ದಾವಣಗೆರೆ.ಮೇ.೮; ದಾವಣಗೆರೆ ಬಿಜೆಪಿ ಅಭ್ಯರ್ಥಿ ಗಾಯಿತ್ರಿ ಸಿದ್ದೇಶ್ವರ ಮತದಾನ ಮಾಡುವ ವೇಳೆ ಸಂಸದ ಜಿ.ಎಂ ಸಿದ್ದೇಶ್ವರ್ ಇವಿಎಂ ಬಳಿ ಇದ್ದು ಕಾನೂನು ಉಲ್ಲಂಘನೆ ಮಾಡಿದ್ದಾರೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಿ.ಬಸವರಾಜ್ ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಮತದಾನದಲ್ಲಿ ಯಾವುದೇ ವ್ಯಕ್ತಿ ಗೌಪ್ಯತೆ ಕಾಪಾಡಿಕೊಳ್ಳುವುದು ಅವರ ಹಕ್ಕು ಹಾಗೂ ಮತದಾನದ ಗೌಪ್ಯತೆಗೆ ಯಾರು ಕೂಡ ಧಕ್ಕೆ ತರಬಾರದು ಆದರೆ ಸಂಸದರು ತಮ್ಮ ಪತ್ನಿ ಮತದಾನ ಮಾಡುವ ವೇಳೆ ತಾವೂ ಕೂಡ ಧಾವಿಸಿ ಮತದಾನ ಗೌಪ್ಯತೆ ಉಲ್ಲಂಘನೆ ಮಾಡಿದ್ದಾರೆ ಇದು ಕಾನೂನು ಉಲ್ಲಂಘನೆ ಎಂದರು.ಈಗಾಗಲೇ ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿ ಮಹಾನಗರ ಪಾಲಿಕೆ ಆಯುಕ್ತರಾದ ರೇಣುಕಾ ಅವರು ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ತೋಟಗಾರಿಕೆ ಇಲಾಖೆ ಸಹಾಯ ನಿರ್ದೇಶಕ ರಾಜೇಶ್ ಕುಮಾರ ಅವರಿಂದ ವಿದ್ಯಾನಗರ ಠಾಣೆ ದೂರು ಸಲ್ಲಿಸಲಾಗಿದೆ. ಕೇವಲ ದೂರು ನೀಡಿದಲಾಗಿದೆ.ಆದರೆ ಯಾವುದೇ ಪ್ರಕರಣದಲ್ಲಿ ದೂರು ನೀಡಿದರೆ ಅದು ಎಫ್ ಐಆರ್ ದಾಖಲಾಗಬೇಕು. ಆದರೆ ಇಲ್ಲಿ ಅಧಿಕಾರಿ ದೂರು ಮಾತ್ರ ನೀಡಲಾಗಿದೆ. ಜಿ.ಎಂ.ಸಿದ್ದೇಶ್ವರ ವಿರುದ್ಧ ಎಫ್ ಐಆರ್ ದಾಖಲಾಗಬೇಕು. ಅವರ ವಿರುದ್ಧ ಕಾನೂನು ಕ್ರಮ ಆಗಬೇಕು ಎಂದು ಆಗ್ರಹಿಸಿದರು. ಸಂಸದರೇ ಪತ್ನಿಯ ಮತದಾನದಲ್ಲಿ ಭಾಗಿ ಆಗಿದ್ದು ಕಾನೂನು ಉಲ್ಲಂಘನೆ ಆಗಿದೆ. ಜಿಲ್ಲಾಡಳಿತ ಸೂಕ್ತ ಕ್ರಮಮ ಕೈಗೊಳ್ಳಬೇಕು ಎಂದರು.ಸುದ್ದಿಗೋಷ್ಟಿಯಲ್ಲಿ ಪಾಲಿಕೆ ಸದಸ್ಯ ಗಡಿಗುಡಾಳು ಮಂಜುನಾಥ್, ಕೆ.ಎಂ.ಮಂಜುನಾಥ್, ಎಂ.ಕೆ.ಲಿಯಾಖತ್ ಅಲಿ, ಬಿ.ಹೆಚ್.ಉದಯ್ ಕುಮಾರ್, ಬಿ.ಶಿವಕುಮಾರ್, ಬಿ.ಎಸ್.ಸುರೇಶ್, ಮುಬಾರಕ್ ಇತರರು ಇದ್ದರು.