ಭದ್ರಾವತಿ : ಡೊನೇಷನ್ ಹಾವಳಿ ತಡೆಯಬೇಕು ಮತ್ತು ಸರ್ಕಾರಿ ಶಾಲೆಗಳನ್ನು ದುರಸ್ತಿಗೊಳಿಸಬೇಕು ಎಂದು ಆಗ್ರಹಿಸಿ ಸಾಮಾಜಿಕ ಹೋರಾಟಗಾರ ಶಶಿಕುಮಾರ್ ಗೌಡ ಇಂದು ಶಿಕ್ಷಣ ಇಲಾಖೆಯ ಉಪನಿರ್ದೇಶಕರಿಗೆ ಮನವಿ ಸಲ್ಲಿಸಿದ್ದಾರೆ.

ಜಿಲ್ಲೆಯಲ್ಲಿ ಖಾಸಗಿ ಶಾಲೆಗಳೇ ಹೆಚ್ಚಿವೆ. ಆದರೆ ಆ ಶಾಲೆಗಳೆಲ್ಲವೂ ಡೊನೇಷನ್, ಹೆಚ್ಚಾಗಿ ಪಡೆಯುತ್ತಿವೆ. ಪೋಷಕರು ಆತಂಕದಲ್ಲಿದ್ದಾರೆ. ಶಿಕ್ಷಣ ಕಾಯ್ದೆಯ ಪ್ರಕಾರ ರೋಸ್ಟರ್ ನಿಯಮವನ್ನು ಅನುಸರಿಸದೇ ಕೇವಲ ಹಣಕ್ಕಾಗಿ ನಿಂತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ಹಾಗೆಯೇ ಜಿಲ್ಲೆಯಲ್ಲಿ ಸರ್ಕಾರಿ ಶಾಲೆಗಳು ದುರಸ್ತಿಯಲ್ಲಿವೆ. ಅನೇಕ ಶಾಲೆಗಳಲ್ಲಿ ಶೌಚಾಲಯಗಳೇ ಇಲ್ಲ, ನೀರಿನ ವ್ಯವಸ್ಥೆ ಇರುವುದಿಲ್ಲ, ಆದ್ದರಿಂದ ಸರ್ಕಾರಿ ಶಾಲೆಗಳಿಗೆ ಮೂಲಭೂತ ಸೌಲಭ್ಯ ಒದಗಿಸಬೇಕು. ಮತ್ತು ಸರ್ಕಾರದ ಆದೇಶವನ್ನು ಖಾಸಗಿ ಶಾಲೆಗಳು ಪಾಲಿಸಬೇಕು. ಅಧಿಕ ಶುಲ್ಕ ವಿಧಿಸುವ ಖಾಸಗಿ ಶಾಲೆಗಳ ಮಾನ್ಯತೆಯನ್ನು ರದ್ದುಪಡಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.ಈ ಸಂದರ್ಭದಲ್ಲಿ ಅರುಣ್ ಕಾನಹಳ್ಳಿ, ಗಣೇಶ್ ಬೆಳ್ಳಿ ಇದ್ದರು.

….

Share.
Leave A Reply

Exit mobile version