ನಂದೀಶ್ ಭದ್ರಾವತಿ, ದಾವಣಗೆರೆ
ದೇವನಗರಿ ದಾವಣಗೆರೆಯಲ್ಲಿ 106 ವರ್ಷಗಳ ಬಳಿಕ ವೀರಶೈವ –ಲಿಂಗಾಯತ ಮಹಾ ಅಧಿವೇಶನ ನಡೆಯುತ್ತಿದೆ. ಈ ಹಿಂದೆ 1917ರಲ್ಲಿ ಕೆ.ಪಿ.ಪುಟ್ಟಣ ಚೆಟ್ಟಿ ಅಧ್ಯಕ್ಷತೆಯಲ್ಲಿ ನಡೆದಿತ್ತು. 1904ರಲ್ಲಿ ಶಿರಸಂಗಿ ಲಿಂಗರಾಜ ಅವರ ಅಧ್ಯಕ್ಷತೆಯಲ್ಲಿ ಧಾರವಾಡದಲ್ಲಿ ಮೊದಲ ಅಧಿವೇಶನ ನಡೆದಿತ್ತು. ಈಗ ಶಾಮನೂರು ಶಿವಶಂಕರಪ್ಪ ಅಧ್ಯಕ್ಷತೆಯಲ್ಲಿ ನಡೆಯುತ್ತಿದೆ.
ಸದ್ಯ ದಾವಣಗೆರೆಗೆ ಎರಡೂ ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿ ಜನರು ಬರುತ್ತಿದ್ದು, ದೇವನಗರಿಯಲ್ಲಿ ಲಿಂಗಾಯಿತರು ಶಕ್ತಿ ಪ್ರದರ್ಶನ ಮಾಡುವರು. ಇದು ರಾಜಕೀಯವಲಯದಲ್ಲಿ ಕೋಲಾಹಲ ಉಂಟು ಮಾಡಿದೆ. ಅಲ್ಲದೇ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ತಮ್ಮ ಬಲ ಪ್ರದರ್ಶನ ತೋರಲಿದ್ದು, ಸಿದ್ದರಾಮಯ್ಯ ಸರಕಾರಕ್ಕೆ ಠಕ್ಕರ್ ಕೊಡಲಿದ್ದಾರೆ.
ಇದೇ ನಾಡಿನಲ್ಲಿ ಸಿದ್ದರಾಮೋತ್ಸವ ನಡೆದಿದ್ದು, ಕುರುಬ ಸಮಾಜ ಬಲಪ್ರದರ್ಶನ ತೋರಿತ್ತು. ಬಳಿಕ ಸರಕಾರ ರಚನೆಯಾಗಿತ್ತು. ಈಗ ಲಿಂಗಾಯಿತರು ಶಕ್ತಿ ಪ್ರದರ್ಶನ ತೋರುತ್ತಿದ್ದು, ರಾಜಕೀಯ ಪಡಸಾಲೆಯಲ್ಲಿ ಚರ್ಚೆಗಳು ಶುರುವಾಗಿದೆ.
ದಾವಣಗೆರೆ ಅದೃಷ್ಟದ ಊರಾಗಿದ್ದು, ಯಾವುದೇ ರಾಜಕೀಯ ಆಟಗಳು ಮೊದಲು ಇಲ್ಲೇ ಶುರುವಾಗುತ್ತವೆ. ಪ್ರಧಾನಿ ನರೇಂದ್ರ ಮೋದಿ ಇಲ್ಲಿ ಬಂದ ನಂತರವೇ ಪ್ರಧಾನಿಯಾಗಿದ್ದು, ಇನ್ನು ಪಕ್ಕದ ಚಿತ್ರದುರ್ಗದಲ್ಲಿ ಅಹಿಂದ ಸಮಾವೇಶ ಮಾಡಲು ಸಜ್ಜಾಗಿದ್ದು, ದಾವಣಗೆರೆ ಸಮಾವೇಶವನ್ನು ನೋಡುತ್ತಿದ್ದಾರೆ..
ಇನ್ನು ಪ್ರಮುಖ ರಾಜಕಾರಣಿಗಳು ದಾವಣಗೆರೆಗೆ ಬಂದಿದ್ದು, ಶ್ರೀಗಳ ಪೋಟೋಗಳಿಗಿಂತ ರಾಜಕೀಯ ನಾಯಕರ ಫ್ಲೇಕ್ಸ್ ಗಳು ರಾರಾಜಿಸುತ್ತಿದೆ. ಒಟ್ಟಾರೆ ದೇವನಗರಿಯಲ್ಲಿ ಲಿಂಗಾಯಿತರ ಶಕ್ತಿ ಪ್ರದರ್ಶನ ನಡೆಯಲಿದ್ದು, ಎಲ್ಲರ ಚಿತ್ತ ದೇವನಗರಿಯತ್ತ ಇದೆ