ಬೆಂಗಳೂರು.
ಬೆಂಗಳೂರು ನಗರದ ದ್ವಾರಕನಾಥ ಭವನದಲ್ಲಿ ಸಾರ್ಥಕ 75 ವರ್ಷ ಪೂರೈಸಿದ ಬ್ರಾಹ್ಮಣ ಸಮಾಜ, ರಾಜಕೀಯ ಮುಖಂಡ ಲಕ್ಷ್ಮೀಕಾಂತ್ ಅಭಿನಂದನಾ ಸಮಾರಂಭವನ್ನು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಅಶೋಕ ಹಾರನಹಳ್ಳಿ ಉದ್ಘಾಟಿಸಿದರು.
—————————-
ಬ್ರಾಹ್ಮಣರು ಸಂಘಟನೆಗೊಳ್ಳಬೇಕಾಗಿದ್ದು, ನಮಗೆ ನಾವೇ ಸಹಾಯ ಮಾಡಿಕೊಳ್ಳಬೇಕಿದೆ. ಅದ್ದರಿಂದ ನಮ್ಮಲ್ಲಿಯೇ
100ಕೋಟಿ ಸಂಗ್ರಹ ಮಾಡಿ ಬ್ರಾಹ್ಮಣರು ನಡೆಸುವ ಕೈಗಾರಿಕೆಗಳಿಗೆ ಸಹಾಯ, ಸಾಲ ನೀಡಬೇಕೆಂಬ ಉದ್ದೇಶವಿದೆ. ಇದರಿಂದ ಬಂದ ಶೇ.10ರಷ್ಟು ಲಾಭವನ್ನು ಸಂಘಟನೆಗೆ ಬಳಸಿಕೊಳ್ಳಬೇಕೆಂಬ ಚಿಂತನೆ ನಡೆದಿದೆ ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಅಶೋಕ ಹಾರನಹಳ್ಳಿ ಹೇಳಿದರು.
ನಗರದ ದ್ವಾರಕನಾಥ ಭವನದಲ್ಲಿ ಸಾರ್ಥಕ 75 ವರ್ಷ ಪೂರೈಸಿದ ಬ್ರಾಹ್ಮಣ ಸಮಾಜ, ರಾಜಕೀಯ ಮುಖಂಡ ಲಕ್ಷಿ÷್ಮಕಾಂತ್ ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಕಾಲ ಕಳೆದಂತೆ ಚಿಂತನೆ, ಸಂಘಟನೆಗಳು ಕೂಡ ಬದಲಾವಣೆಯಾಗಬೇಕಿದ್ದು, ಸಂಘಟನೆ ಹಿತದೃಷ್ಟಿಯಿಂದ ಹಲವರು ನಾನಾ ಸಲಹೆ ನೀಡಿದ್ದಾರೆ.
ಅದರಲ್ಲಿ ನವೋದ್ಯಮಿಗಳಿಗೆ ಆರ್ಥಿಕ ಸಹಾಯ ಮಾಡಲು ಸಂಘಟನೆ ಹಿರಿಯ ಉದ್ಯಮಿಗಳು ಸಹಾಯ ಮಾಡಬೇಕಿದೆ.ಇದಾದ ಬಳಿಕ ಸಮಾಜದವರು ಕೈಗೊಂಡ ಉದ್ಯಮಿದಲ್ಲಿ ಲಾಭ ಬಂದ ವೇಳೆ ಒಂದಿಷ್ಟು ಹಣವನ್ನು ಸಮಾಜಕ್ಕೆ ಇಟ್ಟರೆ ಸಮಾಜವು ಬೆಳೆಯುತ್ತದೆ.
ಬ್ರಾಹ್ಮಣರು ನಡೆಸುವ ಕೈಗಾರಿಕೆಗಳಿಗೆ ಸಹಾಯ, ಸಾಲ ನೀಡುವಂತೆ ಕ್ರಮ ಮತ್ತು ಸಂಘವನ್ನು ಸಮರ್ಥ ಸಂಘಟನೆ ಮಾಡಲು ಈ ಯೋಜನೆ ರೂಪಿಸಲಾಗಿದೆ ಎಂದು ಹೇಳಿದರು.
ಮನುಷ್ಯ ಪ್ರತಿವರ್ಷ ಒಂದೊAದು ಮೈಲುಗಲ್ಲು ಸಾಧಿಸುತ್ತಾನೆ. ಬ್ರಾಹ್ಮಣ ಸಂಘದಲ್ಲಿ ಹಲವಾರು ಸಮಸ್ಯೆಗಳು ಇತ್ತು. ಅದನ್ನ ಪರಿಹರಿಸುತ್ತ ಮುಂದೆ ಸಾಗುತ್ತಿದ್ದೇವೆ. ಈ ಹಿನ್ನೆಲೆಯಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಸಮುದಾಯ ಸಂಘಟನೆ ಮತ್ತು ಎಲ್ಲರು ಒಂದೇ ಧ್ವನಿಯಲ್ಲಿ ಮಾತನಾಡಲು ಸಂಘಟಿಸಲಾಗುತ್ತಿದೆ. ಅದಕ್ಕಾಗಿ ಜನವರಿ 2025ರಲ್ಲಿ ಬ್ರಾಹ್ಮಣ ಸಮುದಾಯದ ಬೃಹತ್ ಸಮಾವೇಶವನ್ನು ಅರಮನೆ ಮೈದಾನ ತ್ರಿಪುರವಾಸಿನಿ ಹಮ್ಮಿಕೊಳ್ಳಲಾಗಿದೆ ಎಂದು ಅಧ್ಯಕ್ಷ ಅಶೋಕ ಹಾರನಹಳ್ಳಿ ಅಭಿಪ್ರಾಯಪಟ್ಟರು.
ಸಂಘಟನೆಯಲ್ಲಿ ಕೆಲಸ ಮಾಡುವುದು ಕಷ್ಟ, ಎಲ್ಲರನ್ನು ಸಂಘಟಿಸಿ ಮುಂದೆ ಸಾಗಲು ದೈವಕೃಪೆ ಇರಬೇಕು. ಈ ಅಧ್ಯಕ್ಷಗಿರಿ ತಾನಾಗಿಯೇ ಒಲಿದು ಬಂದಿದೆ. ಅದರಲ್ಲಿ ಸಮಾಧಾನವಾಗಿ ಇರಬೇಕು, ಬ್ರಾಹ್ಮಣರು ಎಂದು ಯಾವುದಕ್ಕೆ ಒತ್ತಾಯಿಸುವುದಿಲ್ಲ. ಅಲ್ಲದೇ ಬ್ರಾಹ್ಮಣರ ಉಪ ಪಂಗಡಗಳನ್ನು ಸಂಘಟಿಸಲಾಗುತ್ತಿದ್ದು, ಅಂತರಾಷ್ಟಿçÃಯ ಕನ್ನಡ ಬ್ರಾಹ್ಮಣರನ್ನು ಅಮೇರಿಕಾ ಮತ್ತು ಯುನೈಟೆಡ್ ಕಿಂಗಡಮ್ ನಲ್ಲಿ ಸಂಘಟನೆ ಮಾಡಲಾಗುತ್ತಿದೆ ಎಂದು ಅಧ್ಯಕ್ಷ ಅಶೋಕ ಹಾರನಹಳ್ಳಿ ವಿವರಿಸಿದರು.
ಶಾಸಕ ಸಿ.ಕೆ.ರಾಮಮೂರ್ತಿ ಮಾತನಾಡಿ, ನನ್ನ ಮಾರ್ಗದರ್ಶಕರಾದ ಲಕ್ಷ್ಮಿಕಾಂತ್ ಕಳೆದ 30ವರ್ಷದಗಳಿಂದ ಬ್ರಾಹ್ಮಣ ಸಮುದಾಯ ಸಂಘಟನೆಯಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಬ್ರಾಹ್ಮಣ ಜನಾಂಗ ಎಲ್ಲ ಜಾತಿ ಸಮುದಾಯದ ಪ್ರೀತಿಗಳಿಸಿದ್ದಾರೆ. ಸರ್ವೆ ಜನಾಃ ಸುಖಿನೊ ಭವಂತು ಎಂಬAತೆ ಜೀವನ ಸಾಗಿಸುತ್ತಾರೆ ಎಂದು ಹೇಳಿದರು.
ವಿಪ್ರ ಮುಖಂಡ ಲಕ್ಷ್ಮೀಕಾಂತ್ ಮಾತನಾಡಿ, ವಿಶ್ವದ ಜನರ ಹಿತ ಬಯಸುವುದು ಮತ್ತು ಎಲ್ಲರ ಜೊತೆಯಲ್ಲಿ ಸ್ನೇಹಮಯಿ ಸಹೋದರತ್ವ ಬಾಳುವುದು ಬ್ರಾಹ್ಮಣ ಜನಾಂಗದವರ ಗುಣವಾಗಿದೆ. ಬ್ರಾಹ್ಮಣರು ಆರ್ಥಿಕವಾಗಿ ಹಿಂದುಳಿದಿದ್ದಾರೆ, ಅವರನ್ನ ಸಮಾಜದ ಮುಖ್ಯವಾಹಿನಿಗೆ ತರಲು ಸಂಘಟಿರಾಗಬೇಕು ಎಂದು ಹೇಳಿದರು.
ಹಿರಿಯ ಬ್ರಾಹ್ಮಣ ಮುಖಂಡ ಎಸ್.ರಘುನಾಥ್ ಮಾತನಾಡಿ, ಬ್ರಾಹ್ಮಣ ಸಮುದಾಯ ಸಂಘಟನೆಯಲ್ಲಿ ಆರ್.ಲಕ್ಷ್ಮಿಕಾಂತ್ ರವರು ಕೊಡುಗೆ ಅಪಾರ. ಬ್ರಾಹ್ಮಣರು ಶಿಕ್ಷಣ, ಆರೋಗ್ಯ ರಾಜಕೀಯ, ಕಲೆ ಸಾಹಿತ್ಯ ಎಲ್ಲ ರಂಗದಲ್ಲಿ ಮುಂದೆ ಬರಬೇಕಾದರೆ ಬ್ರಾಹ್ಮಣರು ಸಂಘಟಿತರಾದರೆ ಮಾತ್ರ ಸಾಧಿಸಬಹುದು.ಮುಂದಿನ ತಿಂಗಳು ರಾಜ್ಯ ಮಟ್ಟದ ಬ್ರಾಹ್ಮಣ ಸಮಾಜ ಸಮಾವೇಶ ನಡೆಯುತ್ತಿದೆ ಎಲ್ಲರು ಭಾಗವಹಿಸಿಬೇಕು ಎಂದರು,
ಚಲನಚಿತ್ರ ನಟ ಶ್ರೀನಾಥ್ ಮಾತನಾಡಿ, ಬ್ರಾಹ್ಮಣ ಸಮಾಜದ ಲಕ್ಷ್ಮಿಕಾಂತ್ ಎಲ್ಲರ ಪ್ರೀತಿಪಾತ್ರರಾಗಿದ್ದಾರೆ .ನಗುನಗುತ ಎಲ್ಲ ಕೆಲಸವನ್ನು ಮಾಡುತ್ತಿದ್ದರು. ಸಮಾಜದ ಎಲ್ಲರ ಏಳಿಗೆಗಾಗಿ ಶ್ರಮಿಸಿದ್ದಾರೆ ಎಂದರು. ಮುಡಾ ಮಾಜಿ ಅಧ್ಯಕ್ಷ ಹೆಚ್.ವಿ.ರಾಜೀವ್, ವಿಪ್ರ ಸಮಾಜದ ಮುಖಂಡರುಗಳಾದ ಎಂ.ಆರ್.ವಿ.ಪ್ರಸಾದ್, ನರಸಿಂಹನ್,ಡಿ.ಟಿ..ಪ್ರಕಾಶ್, ಬಿ.ಎಸ್.ರವಿಶಂಕರ್, ಯು.ವಿ.ಶ್ರೀನಿವಾಸ್ ಮೂರ್ತಿ, ಬಲ್ಲಾಳ್ ರಾವ್, ಕೃಷ್ಣಾನಂದ , ಕೆ.ಪಿ.ಪುತ್ತುರಾಯ, ಹೆಚ್.ಸಿ.ಕೃಷ್ಣ, ಎಂ.ಆರ್.ಶಿವಶAಕರ್, ಪ್ರಹ್ಲಾದ್ ಬಾಬು, ನಾಗರಾಜ್, ಮಲ್ಲಾರ್ ರಾವ್, ರಘುರಾವ್ ವಾಜಪೇಯಿ, ಜಿ.ಕೆ.ಕುಲಕರ್ಣಿ, ಜೆ.ಹೆಚ್.ಆನಿಲ್ ಕುಮಾರ್ ,ರಾಮ್ ಪ್ರಸಾದ್ ಹರಿಪ್ರಸಾದ್, ಪ್ರಮುಖರಾದ ನರಸಿಂಹ, ರಾಮಪ್ರಸಾದ್, ಡಾ.ಪಾವಗಡ ಪ್ರಕಾಶ್, ಅಸಗೋಡು ಜಯಸಿಂಹ, ಯು.ಬಿ.ಶ್ರೀನಿವಾಸ ಮೂರ್ತಿ, ವೇದ ಬ್ರಹ್ಮಶ್ರೀ ಭಾನುಪ್ರಕಾಶ್, ಡಿ.ವಿ.ಪ್ರಕಾಶ್, ಜೆಪಿ.ಪುತ್ಥರಾಯ್, ಎಂ.ಆರ್.ಶಿವ ಶಂಕರ್,, ಪ್ರಹ್ಲಾದ್ ಬಾಬು, ಎಂ.ನರಸಿAಹಣ್ಣ ಇದ್ದರು. ರಮ್ಯಾ ವಶಿಷ್ಠ ನಿರೂಪಿಸಿದರು