ಮುಖ್ಯಾಂಶಗಳು
ನಾಡಿನ ಹಿರಿಯ ದಕ್ಷ ಮತ್ತು ಕ್ರಿಯಾಶೀಲ ಪೊಲೀಸ್ ಅಧಿಕಾರಿ ಡಾ.ಬಿ.ಆರ್. ರವಿಕಾಂತೇಗೌಡ ಪ್ರಸಿದ್ಧ ಕತೆಗಾರರಾದ ಡಾ. ಬೆಸಗರಹಳ್ಳಿ ರಾಮಣ್ಣ ಅವರ ಸುಪುತ್ರರು. ಬಿ.ಇ., ಎಂ.ಟೆಕ್. ಪದವೀಧರರು. ಕರ್ನಾಟಕ ಲೋಕಸೇವಾ ಆಯೋಗ ನಡೆಸುವ ಕೆ.ಎ.ಎಸ್. ಪರೀಕ್ಷೆಯನ್ನು ‘ಕನ್ನಡ ಮಾಧ್ಯಮ’ದಲ್ಲಿ ಬರೆದು ಆರನೇ ರ್ಯಾಂಕ್ ಪಡೆದು, ಡಿವೈ.ಎಸ್.ಪಿ.ಯಾಗಿ ಆಯ್ಕೆಯಾದವರು ಎಂಬುದು ಗಮನಾರ್ಹ. ತಮ್ಮ ವೃತ್ತಿ ಬದ್ಧತೆ ಮತ್ತು ಶುದ್ಧತೆಗಾಗಿ ಗಮನಸೆಳೆದು, 2013 ರಲ್ಲಿ ಐ.ಪಿ.ಎಸ್. ಹುದ್ದೆಗೆ ಪದನ್ನೋತಿ ಹೊಂದಿದರು. ಬೆಂಗಳೂರು ನಗರ ಅಪರಾಧ ಕೇಂದ್ರ ವಿಭಾಗ, ಈಶಾನ್ಯ ಮತ್ತು ಕೇಂದ್ರ ವಿಭಾಗ, ಮೈಸೂರು ನಗರ, ಹುಬ್ಬಳ್ಳಿ-ಧಾರವಾಡ ಮಹಾನಗರ ಡಿಸಿಪಿಯಾಗಿ, ರಾಜ್ಯ ಗುಪ್ತವಾರ್ತೆ, ಬೆಳಗಾವಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಎಸ್.ಪಿ.ಯಾಗಿ, ಅಗ್ನಿಶಾಮಕ ವಿಭಾಗದ ಡಿ.ಐ.ಜಿ.ಪಿ.ಯಾಗಿ, ಎಸ್.ಐ.ಟಿ. ಮುಖ್ಯಸ್ಥರಾಗಿ ಹಾಗೂ ಬೆಂಗಳೂರು ನಗರ ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತರಾಗಿ ಅಪಾರ ವೃತ್ತಿ ಅನುಭವ ಹೊಂದಿರುವ ‘ಡೈನಮಿಕ್ ಪೊಲೀಸ್ ಅಧಿಕಾರಿ’. ‘ಜನಸ್ನೇಹಿ ಆಡಳಿತ’ ರವಿಕಾಂತೇಗೌಡ ಅವರ ಕಾರ್ಯ ವೈಖರಿಯ ಪರಿ. ಕರ್ನಾಟಕದ ಇತಿಹಾಸದಲ್ಲಿ ಆಂಗ್ಲಮಯವಾಗಿದ್ದ ಪೊಲೀಸ್ ಪೆರೇಡ್ ಆದೇಶಗಳನ್ನು ‘ಕನ್ನಡೀಕರಣ’ಗೊಳಿಸಿದ ಅಗ್ಗಳಿಕೆ ಹೊಂದಿರುವ ಗೌಡರ ‘ಕನ್ನಡ ಪ್ರೀತಿ’ ಇಂದಿನ ಸರ್ಕಾರಿ ಅಧಿಕಾರಿಗಳು ಮತ್ತು ನೌಕರರಿಗೊಂದು ಮಾದರಿ. ಅವರ ಸಂಪೂರ್ಣ ಡೀಟೆಲ್ಸ್ ನಿಮ್ಮ ಮುಂದೆ♥
ದಾವಣಗೆರೆ : ಪೂರ್ವ ವಲಯ ಪೊಲೀಸ್ ಮಹಾ ನಿರೀಕ್ಷಕರಾಗಿ ಡಾ.ಬಿ ಆರ್ ರವಿಕಾಂತೇಗೌಡ ದಾವಣಗೆರೆ ಕಚೇರಿಯಲ್ಲಿ ಅಧಿಕಾರ ಸ್ವೀಕರಿಸಿದರು. ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಬೆಸಗರಹಳ್ಳಿಯಲ್ಲಿ ಆ.8,1967ರಲ್ಲಿ ಜನಿಸಿದರು. ಪೊಲೀಸ್ ವಲಯದಲ್ಲಿ ತಮ್ಮದೇ ಆದ ಹೆಸರನ್ನು ಮಾಡಿದ್ದು ಜನಮನ್ನಣೆಗಳಿಸಿದ್ದಾರೆ.
ಪ್ರಾಥಮಿಕ, ಮಾಧ್ಯಮಿಕ, ಪ್ರೌಢ ಶಿಕ್ಷಣ-ಕನ್ನಡ ಮಾಧ್ಯಮದಲ್ಲಿ ವಿವಿಧ ಜಿಲ್ಲೆಗಳ ಗ್ರಾಮೀಣ ಪ್ರದೇಶಗಳಲ್ಲಿ ಓದಿ, ಮಂಡ್ಯ ಪಿಇಎಸ್ ಕಾಲೇಜಿನಲ್ಲಿ ಬಿಇ ಮೆಕ್ಯಾನಿಕಲ್ನಲ್ಲಿ ಶಿಕ್ಷಣ ಪಡೆದರು. ಮೈಸೂರಿನ ಎನ್ಇಕಾಲೇಜಿನಲ್ಲಿ (ಪ್ರೋಡಕ್ಷನ್ ಎಂಜಿನಿಯರಿAಗ್ ಸಿಸ್ಟಮ್ ಟೆಕ್ನಾಲಜಿಯಲ್ಲಿ) ಎಂ.ಟೆಕ್ ಪಡೆದರು.
ಕನ್ನಡ ಮಾಧ್ಯಮದಲ್ಲಿ ಪರೀಕ್ಷೆ, ರಾಜ್ಯಕ್ಕೆ 6 ನೇ ರ್ಯಾಂಕ್
ರಾಷ್ಟçಕವಿ ಕುವೆಂಪು ಅಭಿಮಾನಿಯಾಗಿರುವ ಡಾ.ಬಿ ಆರ್ ರವಿಕಾಂತೇಗೌಡ ಅಪ್ಪm ಕನ್ನಡಿಗರು. ಚಿಕ್ಕದಿನಿಂದಲೇ ಸಾಹಿತ್ಯವಲಯದಲ್ಲಿ ಗುರುತಿಸಿಕೊಂಡವರು. ಹೀಗಾಗಿ ಕರ್ನಾಟಕ ಲೋಕಸೇವಾ ಆಯೋಗ ನಡೆಸಿದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಪರೀಕ್ಷೆ ಬರೆದು ರಾಜ್ಯಕ್ಕೆ 6ನೇ ರ್ಯಾಂಕ್ ಪಡೆದು ಡಿಎಸ್ಪಿ. ಹುದ್ದೆಗೆ ಏರಿದರು.
ತದನಂತರ ಐಪಿಎಸ್ ಹುದ್ದೆಗೆ ಬಡ್ತಿ ಪಡೆದರು. “ಕುವೆಂಪು ಸಾಂಸ್ಕೃತಿಕ ವಿದ್ಯಮಾನ : ಒಂದು ಅಧ್ಯಯನ” ಎಂಬ ಸಂಶೋಧನಾ ಮಹಾಪ್ರಬಂಧಕ್ಕಾಗಿ ಹಂಪಿ ಕನ್ನಡ ವಿಶ್ವವಿದ್ಯಾಲಯವು 2015ರಲ್ಲಿ ಡಿ.ಲಿಟ್. ಪದವಿ ಪ್ರದಾನ ಮಾಡಿರುವುದು ವಿಶೇಷ. ಇನ್ನು ಸಾಹಿತ್ಯ ಮತ್ತು ಸೃಜನಶೀಲ ಕ್ರಿಯೆಗಳಲ್ಲಿ ಆಸಕ್ತಿ, ಸಂಸ್ಕೃತಿ ಅಧ್ಯಯನದಲ್ಲಿ ವಿಶೇಷ ಆಸಕ್ತಿ. ಅನೇಕ ಕವನಗಳು, ಲೇಖನಗಳು, ಲಲಿತ ಪ್ರಬಂಧಗಳು ಪ್ರಕಟವಾಗಿದೆ.
ಉಪನ್ಯಾಸಕರಾಗಿ ಸೇವೆ
ಡಾ.ಬಿ ಆರ್ ರವಿಕಾಂತೇಗೌಡರು ಉಪನ್ಯಾಸಕರಾಗಿಯೂ ಸೇವೆ ಸಲ್ಲಿಸಿದ್ದು, ಪೊಲೀಸ್ ಇಲಾಖೆಗೆ ಸೇರುವ ಮುನ್ನ ಬೆಂಗಳೂರು ಇನ್ಸಟಿಟ್ಯೂಟ್ ಆಫ್ ಟೆಕ್ನಾಲಜಿ ದಯಾನಂದ ಸಾಗರ ಎಂಜಿನಿಯರಿAಗ್ ಕಾಲೇಜು, ಬೆಂಗಳೂರು ವಿವಿಯಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದಾರೆ.
ಎಲ್ಲೆಲ್ಲಿ ಸೇವೆ
ಮಾ.5, 1997ರಲ್ಲಿ ಪೊಲೀಸ್ ಇಲಾಖೆಗೆ ಸೇರಿದ ರವಿಕಾಂತೇಗೌಡರು ನಂಜನಗೂಡು ಉಪವಿಭಾಗ (ಡಿಎಸ್ಪಿ), ಕಾನೂನು ಸುವ್ಯವಸ್ಥೆ ಹುಬ್ಬಳ್ಳಿ-ಧಾರವಾಡ ಡಿಸಿಪಿ, . ಡಿ.ಸಿ.ಪಿ., ಅಪರಾಧ, ಬೆಂಗಳೂರು ನಗರ. ಎಸ್.ಪಿ.. ರಾಜ್ಯ ಗುಪ್ತ ವಾರ್ತೆ, ಬೆಂಗಳೂರು. ಡಿ.ಸಿ.ಪಿ., ಕಾನೂನು ಮತ್ತು ಸುವ್ಯವಸ್ಥೆ, ಮೈಸೂರು ನಗರ, ಡಿ.ಸಿ.ಪಿ.. ಈಶಾನ್ಯ ವಿಭಾಗ, ಬೆಂಗಳೂರು ನಗರ. ಡಿ.ಸಿ.ಪಿ., ಕೇಂದ್ರ ವಿಭಾಗ, ಬೆಂಗಳೂರು ನಗರ, ಎಸ್.ಪಿ. ಬೆಳಗಾವಿ ಜಿಲ್ಲೆ, ಎಸ್.ಪಿ ದ.ಕ ಜಿಲ್ಲೆ, ಡಿ.ಐ.ಜಿ.ಪಿ, ಕರ್ನಾಟಕ ಆಗ್ನಿಶಾಮಕ ಮತ್ತು ತುರ್ತು ಸೇವೆಗಳು, ಬೆಂಗಳೂರು, ಡಿ.ಐ.ಜಿ.ಪಿ ಮತ್ತು ಜಂಟಿ ಪೊಲೀಸ್ ಆಯುಕ್ತರು(ಅಪರಾಧ), ಬೆಂಗಳೂರು, ಡಿ.ಐ.ಜಿ.ಪಿ ಮತ್ತು ಸಂಚಾರಿ ಆಯುಕ್ತರು, ಬೆಂಗಳೂರು ನಗರ. ಸಿಐಡಿ ಡಿಐಜಿಪಿ ಬೆಂಗಳೂರು, ಐ.ಜಿ.ಪಿ ಕೇಂದ್ರ ವಲಯ, ಬೆಂಗಳೂರು.ಐ.ಜಿ.ಪಿ, ಕೇಂದ್ರಸ್ಥಾನ-1 ಪೊಲೀಸ್ ಪ್ರಧಾನ ಕಛೇರಿ, ಬೆಂಗಳೂರಿನಲ್ಲಿ ಸೇವೆ ಸಲ್ಲಿಸಿದರು.
ಸಂದ ಪುರಸ್ಕಾರಗಳು
2002ರ ಮುಖ್ಯಮಂತ್ರಿಗಳ ಚಿನ್ನದ ಪದಕ, 2007ರ ಮುಖ್ಯಮಂತ್ರಿಗಳ ಚಿನ್ನದ ಪದಕ. ಇವರು 2016ರಲ್ಲಿ ರೂಪಿಸಿದ ‘ಹೊಸ ಗಸ್ತು ವ್ಯವಸ್ಥೆ’ ಯು ರಾಷ್ಟ್ರದ ಪೊಲೀಸ್ ಸಂಶೋಧನೆ ಮತ್ತು ಅಭಿವೃದ್ಧಿ ಘಟಕದ ಮೆಚ್ಚುಗೆಗೆ ಪಾತ್ರವಾಗಿದ್ದು, 2019ರಲ್ಲಿ ರಾಷ್ಟ್ರಮಟ್ಟದ ಡಿಜಿಪಿರವರ ಪದಕಕ್ಕೆ ಪಾತ್ರರಾಗಿದ್ದಾರೆ. ಗಣರಾಜ್ಯೋತ್ಸವ-2022ರ ಸಂದರ್ಭದಲ್ಲಿ ಗೌರವಾನ್ವಿತ ಸೇವೆಗಾಗಿ ರಾಷ್ಟ್ರಪತಿ ಪೊಲೀಸ್ ಪ್ರಶಸ್ತಿಯನ್ನು ನೀಡಲಾಗಿದೆ.
ಸೇವಾ ಅವಧಿಯಲ್ಲಿನ ಕೆಲವು ಗಮನಾರ್ಹ ಕಾರ್ಯಗಳು
ಹುಬ್ಬಳ್ಳಿಯ ಕುಖ್ಯಾತ ಅಕ್ರಮ ಮದ್ಯ ದಂಧೆಯನ್ನು ಮಟ್ಟಹಾಕಿದ್ದು, ಈ ಸಾಧನೆಗಳ ಬಗ್ಗೆ ರಾಜ್ಯ ಸರ್ಕಾರ ಪ್ರಶಂಸೆಯನ್ನು ವ್ಯಕ್ತಪಡಿಸಿತ್ತು. ಇನ್ನು ಹುಬ್ಬಳ್ಳಿಯ ಕೋಮುಗಲಭೆಗಳನ್ನು ಹತ್ತಿಕ್ಕಿ ಸೌಹಾರ್ದ ವಾತಾವರಣ ನಿರ್ಮಾಣಕ್ಕಾಗಿ ಪೊಲೀಸ್ ನಾಗರಿಕರ ವೇದಿಕೆಯನ್ನು ರಚಿಸಿ ಯಶಸ್ವಿ ಶಾಂತಿ ಸ್ಥಾಪನೆ ಮಾಡಿತ್ತು.
ಡಿಸಿಪಿ, ಬೆಂಗಳೂರು ಅಪರಾಧ ವಿಭಾಗದಲ್ಲಿದ್ದಾಗ ಕುಖ್ಯಾತ ಭಯೋತ್ಪಾದಕನನ್ನು ಬಂಧಿಸಿದ್ದು ಇವರ ಕಾರ್ಯಕ್ಕೆ ಹಿಡಿದ ಕನ್ನಡಿ. ಎಕೆ 56, 450 ಗುಂಡು, 10 ಗ್ರನೇಡ್ ವಶಪಡಿಸಿಕೊಂಡು ಆಗಬಹುದಾಗಿದ್ದ ಬಹುದೊಡ್ಡ ಅನಾಹುತವನ್ನು ತಡೆಗಟ್ಟಿದ್ದಾರೆ. ಬೆಂಗಳೂರಿನಲ್ಲಿ ರೌಡಿಗಳ ವಿರುದ್ಧ ಸತತ ಕಾರ್ಯಾಚರಣೆ ನಡೆಸಿ ನಿಷ್ಕ್ರಿಯಗೊಳಿಸಿದ್ದಾರೆ.
ಮೈಸೂರಿನ ಕ್ಯಾತಮಾರನಹಳ್ಳಿಯಲ್ಲಿ ನಡೆದ ಕೋಮುಗಲಭೆಗಳ ವೇಳೆ ವಿಶೇಷ ಕರ್ತವ್ಯಕ್ಕೆ ತೆರಳಿ ಕೋಮುಗಲಭೆಗಳನ್ನು ಮಟ್ಟಹಾಕಿ ಯಶಸ್ವಿ ಶಾಂತಿ ಸ್ಥಾಪನೆಗೆ ಕಾರಣವಾಗಿದ್ದಾರೆ.
ಬೆಳಗಾವಿ ಜಿಲ್ಲೆಯಲ್ಲಿನ ಗಮನಾರ್ಹ ಸಾಧನೆಗಳು
ತಳಹಂತದ ಪೊಲೀಸ್ ಸಿಬ್ಬಂದಿಗಳನ್ನು ಸಬಲೀಕರಣಗೊಳಿಸುವ ಮತ್ತು ಜನಸ್ನೇಹಿ ಪೊಲೀಸ್ ವ್ಯವಸ್ಥೆಯನ್ನು ಸಾಕಾರಗೊಳಿಸುವ ದೃಷ್ಠಿಯಿಂದ ಉಪಗಸ್ತು ವ್ಯವಸ್ಥೆಯನ್ನು ಜಿಲ್ಲೆಯಲ್ಲಿ ಜಾರಿಗೆ ತಂದರು. ಅದರ ಆಧಾರದ ಮೇಲೆ ಸುಧಾರಿತ ಗಸ್ತು ವ್ಯವಸ್ಥೆಯನ್ನು ಕರ್ನಾಟಕ ರಾಜ್ಯದ ಎಲ್ಲಾ ಪೊಲೀಸ್ ಠಾಣೆಗಳಲ್ಲಿ ಜಾರಿಗೊಳಿಸುವಲ್ಲಿ ಮಹತ್ತರ ಪಾತ್ರವನ್ನು ನಿರ್ವಹಿಸಿದ್ದಾರೆ. ಇವರ ಕಾರ್ಯವನ್ನು ಮುಖ್ಯ ಮಂತ್ರಿಗಳು, ಗೃಹ ಸಚಿವರು ಹಾಗೂ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು ಪ್ರಶಂಸಿಸಿದ್ದಾರೆ.
ಕನ್ನಡ ಕವಾಯತು ಇವರ ಅವಧಿಯಲ್ಲಿ ಮೊದಲು
ಈ ಮೊದಲು ಆಂಗ್ಲ ಭಾಷೆಯಲ್ಲಿ ಕವಾಯತು ಆದೇಶಗಳನ್ನು ನೀಡಲಾಗುತ್ತಿತ್ತು. 2016ರ ಕನ್ನಡ ರಾಜ್ಯೋತ್ಸವ ಸಂದರ್ಭದಲ್ಲಿ ಕರ್ನಾಟಕದಲ್ಲಿಯೇ ಮೊದಲ ಬಾರಿಗೆ ಕನ್ನಡದಲ್ಲಿ ಕವಾಯತು ಆದೇಶಗಳನ್ನು ರೂಪಿಸಿ ಜಾರಿಗೊಳಿಸಲಾಯಿತು. ಕನ್ನಡದ ಕವಾಯತು ಆದೇಶದ ಉಚ್ಚಾರಣೆ, ಶೈಲಿ ಮತ್ತು ಕವಾಯತಿಗೆ ಕನ್ನಡ ಭಾಷೆಯ ಕವಾಯತು ಆದೇಶಗಳು ಒಗ್ಗಿಕೊಂಡ ರೀತಿಯು ವ್ಯಾಪಕವಾಗಿ ಕನ್ನಡಿಗರಿಗೆ ಇಷ್ಟವಾಗಿತ್ತು.
ಅಧಿಕಾರ ಸ್ವೀಕಾರ ವೇಳೆ ಇದ್ದ ಪೊಲೀಸ್ ಸಿಬ್ಬಂದಿ
ಈ ಸಂಧರ್ಭದಲ್ಲಿ ಪೊಲೀಸ್ ಅಧೀಕ್ಷಕರಾದ ಶ್ರೀಮತಿ ಉಮಾ ಪ್ರಶಾಂತ್ ಐಪಿಎಸ್ ರವರು, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಶ್ರೀ ವಿಜಯಕುಮಾರ ಎಂ ಸಂತೋಷ , ಶ್ರೀ ಜಿ ಮಂಜುನಾಥ ರವರು ಚನ್ನಗಿರಿ ಸಹಾಯಕ ಪೊಲೀಸ್ ಅಧೀಕ್ಷಕರಾಧ ಶ್ರೀ ಸ್ಯಾಮ್ ವರ್ಗೀಸ್ ಐಪಿಎಸ್, ದಾವಣಗೆರೆ ಗ್ರಾಮಾಂತರ ಪೊಲೀಸ್ ಉಪಾಧೀಕ್ಷಕರಾದ ಶ್ರೀ ಬಿ ಎಸ್ ಬಸವರಾಜ್, ದಾವಣಗೆರೆ ನಗರ ಪೊಲೀಸ್ ಉಪಾಧೀಕ್ಷಕರಾದ ಶ್ರೀ ಶರಣ ಬಸವೇಶ್ವರ ಬೀಮರಾವ್, ಡಿಎಆರ್ ಉಪಾಧೀಕ್ಷಕರಾದ ಪಿ ಬಿ ಪ್ರಕಾಶ್, ಐಜಿಪಿ ಕಛೇರಿಯ ಪೊಲೀಸ್ ಉಪಾಧೀಕ್ಷಕರಾದ ಶ್ರೀ ರುದ್ರೇಶ್ ಉಜ್ಜಿನಕೊಪ್ಪ, ಬೆರಳು ಮುದ್ರೆ ಘಟಕದ ಪೊಲೀಸ್ ಉಪಾಧೀಕ್ಷಕರಾದ ರುದ್ರೇಶ್ ರವರುಗಳು ಹಾಗೂ ಪೊಲೀಸ್ ನಿರೀಕ್ಷಕರಾದ ಲಕ್ಷ್ಮಣ್ ನಾಯ್ಕ್, ಶ್ರೀ ನಲವಾಗಲು ಮಂಜುನಾಥ, ತೇಜೋವತಿ, ಶ್ರೀ ಸೋಮಶೇಖರ್ ರವರು ಉಪಸ್ಥಿತರಿದ್ದರು.
—