ಶಿವಮೊಗ್ಗ : ನಾಯಿ ಅಡ್ಡ ಬಂದ ಕಾರಣ ರಕ್ಷಿಸಲು ಹೋಗಿ ಕಾರು ಪಲ್ಟಿಯಾಗಿದ್ದು, ಚಾಲಕ ಮೃತಪಟ್ಟಿದ್ದಾರೆ. ಈ ಘಟನೆ ಶಿವಮೊಗ್ಗ ಹೊರವಲಯದ ಮಂಡಗದ್ದೆ ಬಳಿ ನಡೆದಿದೆ. ಕಾರು ಪಲ್ಟಿ ಪರಿಣಾಮ ಕಾರಿನಲ್ಲಿದ್ದ ನಾಲ್ಕು ಜನರು ಗಾಯಗೊಂಡಿದ್ದಾರೆ.
ಗಾಯಾಳುಗಳು ಗಾಂಧಿಬಜಾರ್ನವರಾಗಿದ್ದು, ಗಾಂಧಿಬಜಾರ್ ನಿವಾಸಿ ಕೋಟೆ ವಾರ್ಡ್ನ ಪಾಲಿಕೆ ಸದಸ್ಯ ಪ್ರಭಾಕರ್ (ಪ್ರಭು) ಪುತ್ರ ಅಂಕಿತ್ ರಿಗೂ ಗಾಯವಾಗಿದೆ. ಇವರೆಲ್ಲ ಮಂಡಗದ್ದೆಗೆ ಭಾನುವಾರದ ಜಾಲಿ ರೈಡ್ಗೆ ಮುಂದಾಗಿದ್ದ ಯುವಕರು ಎರಡು ಕಾರಿನಲ್ಲಿ ತೆರಳಿದ್ದಾರೆ. ಮಂಡಗದ್ದೆಯಲ್ಲಿ ಊಟ ಮುಗಿಸಿ ವಾಪಾಸ್ ಶಿವಮೊಗ್ಗಕ್ಕೆ ಬರುವಾಗ ಕಾರಿಗೆ ನಾಯಿಯೊಂದು ಅಡ್ಡ ಬಂದಿದೆ.ನಾಯಿಯನ್ನ ತಪ್ಪಿಸಲು ಹೋಗಿ ಕಾರು ಪಲ್ಟಿ ಹೊಡೆದಿದೆ.
ಕಾರುಪಲ್ಟಿ ಹೊಡೆದಪರಿಣಾಮ ಕಾರು ಚಲಾಯಿಸುತ್ತಿದ್ದ ಪ್ರಜ್ವಲ್ ವಾಲ್ಮಿಖಿ(೨೩) ಸಾವುಕಂಡಿದ್ದಾರೆ. ಹಿಂದಿನಿAದ ಬರುತ್ತಿದ್ದ ಕಾರಿನವರು ಅಪಘಾತಕ್ಕೊಳಗಾದವರನ್ನ ಕರೆತಂದು ಆಸ್ಪತ್ರೆಗೆ ಸೇರಿಸಿದ್ದಾರೆ. ತುಂಗಾ ನಗರ ಠಾಣೆಯಲ್ಲಿ ಪ್ರಕರಣ. ಐವರಲ್ಲಿ ನಾಲ್ಕು ಜನ ಗಾಂಧಿ ಬಜಾರ್ನ ಯುವಕರಾಗಿದ್ದು ಓರ್ವ ವಿದ್ಯಾನಗರದ ಯುವಕರಾಗಿದ್ದಾರೆ.
—