮೊಗ್ಗ ಸಹಕಾರಿ ಹಾಲು ಒಕ್ಕೂಟದ ಉಪಾಧ್ಯಕ್ಷ ಎಚ್.ಕೆ. ಬಸಪ್ಪ ಹೇಳಿದ್ದಾರೆ.
ಸಂಘಗಳಿಗೆ ಕಾರ್ಯಾಗಾರ
ಹಾಲಿಗೆ ಸಂಬಂಧ ಪಟ್ಟಂತೆ ಹೊಸ ಹೊಸ ಅವಿಷ್ಕಾರಗಳು ಮತ್ತು ದಿನಕ್ಕೊಂದು ಕಾನೂನು ತಿದ್ದುಪಡಿ ಬರುತ್ತಿದೆ. ಆದ್ದರಿಂದ ಹಾಲು ಉತ್ಪಾದಕ ಸಂಘದ ಅಧ್ಯಕ್ಷರು, ನಿರ್ದೇಶಕರು, ಕಾರ್ಯದರ್ಶಿಗಳು ಹೊಸ ಮಾರ್ಗಸೂಚಿಗಳು ಮತ್ತು ನೀತಿ ನಿಯಮಗಳನ್ನು ತಿಳಿದುಕೊಂಡು ಸಂಘದ ಏಳಿಗೆಗೆ ಶ್ರಮಿಸಲು ಕಾರ್ಯಾಗಾರ ಹಮ್ಮಿಕೊಂಡು ಸಂಘದ ಅಭಿವೃದ್ಧೀಗೆ ಶ್ರಮಿಸುತ್ತೇನೆ ಎಂದು ಬಸಪ್ಪ ಹೇಳುತ್ತಾರೆ.
ಆರ್ಥಿಕತೆ ಹೆಚ್ಚಿಸಿಕೊಳ್ಳಲು ಸಹಾಯ
ರೈತರು ಹೆಚ್ಚೆಚ್ಚು ಹಾಲು ಉತ್ಪಾದಿಸಿ ತಮ್ಮ ಆರ್ಥಿಕತೆಯನ್ನು ಹೆಚ್ಚಿಸಿಕೊಳ್ಳಲು ಸಬ್ಸಿಡಿ ಕೊಡಿಸಲು ಪ್ರಯತ್ನ ಮಾಡುತ್ತೇನೆ. ಹೈನುಗಾರಿಕೆಯು ಪ್ರತಿಯೊಬ್ಬರ ರೈತನ ಅವಿಭಾಜ್ಯ ಅಂಗವಾಗಿದ್ದು, ಹೆಚ್ಚು ಜಾನುವಾರುಗಳನ್ನು ಸಾಕುವ ಮೂಲಕ ಹಾಲನ್ನು ಹೆಚ್ಚು ಉತ್ಪಾದಿಸಿ ಆರ್ಥಿಕತೆ ಹೆಚ್ಚಿಸಿಕೊಳ್ಳಲು ಸಹಾಯ ಮಾಡುತ್ತೇನೆ. ಹನಿ-ಹನಿ ಸೇರಿದರೆ ಹಳ್ಳ ಎಂಬ ಗಾದೆ ಮಾತಿನಂತೆ ಪ್ರತಿಯೊಬ್ಬರು ಕೈ ಜೋಡಿಸಿದರೆ ಸಹಕಾರ ಕ್ಷೇತ್ರ ಮುಂದುವರಿಯಲಿದೆ. ಆದ್ದರಿಂದ ರೈತರು ಹೆಚ್ಚು ಜಾನುವಾರುಗಳನ್ನು ಸಾಕಿ ಮುಂದಿನ ದಿನಗಳಲ್ಲಿ ಹೆಚ್ಚು ಹಾಲು ಉತ್ಪಾದಿಸಿಸರ ಹಾಲು ಉತ್ಪಾದಕರ ಸಂಘದ ಕೈ ಬಲಪಡಿಸಬಹುದು, ಅದಕ್ಕಾಗಿ ನಾನು ಶ್ರಮಿಸಲಿದ್ದು ನನ್ನನ್ನು ಗೆಲ್ಲಿಸಿ ಎಂದು ಬಸಪ್ಪ ಹೇಳುತ್ತಾರೆ.
ರೈತರಿಗೆ ಏನು ಸಹಾಯ ಮಾಡುತ್ತೇನೆಂದ ಬಸಪ್ಪ
ಹಾಲಿನ ಸೊಸೈಟಿಯಲ್ಲಿ ಸದಸ್ಯತ್ವ ಹೊಂದಿದರೆ ಸರಕಾರದಿಂದ ವಿಮೆ ನೀಡಲಾಗುವುದು. ಅಲ್ಲದೇ ಶಿಮುಲ್ನಿಂದ ಹಸುಗಳಿಗೂ ವಿಮೆ ಮಾಡಿಸುತ್ತೇನೆ. ಅಲ್ಲದೇ ಹಸುಗಳ ಲಾಲನೆ ಪಾಲನೆ ಮಾಡಲು ವೈದ್ಯರನ್ನು ನೇಮಿಸಲಾಗುವುದು. ಹಸುಗಳಿಗೆ ಬೇಕಾಗಿರುವ ಪುಡ್ನ್ನು ಸಬ್ಸಿಡಿ ದರದಲ್ಲಿ ನೀಡಲಾಗುವುದು ಎಂದು ಬಸಪ್ಪ ಹೇಳುತ್ತಾರೆ.
ಹೈನುಗಾರಿಕೆ ಜನರ ಕಸಬು
ಪ್ರಪಂಚದಲ್ಲೇ ಹಾಲು ಉದ್ದಿಮೆ ಪ್ರಸಿದ್ದಿಯಾಗಿದ್ದು, ಪರಿಣಾಮ ಹೈನುಗಾರಿಕೆಯು ಜನರ ಪ್ರಮುಖ ಕಸುಬಾಗಿ ಸ್ಥಾನ ಪಡೆದಿದೆ. ಕೃಷಿಯೊಂದಿಗೆ ಉಪಕಸುಬಾಗಿ ಹೈನುಗಾರಿಕೆ, ಕೋಳಿ/ಕುರಿ ಸಾಕಣೆಯಂತಹ ಉಪ ಕಸುಬುಗಳನ್ನು ರೂಢಿಸಿಕೊಳ್ಳಲು ರೈತರಿಗೆ ಕೈಲಾದಷ್ಟು ಆರ್ಥಿಕ ಸಹಾಯ ಮಾಡುವೆ ಎಂದು ಬಸಪ್ಪ ಹೇಳುತ್ತಾರೆ. ಒಟ್ಟಾರೆ ಬಸಪ್ಪ ಈ ಬಾರಿ ಮತ್ತೊಮ್ಮೆ ಸ್ಪರ್ಧೆ ಬಯಸಿದ್ದು,ಮುಂದೆ ಏನಾಗುತ್ತದೆಯೆಂದು ಕಾದು ನೋಡಬೇಕು.