ಶಿವಮೊಗ್ಗ: ಸ್ವಹಿತ ಮೀರಿದ ಸೇವೆಯಿಂದ ವಿಶ್ವಶಾಂತಿ ಸಾಧ್ಯ ಎಂಬ ಧ್ಯೇಯವಾಕ್ಯದಿಂದ ರೋಟರಿ ಸಂಸ್ಥೆಯು ಆರಂಭಗೊಂಡು ನೂರು ವರ್ಷಗಳಿಗೂ ಮೀರಿ ಸೇವಾ ಕಾರ್ಯದಲ್ಲಿ ನಿರತವಾಗಿದೆ ಎಂದು ರೋಟರಿ ಸಹಾಯಕ ಮಾಜಿ ಗವರ್ನರ್ ಜಿ.ವಿಜಯಕುಮಾರ್ ಹೇಳಿದರು.

ರೋಟರಿ ಜ್ಯುಬಿಲಿ ಕ್ಲಬ್ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಉಳ್ಳವರು ಕೊಡುಗೈ ದಾನಿಗಳಾಗಿ ಸಮಾಜ ಕಟ್ಟಬೇಕು. ಮಾಡಿದ ಸೇವೆ ಅಜರಾಮರವಾಗಿ ಉಳಿಯುತ್ತದೆ ಎಂದು ತಿಳಿಸಿದರು.

ಜನಿಸಿದಾಗ ಯಾರು ಶ್ರೀಮಂತರಲ್ಲ, ಮಾಡುವ ಸತ್ಕಾರ್ಯಗಳು ಅವರನ್ನು ಗುರುತಿಸಿ ಸಮಾಜ ಬೆಳೆಸುತ್ತದೆ. ಸಮುದಾಯ ಸೇವೆಗಳಲ್ಲಿ ಪ್ರಪಂಚದಲ್ಲೇ ರೋಟರಿ ಸಂಸ್ಥೆಯು ಪ್ರಥಮ ಸ್ಥಾನದಲ್ಲಿ ಇದೆ. ಪಲ್ಸ್ ಪೊಲಿಯೋ ಹಾಗೂ ಕರೋನ ಸಂದರ್ಭದಲ್ಲಿ ರೋಟರಿಯ ಸೇವೆ ಸದಾ ಅವಿಸ್ಮರಣೀಯ ಎಂದರು.

ಇತ್ತೀಚಿನ ದಿನಗಳಲ್ಲಿ ಆರೋಗ್ಯ ಹಾಗೂ ವಿದ್ಯಾಭ್ಯಾಸಕ್ಕೆ ಹೆಚ್ಚು ಹೊತ್ತನ್ನು ನೀಡುವುದರ ಮುಖಾಂತರ ಸೇವೆಯನ್ನು ಸಲ್ಲಿಸುತ್ತಿದೆ. ರೋಟರಿ ಸಮಸ್ಯೆಗಳ ಸೇವೆ ಇನ್ನಷ್ಟು ಹೆಚ್ಚು ಹೆಚ್ಚು ಪ್ರಸಾರವಾಗಲು ಹೆಚ್ಚಿನ ಸದಸ್ಯರು ರೋಟರಿಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಅಭಿಪ್ರಾಯಪಟ್ಟರು.

ರೇಣುಕಾರಾಧ್ಯ ಅಧ್ಯಕ್ಷತೆ ವಹಿಸಿ ಮಾತನಾಡಿ, ನಗರದ ಹಲವಾರು ಸಂಘ ಸಂಸ್ಥೆಗಳಲ್ಲಿ ತೊಡಗಿಸಿಕೊಂಡಿರುವ ವಿಜಯಕುಮಾರ್ ಅನೇಕರಿಗೆ ಮಾದರಿಯಾಗಿದ್ದಾರೆ. ಇವರಿಂದ ಉತ್ತೇಜನಗೊಂಡು, ರೋಟರಿ ಸದಸ್ಯರಾಗಿ ಉತ್ತಮ ಪ್ರಜೆಗಳಾಗಲು ಮಾದರಿಯಾಗಿ ದ್ದಾರೆ ಎಂದರು.

ವಾಗೇಶ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಲಕ್ಷ್ಮಿನಾರಾಯಣ ಸ್ವಾಗತಿಸಿ, ಕಾರ್ಯದರ್ಶಿ ರೂಪಾ ಪುಣ್ಯಕೋಟಿ ವಂದಿಸಿದರು. ಭಾರದ್ವಾಜ್, ನಾಗರಾಜ್ ಹಾಗೂ ಸದಸ್ಯರು ಭಾಗವಹಿಸಿದ್ದರು.

Share.
Leave A Reply

Exit mobile version